ಸುದ್ದಿಗಳು

ಫೈಟರ್ ಗೆ ಜೊತೆಯಾದ ಲೇಖಾಚಂದ್ರ

ನೂತನ್ ಉಮೇಶ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ

ಬೆಂಗಳೂರು,ಸೆ.21: ‘ಕೃಷ್ಣನ್ ಮ್ಯಾರೇಜ್ ಸ್ಟೋರಿ’ ಮತ್ತು ‘ಅಸ್ತಿತ್ವ’ ಚಿತ್ರಗಳ ನಂತರ ನಿರ್ದೇಶಕ ನೂತನ್ ಉಮೇಶ್ ಇದೀಗ ‘ಫೈಟರ್’ ಚಿತ್ರವನ್ನು ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ನಾಯಕನಾಗಿರುವ ವಿನೋದ್ ಪ್ರಭಾಕರ್ ಅವರಿಗೆ ಜೋಡಿಯಾಗಿ ಲೇಖಾ ಚಂದ್ರ ಆಯ್ಕೆಯಾಗಿದ್ದಾರೆ.

ಲೇಖಾ ಚಂದ್ರ

ಇವರು ಈಗಾಗಲೇ ‘ಮಿಸ್ಟರ್ ಎಲ್ ಎಲ್ ಬಿ’,’ಸಂಜೀವ’,’ನಾನು ಹೇಮಂತ್ ಅವಳು ಸೇವಂತಿ’ , ಹಾಗೂ ‘ಸರ್ಕಾರ್’ ಚಿತ್ರಗಳಲ್ಲಿ ನಟಿಸಿದ್ದಾರೆ. ಇಷ್ಟು ದಿನ ನಾಯಕಿಯ ಆಯ್ಕೆಪ್ರಕ್ರಿಯೆ ನಡೆಸುತ್ತಿದ್ದ ಚಿತ್ರತಂಡಕ್ಕೆ ಅಂತಿಮವಾಗಿ ಲೇಖಾ ಆಯ್ಕೆಯಾಗಿದ್ದಾರೆ. ಈ ಚಿತ್ರದಲ್ಲಿ ಅವರು ಫೈಂಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

“ಫೈಟರ್’ನಲ್ಲಿ ನನಗೆ ಅವಕಾಶ ಸಿಕ್ಕಿದ್ದು, ಸಂತಸವಾಗಿದೆ. ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಯಿದೆ” ಎಂದು ಲೇಖಾ ಹೇಳುತ್ತಾರೆ.

ಮಾಸ್ ಫೀಲ್ ಇರುವ ಸಿನಿಮಾ

“ಇದೊಂದು ಮಾಸ್ ಫೀಲ್ ಇರುವ ಚಿತ್ರ. “ರೆಗ್ಯುಲರ್ ಆ್ಯಕ್ಷನ್ ಚಿತ್ರಗಳಿಗಿಂತ ಕೊಂಚ ವಿಭಿನ್ನವಾದಂತಹ ಸ್ಟಂಟ್ಸ್ ಈ ಚಿತ್ರದಲ್ಲಿರಲಿವೆ. ವಿನೋದ್ ಪ್ರಭಾಕರ್ ಅವರ ಆ್ಯಕ್ಷನ್ ನೋಡಿದವರಿಗೆ, ಈ ಚಿತ್ರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರಿಸ್ಕೀ ಸ್ಟಂಟ್ಸ್ ಇರುವಂತಹ ದೃಶ್ಯಗಳನ್ನು ನೋಡಬಹುದು” ಎಂದು ನಿರ್ದೇಶಕರು ಹೇಳುತ್ತಾರೆ.

ಈ ‘ಫೈಟರ್’ ಚಿತ್ರವು ಆಕಾಶ್ ಎಂಟರ್ ಪ್ರೈಸಸ್ ಬ್ಯಾನರ್ ನಲ್ಲಿ ಕಟಿಗೇನಹಳ್ಳಿ ಸೋಮಶೇಖರ್ ನಿರ್ಮಾಣ ಮಾಡುತ್ತಿದ್ದು, ಈ ಚಿತ್ರದಲ್ಲಿ ನಾಯಕ ಯಾವುದಕ್ಕೆ ಹೋರಾಡುತ್ತಾನೆ. ಸಮಾಜಕ್ಕಾ , ಪ್ರೀತಿಗಾ, ಅಥವಾ ಕುಟುಂಬಕ್ಕಾ? ಎಂಬುದನ್ನು  ತೋರಿಸಲಿದೆ.

Tags