ಸುದ್ದಿಗಳು

ಸೋತು ಸುಣ್ಣವಾದ ಸಿನಿಮಾ ನಟ-ನಟಿಯರು!

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಲೆಕ್ಕಾಚಾರಗಳನ್ನು ಮಾನ್ಯ ಮತದಾರರು  ಬಹುತೇಕ ತಲೆಕೆಳಗಾಗಿಸಿರುವುದನ್ನು ಗಮನಿಸಿದರೆ ಸಾರ್ವಜನಿಕರಲ್ಲಿ ಒಂದು ರೀತಿಯ ಹಾಸ್ಯಾಸ್ಪದ ಎನಿಸಿದರೂ, ಸರ್ಕಾರ ರಚಿಸುವಲ್ಲಿ ರಾಷ್ಟ್ರೀಯ ಪಕ್ಷಗಳು ಬಾರೀ ಕಸರತ್ತು ನಡೆಸುತ್ತಿವೆ ಎನ್ನುವುದನ್ನು ಮಾಧ್ಯಮಗಳು ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡುತ್ತಾ ನಮ್ಮಲ್ಲಿ ಅತಿಯಾದ ಕುತೂಹಲ ಕೆರಳಿಸುತ್ತಿವೆ. ಇನ್ನು ಬಣ್ಣದ ಲೋಕಕ್ಕೆ ಬಂದರೆ ಕೆಲ ಸಿನಿಮಾ ನಟ/ನಟಿಯರು ಕೂಡಾ ಭಾರೀ ಹಿನ್ನಡೆ ಅನುಭವಿಸಿದ್ದಾರೆ ಎನ್ನುವುದು ವರದಿಯಾಗಿದೆ.

ಈ ಹಿನ್ನೆಲೆಯಲ್ಲಿಬಾಗಲಕೋಟೆ ತೇರದಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ನಟಿ ಉಮಾಶ್ರೀಗೆ ಬಾರೀ ಹಿನ್ನಡೆಯಾಗಿದೆ. ಯಶವಂತಪುರ ಕ್ಷೇತ್ರದ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ನಟ ಜಗ್ಗೇಶ್‌‌ , ಚನ್ನಪಟ್ಟಣ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಸಿ.ಪಿ.ಯೋಗೇಶ್ವರ್‌‌, ಹೊಸದುರ್ಗದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಶಶಿಕುಮಾರ್‌,  ಬಾಗೇಪಲ್ಲಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ನಟ ಸಾಯಿಕುಮಾರ್ ಕೂಡಾ ಭಾರೀ ಹಿನ್ನಡೆ ಅನುಭವಿಸಿದ್ದಾರೆ. ಹಾವೇರಿಯ ಹೀರೇಕೆರೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಬಿ.ಸಿ. ಪಾಟೀಲ್‌‌‌‌‌ಗೆ ಮಾತ್ರ ಜಯಲಕ್ಷ್ಮಿ ಒಲಿದಿದ್ದಾಳೆ ಎನ್ನುವುದು ಗಮನಾರ್ಹ.

ಈ ನಿಟ್ಟಿನಲ್ಲಿ ಹೇಳುವುದಾದರೆ ಬಣ್ಣದ ಲೋಕದಲ್ಲಿರುವ ಹಲವಾರು ಘಟಾನುಘಟಿಗಳು ಈ ರೀತಿಯ ರಾಜಕೀಯ ಜೀವನದಲ್ಲಿ ಹಲವಾರು ಏಳು ಬೀಳುಗಳನ್ನು ಕಂಡಿರುವುದು ಪ್ರಶಂಶನೀಯ. ಆದರೂ ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಮತದಾದರರು ನಿನಿಮಾ ನಟರನ್ನು ತಿರಸ್ಕರಿಸುವುದರ ಮೂಲಕ ಅವರ ಆಡಳಿತಕ್ಕೆ ತಕ್ಕ ಪಾಠ ಕಲಿಸಿದ್ದಾರೆ ಎನ್ನಲಾಗಿದೆ.

Tags

Related Articles

Leave a Reply

Your email address will not be published. Required fields are marked *