ಸುದ್ದಿಗಳು

‘ಫಿಲ್ಮ್ ಚೇಂಬರ್’ ನಿಂದ ‘ಅಟಲ್ ಜಿ’ ಗೆ ಶ್ರದ್ಧಾಂಜಲಿ…!

ಬೆಂಗಳೂರು, ಆ.17: ಉತ್ತಮ ವಾಗ್ಮಿ, ಪತ್ರಕರ್ತ, ಕವಿ, ರಾಜಕೀಯ ಧುರೀಣ ಭಾರತ ರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಏಮ್ಸ್ ಆಸ್ಪತ್ರೆಯಲ್ಲಿ ನಿನ್ನೆ ವಿಧಿವಶರಾಗಿದ್ದರು. ದೇಶದ ರಾಜಕೀಯ ಇತಿಹಾಸದಲ್ಲಿ ಅಜಾತಶತ್ರು ಎಂದೇ ಖ್ಯಾತಿ ಪಡೆದಿದ್ದ ವಾಜಪೇಯಿ ಅವರಿಗೆ ೯೩ ವರ್ಷ ವಯಸ್ಸಾಗಿತ್ತು. ಜೂನ್ ೧೧ರಿಂದ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಾಜಪೇಯಿ ಅವರು ನಿನ್ನೆ ಸಂಜೆ ೫.೦೫ಕ್ಕೆ ಇಹಲೋಕ ತ್ಯಜಿಸಿದ್ದಾರೆ. ನಿನ್ನೆಯಿಂದ ವಾಜಪೇಯಿ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಆದ್ರೆ, ನಿನ್ನೆ ಸಂಜೆ ಚಿಕಿತ್ಸೆ ಫಲಕಾರಿಯಾಗದೇ ವಾಜಪೇಯಿ ಅವರು ವಿಧಿವಶರಾದರು. ಈ ನಿಟ್ಟಿನಲ್ಲಿ ಇವರಿಗೆ ನಮನ ಸಲ್ಲಿಸಬೇಕೆಂದು ಚಲಚಿತ್ರ ವಾಣಿಜ್ಯ ಮಂಡಳಿ ಇಂದು ರಜೆ ಮಾಡಿದೆ.ದಿಟ್ಟ ನಿರ್ಧಾರಗಳಿಂದ ಜನಮಾನಸದಲ್ಲಿ ಉಳಿದ ಮೇರು ಪುರುಷ

ಸಾಂಸ್ಕೃತಿಕ ವ್ಯಕ್ತಿತ್ವ ಹಾಗೂ ರಾಜಕೀಯ ತರ್ಕಬದ್ಧತೆಯಿಂದಾಗಿ ಗಮನ ಸೆಳೆದಿದ್ದ ಭಾರತೀಯ ಜನತಾ ಪಕ್ಷದ ನಾಯಕ, ಅಜಾತಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಾಮಾಜಿಕ ಹಾಗೂ ರಾಜಕೀಯ ಜೀವನ ವರ್ಣರಂಜಿತವಾದದ್ದು. ಅವರು ತಮ್ಮ ಚುನಾವಣಾ ರಾಜಕೀಯ ಜೀವನದಲ್ಲಿ ಅಣು ಪರೀಕ್ಷೆಗೆ ಸಮ್ಮತಿಸುವಂತಹ ಹಲವು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಜನ ಮಾನಸದಲ್ಲಿ ಉಳಿದಿದ್ದಾರೆ ಅಟಲ್ ಜಿ. ಇಂದು ಅನೇಕ ರಾಜಕೀಯರನ್ನ ಹುಟ್ಟು ಹಾಕಿ, ಅನೇಕ ಮಾತುಗಾರರು ಕವಿಗಳನ್ನ ಹುಟ್ಟುಹಾಕಿದ ಅಟಲ್‌ಜಿ ಸದ್ಯ ನೆನಪು ಮಾತ್ರ. ಇವರಿಗೆ ನಮನ ಸಲ್ಲಿಸೋ ನಿಟ್ಟಿನಲ್ಲಿ ಇದೀಗ ಚಲನಚಿತ್ರ ವಾಣಿಜ್ಯ ಮಂಡಳಿ ಒಂದು ದಿನದ ರಜೆ ಘೋಷಿಸಿದೆ. ಇನ್ನು ನಾಳೆ ವಾಣಿಜ್ಯ ಮಂಡಳಿಯ ಕಾರ್ಯಕ್ರಮಗಳನ್ನು ಕೂಡಾ ಮುಂದೂಡಿಕೆ ಮಾಡಲಾಗಿದೆ. ಅಲ್ಲದೆ ಇವತ್ತು ಬಿಡುಗಡೆಯಾಗುವ ಎಲ್ಲಾ ಸಿನಿಮಾಗಳು ಎಂದಿನಂತೆ ಬಿಡುಗಡೆಯಾಗುತ್ತಿವೆ.ನಿನ್ನೆ ಸಂಜೆ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾರ್ಥೀವ ಶರೀರವನ್ನು ಆಸ್ಪತ್ರೆಯಿಂದ ಅವರ ನಿವಾಸಕ್ಕೆ ರವಾನಿಸಲಾಗಿದೆ. ದೆಹಲಿಯ ಕೃಷ್ಣ ಮೆನನ್ ರಸ್ತೆಯಲ್ಲಿರುವ ನಿವಾಸಕ್ಕೆ ಮೃತದೇಹ ರವಾನಿಸಲಾಗಿದೆ. ಇಂದು  ದೆಹಲಿಯ ಬಿಜೆಪಿಯ ಮುಖ್ಯ ಕಚೇರಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಬಿಜೆಪಿ ಕಚೇರಿಯಲ್ಲಿ ಅವರ ಅಭಿಮಾನಿಗಳು ಅಂತಿಮ ದರ್ಶನ ಪಡೆಯಬಹುದು. ಬಳಿಕ ಸಂಜೆ ೫ ಗಂಟೆಗೆ ನವದೆಹಲಿಯ ವಿಜಯ್ ಘಾಟ್‌ನಲ್ಲಿ ಅಟಲ್ ಜೀ ಅವರ ಅಂತ್ಯ ಸಂಸ್ಕಾರ ನಡೆಯಲಿದೆ. ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಮಾಧಿ ಪಕ್ಕದಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ.

Tags