ಸುದ್ದಿಗಳು

ರಾಯಚೂರಿನ ಇಂಜಿನಿಯರ್ ವಿದ್ಯಾರ್ಥಿ ಮಧು ಸಾವು ಖಂಡಿಸಿ ಫಿಲ್ಮ್ ಚೇಂಬರ್ ನಿಂದ ಪ್ರತಿಭಟನೆ

ಬೆಂಗಳೂರು, ಏ.20:

ರಾಯಚೂರಿನ ನವೋದಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ‘ಮಧು’ ಅತ್ಯಾಚಾರ ಹಾಗೂ ಅಮಾನುಷ ಹತ್ಯೆಯನ್ನು ಖಂಡಿಸಿ ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನು ಆಗ್ರಹಿಸಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಿನ್ನೆ ಸಂಜೆ ಕ್ಯಾಂಡಲ್ ಹಚ್ಚುವ ಮೂಲಕ ಪ್ರತಿಭಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಫಿಲ್ಮ್ ಚೇಂಬರ್ ಭಾಗಿ

ಈ ಕಾರ್ಯಕ್ರಮದಲ್ಲಿ ವಾಣಿಜ್ಯ ಮಂಡಳಿಯ ಗೌರವ ಕಾರ್ಯದರ್ಶಿಗಳಾದ ಭಾಮಾ ಹರೀಶ್, ಶಿಲ್ಪಾ ಶ್ರೀನಿವಾಸ್, ನಿರ್ಮಾಪಕರು ಹಾಗೂ ಸಿಂಡಿಕೇಟ್ ಸದಸ್ಯರಾದ ವಿಜಯ್ ಕುಮಾರ್ ಸಿಂಹ, ನಿರ್ಮಾಪಕರುಗಳಾದ ಆಸ್ಕರ್ ಕೃಷ್ಣ, ಡಾಕ್ಟರ್ ಸುನಿಲ್ ಕುಮಾರ್, ದಶಾವರ ಚಂದ್ರು, ಕಲಾವಿದರುಗಳಾದ  ಸಂತೋಷ್, ಶರಣ್ಯ, ವಿಕ್ಟರಿ ವಾಸು ಮುಂತಾದವರು ಭಾಗವಹಿಸಿದ್ದರು.

ಮಧು ಸಾವಿಗೆ ಖಂಡನೆ

ರಾಯಚೂರು ನಗರದ ಮಾಣಿಕಪ್ರಭು ದೇವಸ್ಥಾನದ ಹಿಂಭಾಗದ ಬೆಟ್ಟದ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಮೃತ ದೇಹ.  ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಎಂದು ದಾಖಲಾಗಿದ್ದ ಪ್ರಕರಣ ಈಗ ಅತ್ಯಾಚಾರವೆಸಗಿ, ಕೊಲೆ ಎಂದು ದಾಖಲಾಗಿದೆ. ಮೃತ ವಿದ್ಯಾರ್ಥಿನಿ ಮಧು ತಾಯಿ ರೇಣುಕಾದೇವಿ ನೀಡಿದ ದೂರಿನ ಮೇರೆಗೆ ಪೊಲೀಸರು ಅತ್ಯಾಚಾರ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಮಧು ಸಾವನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ.

ಜೋಡೆತ್ತುಗಳಿಗೆ ಮುಂದಿದೆ ಮಾರಿ ಹಬ್ಬ : ಸಿ.ಎಂ ಕುಮಾರಸ್ವಾಮಿ

#balkaninews #justiceformadhu #raichur #madhu #filmchamber

Tags