ಸುದ್ದಿಗಳು

ಸಿದ್ದಗಂಗಾ ಮಠಕ್ಕೆ ಐದು ಲಕ್ಷ ಕೊಟ್ಟ ಫಿಲ್ಮ್ ಚೇಂಬರ್

ಬೆಂಗಳೂರು, ಫೆ.12:

ನಡೆದಾಡುವ ದೇವರು, ತ್ರಿವಿಧ ದಾಸೋಹಿ ನಡೆಸಿದ ಮಠ ಇಂದು ಹೆಮ್ಮರವಾಗಿ ಬೆಳೆದಿದೆ. ಎಷ್ಟೋ ಮಂದಿ ಮಕ್ಕಳು ವಿದ್ಯೆ, ಅನ್ನ ಕೊಟ್ಟು ಕಾಪಾಡುತ್ತಿದೆ ಈ ಮಠ. ಅದೆಷ್ಟೋ ಮಂದಿ ಇಂದು ಕೂಡ ಮಠವನ್ನು ನೆನೆಯುತ್ತಾರೆ. ಶ್ರೀಗಳನ್ನು ಆರಾಧಿಸುತ್ತಾರೆ. ಎಲ್ಲಾ ಕ್ಷೇತ್ರದಲ್ಲಿಯೂ ಅಪಾರ ಸಾಧನೆ ಮಾಡಿದವರು ಈ ಕ್ಷೇತ್ರದಿಂದ ವಿದ್ಯಾಬ್ಯಾಸ ಮಾಡಿದ ವಿದ್ಯಾರ್ಥಿಗಳಿದ್ದಾರೆ. ಇದೀಗ ಇಂಥಹ ಪುಣ್ಯ ಕ್ಷೇತ್ರಕ್ಕೆ ಫಿಲ್ಮ್ ಚೇಂಬರ್ ಐದು ಲಕ್ಷ ಚೆಕ್ ನೀಡಿದ್ದಾರೆ.

ಕಿರಿಯ ಶ್ರೀಗಳಿಗೆ ಚೆಕ್ ನೀಡಿದ ಫಿಲ್ಮ್ ಚೇಂಬರ್

ಹೌದು, ಇಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಚಿನ್ನೇಗೌಡ, ಬಾಮಾ ಹರೀಶ್, ಕರಿ ಸುಬ್ಬು ಸೇರಿದಂತೆ ಚೇಂಬರ್ ನ ಹಲವು ಮಂದಿ ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿಯವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಮಠಕ್ಕೆ ಐದು ಲಕ್ಷ ಹಣದ ಚೆಕ್  ಅನ್ನು ನೀಡಿದ್ದಾರೆ. ಒಟ್ಟಿನಲ್ಲಿ ಮಠಕ್ಕೆ ಒಳ್ಳೆಯದಾಗಲಿ ಅಂತಾ ತಮ್ಮಲ್ಲಾದ ಒಂದು ಮೊತ್ತವನ್ನು ನೀಡಿದ್ದಾರೆ.

#siddagangamata #sandalwood #filmchamber #kannadamovies #balkaninews

 

 

Tags