ಸುದ್ದಿಗಳು

ಪುನೀತ್ ಬಾಡಿಗಾರ್ಡ್ ವಿರುದ್ಧ ರೊಚ್ಚಿಗೆದ್ದ ಅಭಿಮಾನಿಗಳು …!!!!

ಬೆಂಗಳೂರು, ಮಾ.20:

ಸ್ಟಾರ್ ನಟರು ಅಂದ ಮೇಲೆ ಅವರಿಗೆ ಬಾಡಿಗಾರ್ಡ್ ತುಂಬಾನೇ ಮುಖ್ಯವಾಗಿರುತ್ತದೆ. ಯಾಕೆಂದರೆ ತಮ್ಮ ನೆಚ್ಚಿನ ನಟನನ್ನು ನೋಡಬೇಕು ಮಾತನಾಡಿಸಬೇಕೆಂಬ ಹಂಬಲ ಅಭಿಮಾನ ಅಭಿಮಾನಿಗಳಲ್ಲಿ ಸಾಮಾನ್ಯ. ಹಾಗಾಗಿ ಅಭಿಮಾನ ಹೆಚ್ಚಾದಾಗ ಮೇಲೆ ಬೀಳೋದು ಅವರನ್ನು ಮುಂದೆ ಹೋಗಲೂ ಬಿಡದೇ ಸುತ್ತ ಇರೋದು ಹೀಗೆ ಕಾಮನ್ ಆಗಿ ಬಿಟ್ಟಿವೆ. ಹಾಗಾಗಿ ಸ್ಟಾರ್ ನಟರು ಬಾಡಿಗಾರ್ಡ್‌ ಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ ಇದೀಗ ನಟ ಪುನೀತ್ ಬಾಡಿಗಾರ್ಡ್ ಅಭಿಮಾನಿಗಳಿಗೆ ಅವಮಾನ ಮಾಡಿದ್ದಾರಂತೆ.

ಪುನೀತ್ ಬಾಡಿಗಾರ್ಡ್ಸ್ ಮೇಲೆ ಆರೋಪ

ಹೌದು, ಪುನೀತ್ ರಾಜ್‌ ಕುಮಾರ್ ಬಾಡಿಗಾರ್ಡ್ ಅಭಿಮಾನಿಗಳಿಗೆ ಅವಮಾನ ಮಾಡಿದ್ದಾರಂತೆ. ಅಷ್ಟೇ ಅಲ್ಲ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಇನ್ನೂ ಪುನೀತ್ ಅಭಿಮಾನಿಗಳ ಮೇಲೆ ಕೈ ಕೂಡ ಮಾಡಿದ್ದಾರಂತೆ. ಹಾಗಾಗಿ ಅಭಿಮಾನಿಗಳು ರೊಚ್ಚಿಗೆದ್ದು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ಈ ಬಗ್ಗೆ ಫೇಸ್ ಬುಕ್‌ನಲ್ಲಿ ಪೋಸ್ಟ್ ವೊಂದದನ್ನು ಹಾಕಿರುವ ಅಭಿಮಾನಿಗಳು ಈ ಬಗ್ಗೆ ಸವಿವರವಾಗಿ ತಿಳಿಸಿದ್ದಾರೆ.

ಅಭಿಮಾನಿಯಿಂದ ಫೇಸ್ ಬುಕ್ ಪೋಸ್ಟ್

ನಮ್ಮ ಪ್ರೀತಿಯ ಅಪ್ಪುಅವರ ಬಾಡಿಗಾರ್ಡ್ಸ್ ರವ್ರಿಗೆ ಈ ಮೂಲಕ ಹೇಳೊಕೆ ಇಷ್ಟ ಪಡೋದು ಎನಂದ್ರೆ ಅಭಿಮಾನಿಗಳ ಮೇಲೆ ಕೈ ಮಾಡೋ ಅಧಿಕಾರ ನಿಮ್ಗೆ ಯಾರು ಕೊಟ್ಟಿಲ್ಲ… ಇನ್ನೊಂದ್ ಸಲ ಇದು ರಿಪೀಟ್ ಅದ್ರೆ ಅಪ್ಪು ಬಾಸ್ ಸುತ್ತ ಮುತ್ತ ನೀವು ನಿಂತು ಕೊಳ್ಳೋ ಅವಕಾಶ ನಾವು ಕೊಡೋದಿಲ್ಲ.. ಅಭಿಮಾನಿಗಳಿಗೆ ಮರ್ಯಾದೆ ಕೊಡೋದನ್ನ ಕಲಿತುಕೊಳ್ಳು, ನಿಮ್ಮಂತವರಿಂದ ಪುನೀತ್ ಸಾರ್ ಹೆಸರಿಗೆ ಅವರ ಸರಳತೆಗೆ ಮಸಿ ಬಳಿಯುವ ಕೆಲಸ ಮಾಡಬೇಡಿ, ನಾವು ಫ್ಯಾನ್ಸ್ ಇರೋ ಬರೋ ಕೆಲಸ ಎಲ್ಲಾ ಬಿಟ್ಟು ನೂರಾರು ಕಿ.ಮಿ ದೂರದಿಂದ ಬರೋದು ನಮ್ಮ ಆರಾಧ್ಯ ದೈವ ದೊಡ್ಮನೆ ದೈವನ ನೋಡೋಕೆ, ಅದ್ರೆ ಅಲ್ಲಿ ನಿಮ್ಮಂಥ ದೆವ್ವಗಳ ಕಾಟದಿಂದ ಆ ಸ್ಥಳಕ್ಕೆ ಬರೋಕೆ ನಮಗೆ ಬೇಸರ ಆಗ್ತಿದೆ. ಇನ್ಮೇಲಾದ್ರೂ ಒಳ್ಳೆಯವ್ರಾಗಿ, ದಿನಾಗ್ಲೂ ಅಪ್ಪು ಬಾಸ್ ಜೊತೆ ಇದ್ರೆ ಸಾಕಾಗಲ್ಲ, ಅವ್ರ ಸ್ವಭಾವನೂ ಸ್ವಲ್ಪ ಅಳವಡಿಸಿಕೊಳ್ಳಿ..

ವಂದನೆಗಳೊಂದಿಗೆ,

ಅಭಿಮಾನಿಗಳ ಪರವಾಗಿ..

ಟ್ರಾಲ್ ಸ್ಯಾಂಡಲ್ ವುಡ್

ಸುಮಲತಾ ಪರ ಪ್ರಚಾರಕ್ಕೆ ನಿಂತ ನಟರಿಗೆ ಶಾಸಕನ ಖಡಕ್ ಎಚ್ಚರಿಕೆ

#puneethrajkumarbodyguard #sandalwood #puneethrajkumartwitter #balkaninews

Tags