ಸುದ್ದಿಗಳು

ವಿಶ್ವ ಅಪ್ಪಂದಿರ ದಿನಾಚರಣೆಗೆ ಮಗಳ ಫೋಟೋ ಹಂಚಿಕೊಂಡ ತಾರೆಯರು!!

ನಿನ್ನೆ ‘ವಿಶ್ವ ಅಪ್ಪಂದಿರ ದಿನ’.. ಸಾಮಾನ್ಯರಿಂದ ಹಿಡಿದು ಸೆಲೆಬ್ರೆಟಿಗಳವರೆಗೂ ವಿಶ್ವ ಅಪ್ಪಂದಿರ ದಿನ’ ವನ್ನು ಆಚರಿಸಿದ್ದರು.. ರಾಧಿಕಾ ಪಂಡಿತ್ ಮತ್ತೊಂದು ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಪ್ಪ ಯಶ್​ ನ ಹೆಗಲನ್ನು ತಬ್ಬಿ ಮಲಗಿ ಪೋಸ್​ ಕೊಡುತ್ತಿರುವ ಮಗಳ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಅಪ್ಪಂದಿರ ದಿನಕ್ಕೆ ಶುಭಾಶಯ ಕೋರಿದ್ದಾರೆ…

ಈ ಸಣ್ಣ ಕೈಗಳು ಅವಳ ಮೊದಲ ಬಾರಿಗೆ ಸೂಪರ್ ಹೀರೋ ಕತ್ತನ್ನು ಸುತ್ತಲೂ ಹಿಡಿದುಕೊಂಡಿವೆ.. ನನಗೆ ತಿಳಿದಿದೆ, ಅವಳನ್ನು ಎಂದಿಗೂ  ಬೀಳದಂತೆ ನೋಡುತ್ತಾರೆ. ಎಲ್ಲ ಸೂಪರ್ ಹೀರೋ ಅಪ್ಪಂದಿರಿಗೆ ಶುಭಾಶಯಗಳು ಎಂದು ಬರೆದುಕೊಂಡಿದ್ದರು..

ಫೋಟೋದಲ್ಲಿ ರಾಧಿಕಾ ಮಗಳು ತನ್ನ ಎರಡೂ ಕೈಗಳಿಂದ ಅಪ್ಪ ಯಶ್ ಕತ್ತನ್ನು ಹಿಡಿದುಕೊಂಡು ಎದೆ ಮೇಲೆ ಮಲಗಿಕೊಂಡಿದ್ದಾಳೆ..

ಇನ್ನು ಅಜಯ್ ರಾವ್ ಕೂಡ ತಮ್ಮ ಮಗಳ ಮುದ್ದಿ ಫೋಟೋವನ್ನು ಹಂಚಿಕೊಂಡಿದ್ದಾರೆ.. “ಮುದ್ದಿನ ಮಗಳ ತಂದೆಯಾಗಿರುವುದಕ್ಕೆ ಹೆಮ್ಮೆಯಾಗುತ್ತಿದೆ”  ಎಂದು ಬರೆದುಕೊಂಡಿದ್ದಾರೆ.

ಸ್ಕೈ ಡೈವಿಂಗ್ ವೇಳೆ ಆಯತಪ್ಪಿ ಬಿದ್ದ ಜನಪ್ರಿಯ ನಟ ಶರ್ವಾನಂದ್…!!!

#ajayrao #radhikapandit #yash #yashmovies #yashbaby #fathersday

Tags