ಸುದ್ದಿಗಳು

ರಿಹರ್ಸಲ್ ಮಾಡುವಾಗಲೂ ರೆಕಾರ್ಡ್….

ಎಲ್ಲೆಡೆ ಬಾರಿ ಸದ್ದು ಮಾಡುತ್ತಿರುವ #ಮಿಟೂ ಅಭಿಯಾನ

ಬೆಂಗಳೂರು, ಅ.28: ಶೃತಿ ಹರಿಹರನ್ ಹಾಗೂ ಸಂಜನಾ ಮಾಡಿದ ಆರೋಪಗಳ ಬೆನ್ನಲ್ಲೇ ಮತ್ತೆ ಇಂಥಹ ಘಟನೆಗಳು ನಡೆಯದಂತೆ ಇದೀಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಹತ್ತರವಾದ ನಿರ್ಧಾರವೊಂದನ್ನು ತೆಗೆದುಕೊಳ್ಳುತ್ತಿದೆ.

ರಿಹರ್ಸಲ್ ಮಾಡುವಾಗ ರೆಕಾರ್ಡ್

ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎನ್ನಲಾಗುತ್ತಿರುವ ಆರೋಪವನ್ನು ನಟಿ ಶೃತಿ ಹರಿಹರನ್ ಮಾಡಿದ್ದರು. ಅಷ್ಟೆ ಅಲ್ಲ ರಿಹರ್ಸಲ್ ಸಮಯದಲ್ಲಿ ನಮಗೆ ಸರ್ಜಾ ಹಿಂಸೆ ಮಾಡಿದ್ದಾರೆ ಎಂದು ಕಾನೂನು ಹೋರಾಟವನ್ನು ಮುಂದುವರೆಸಿದ್ದಾರೆ ಈ ನಟಿ‌. ಇದಕ್ಕೆ ಉತ್ತರವಾಗಿ ಸರ್ಜಾ ಕೂಡ ಕಾನೂನು ಹೋರಾಟಕ್ಕೆ ನಿಂತಿದ್ದಾರೆ. ಇವರಿಬ್ಬರ ಸಂಧಾನ ಕೂಡ ವಿಫಲವಾಗಿದೆ. ಇದೀಗ ಈ ಎಲ್ಲಾ ಬೆಳವಣಿಗೆಗಳ ನಂತರ ಚಲನಚಿತ್ರ ವಾಣಿಜ್ಯ ಮಂಡಳಿ ಎಚ್ಚೆತ್ತುಕೊಂಡಿದೆ.

ಚಿತ್ರೀಕರಣ ಜಾಗಗಳಲ್ಲಿ ಸಿಸಿ ಕ್ಯಾಮರಾ

ಇದೀಗ ಯಾವುದೇ ಒಂದು ರಿಹರ್ಸಲ್ ಅಥವಾ ಯಾವುದೋ ಒಂದು ಸೀನ್ ತೆಗೆಯುವಾಗ ಅದನ್ನು ಕೂಡ ರೆಕಾರ್ಡ್ ಮಾಡಬೇಕು ಎಂಬುದನ್ನು ಜಾರಿಗೆ ತರಲು ಚಿಂತನೆ ಮಾಡಲಾಗುತ್ತಿದೆ. ಯಾಕೆಂದರೆ ಇಂಥಹ ಆರೋಪಗಳು ಕೇಳಿ ಬಂದಾಗ ಈ ಎಲ್ಲಾ ರೆಕಾರ್ಡ್ ಆಧಾರಗಳು ಸಾಕ್ಷಿಯಾಗುತ್ತವೆ ಎಂಬುದು ಇದರ ಮುಖ್ಯ ಉದ್ದೇಶ. ಇನ್ನು ಚಿತ್ರೀಕರಣ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂಬುದು ಕೂಡ ಕೆಲವೊಬ್ಬರ ಮಾತು ಹಾಗಾಗಿ ಈ ವಿಚಾರವಾಗಿ ಇದೀಗ ಚಿಂತನೆ ನಡೆಯುತ್ತಿದೆ.

ಬಾಲಿವುಡ್ ನಲ್ಲಿದೆ ರೆಕಾರ್ಡ್ ಸಿಸ್ಟಂ

ಇನ್ನು ಈ ವಿಚಾರ ಹೊಸದೇನಲ್ಲ, ಇದು ಬಾಲಿವುಡ್ ನಲ್ಲಿ ಇದೆ. ಅಂದರೆ  ಬಾಲಿವುಡ್ ​ನ ನಿರ್ದೇಶಕ ದಲೀಪ್​ ತಾಹಿಲ್ ತಮ್ಮ ಸಿನಿಮಾದಲ್ಲಿ ರೇಪ್​ ಸೀನ್​ ತೆಗೆಯುವಾಗ ನಟಿಯಿಂದ ಸ್ಕ್ರಿಪ್ಟ್​​ಗೆ ಸಂಬಂಧಿಸಿದಂತೆ ಪರ್ಮಿಶನ್​ ತೆಗೆದುಕೊಳ್ತಿದ್ದರಂತೆ. ನಟಿಯ ಒಪ್ಪಿಗೆಯನ್ನು ಕ್ಯಾಮರಾದಲ್ಲಿ ಶೂಟ್​ ಮಾಡಿಕೊಳ್ತಿದ್ದರಂತೆ. ಯಾಕೆಂದರೆ ಮುಂದೊಂದು ದಿನ ಯಾವುದೇ ರೀತಿಯ ಆರೋಪಗಳು ಕೇಳಬಾರದು  ಎನ್ನುವುದಾಗಿದೆ. ಹಾಗಾಗಿ ಇದನ್ನು ಸ್ಯಾಂಡಲ್ ವುಡ್ ಗೆ ತರುವ ಚಿಂತನೆ  ನಡೆಸುತ್ತಿದೆ.

Tags

Related Articles