ಸುದ್ದಿಗಳು

ಮುಂಬೈನ ಸಿನಿಮಾ ವಿಮರ್ಶಕರ ಕೂಟದ(ಎಫ್.ಸಿ.ಜಿ) ಪ್ರಶಸ್ತಿಗೆ ನಾಮ ನಿರ್ದೇಶನಗೊಂಡ ಕನ್ನಡದ ಮೂರು ಸಿನಿಮಾಗಳು

ನಾತಿಚರಾಮಿ, ಅಮ್ಮಚ್ಚಿಯೆಂಬ ನೆನಪು, ಹಾಗೂ ಒಂದಲ್ಲಾ ಎರಡಲ್ಲಾ ಸಿನಿಮಾಗಳು

ಬೆಂಗಳೂರು.ಏ.13: ಕಳೆದ ವರ್ಷ ತೆರೆ ಕಂಡು ಪ್ರೇಕ್ಷಕರು ಹಾಗೂ ವಿಮರ್ಶಕರ ಮೆಚ್ಚಿಗೆಗೂ ಪಾತ್ರವಾಗಿದ್ದ ಕನ್ನಡದ ‘ನಾತಿಚರಾಮಿ’, ‘ಅಮ್ಮಚ್ಚಿಯೆಂಬ ನೆನಪು’, ಹಾಗೂ ‘ಒಂದಲ್ಲಾ ಎರಡಲ್ಲಾ’ ಸಿನಿಮಾಗಳು ಮುಂಬೈನ ಸಿನಿಮಾ ವಿಮರ್ಶಕರ ಕೂಟದ (ಎಫ್‌.ಸಿ.ಜಿ) ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿವೆ.

ಇನ್ನು ಇದೇ ಮೊದಲ ಬಾರಿಗೆ ಕನ್ನಡದ ಮೂರು ಚಿತ್ರಗಳು ಸ್ಪರ್ಧೆಯಲ್ಲಿರುವುದು ವಿಶೇಷವಾಗಿವೆ. ಈ ಪ್ರಶಸ್ತಿಯ ವಿಶೇಷ ಎಂದರೆ, ಸಿನಿಮಾ ತಯಾರಕರು ಪ್ರಶಸ್ತಿಗಾಗಿ ಅರ್ಜಿ ಹಾಕುವುದಿಲ್ಲ. ಭಾರತೀಯ ಸಿನಿಮಾ ರಂಗದ ಹೆಸರಾಂತ ಚಿತ್ರ ವಿಮರ್ಶೆಕರೇ ಸಿನಿಮಾಗಳ ಆಯ್ಕೆ ಮಾಡಿ ಕಳುಹಿಸುತ್ತಾರೆ. ಈ ಪ್ರಶಸ್ತಿಗೆ ಹೆಚ್ಚಿನ ಮನ್ನಣೆ ನೀಡಲಾಗುತ್ತದೆ.

ಹೌದು, ಈ ಬಾರಿ ಕನ್ನಡದಿಂದ ಮೂರು ಸಿನಿಮಾಗಳು ನಾಮನಿರ್ದೇಶನಗೊಂಡು ಅಚ್ಚರಿ ಮೂಡಿಸಿವೆ. ವಿಶೇವೆಂದರೆ, ಈ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಗೆಲುವು ಸಾಧಿಸಿ, ಪ್ರೇಕ್ಷಕರ ಮೆಚ್ಚುಗೆಯನ್ನೂ ಸಹ ಪಡೆದಿದ್ದವು.

ಇನ್ನು ‘ನಾತಿಚರಾಮಿ’ ಚಿತ್ರವನ್ನು ಮಂಸೋರೆ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಸಂಚಾರಿ ವಿಜಯ, ಶೃತಿ ಹರಿಹರನ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಇನ್ನು ‘ಅಮ್ಮಚ್ಚಿಯೆಂಬ ನೆನಪು’ ಚಿತ್ರಕ್ಕೆ ಚಂಪಾ ಶೆಟ್ಟಿ ನಿರ್ದೇಶಕಿಯಾಗಿದ್ದು, ಚಿತ್ರದಲ್ಲಿ ರಾಜ್ ಬಿ ಶೆಟ್ಟಿಯೊಂದಿಗೆ ಬಹುತೇಕ ಹೊಸ ಕಲಾವಿದರೇ ಕಾಣಿಸಿಕೊಂಡಿದ್ದರು.

‘ರಾಮಾ ರಾಮಾ ರೇ’ ಯಶಸ್ಸಿನ ಬಳಿಕ ಸತ್ಯ ಪ್ರಕಾಶ್ ‘ಒಂದಲ್ಲಾ ಎರಡಲ್ಲಾ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು , ಚಿತ್ರದಲ್ಲಿ ಬಹುತೇಕ ರಂಗ ಕಲಾವಿದರೇ ನಟಿಸಿದ್ದಾರೆ.

‘ಕವಲುದಾರಿ’ಯಲ್ಲಿ ಕಾಡುವ ವಿಲನ್ ಸುಲೀಲ್ ಕುಮಾರ್

#FCG, #film, #commity, #filmnews, #balkaninews #filmnews. #ondallayeradalla, #ammachchiyembanenapu,#nathicharami

Tags