ಸುದ್ದಿಗಳು

ನಿಜ ಜೀವನದಲ್ಲಿ ತಾತನಾದ ‘ಡಾಲಿ’ ಧನಂಜಯ್

ತಾತನಾದ ಸಂತಸವನ್ನು ಹಂಚಿಕೊಂಡ ಡಾಲಿ

ಬೆಂಗಳೂರು, ಸ.12: ಡಾಲಿ ಧನಂಜಯ್ ಅಭಿನಯದ ‘ಭೈರವ ಗೀತಾ’ ಚಿತ್ರದ ಹಾಡಿನ ಟೀಸರ್ ನಿನ್ನೆಯಷ್ಟೇ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿ ನೋಡುಗರ ಮನ ಸೂರೆಗೊಳ್ಳುತ್ತಿದೆ. ಇದರ ಬಗ್ಗೆ ಸಂತಸ ವ್ಯಕ್ತಪಡಿಸುವ ಅವರು ಮತ್ತೊಂದು ಖುಷಿಯಾದ ವಿಚಾರವನ್ನು ಹಂಚಿಕೊಂಡಿದ್ದಾರೆ.

ತಾತನಾದ ಧನಂಜಯ್

ನಟ ಧನಂಜಯ್ ಇದೀಗ ತಾತನಾಗಿದ್ದಾರೆ.. ಅರೇ.. ಇದು ಯಾವುದೋ ಚಿತ್ರಕ್ಕಿರಬಹುದು ಅಂತ ಅಂದುಕೊಂಡ್ರಾ.. ಇಲ್ಲಾ, ಇದು ಸಿನಿಮಾದಲ್ಲಲ್ಲ, ನಿಜ ಜೀವನದಲ್ಲಿ. ನಿಜಕ್ಕೂ ಡಾಲಿ ಧನಂಜಯ್ ತಾತ ಆಗಿದ್ದಾರೆ. ಈ ಬಗ್ಗೆ ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಪೋಟೋದೊಂದಿಗೆ ಬರೆದುಕೊಂಡಿದ್ದಾರೆ.

ಮಗಳ ಮಗ

ಹೌದು, ಧನಂಜಯ್, ತಮ್ಮ ಇನ್ಟಾಗ್ರಾಮ್ ಖಾತೆಯ ಮೂಲಕ ತಮ್ಮ ಕುಟುಂಬದಲ್ಲಿನ ಈ ಖುಷಿಯ ವಿಷಯವನ್ನು ಹಂಚಿಕೊಂಡಿದ್ದಾರೆ. ”ಅಣ್ಣನ ಮಗಳ ಮಗ, ನನ್ನ ಮೊಮ್ಮಗ,ಆಲ್ ರೆಡಿ ತಾತ ಆಗೋದೆ ನೋಡಿ” ಎಂದು ಸಂತಸ ಹಂಚಿಕೊಂಡಿದ್ದಾರೆ.

ಧನಂಜಯ್ ಅವರ ಸಹೋದರರ ಮಗಳಿಗೆ ಮಗು ಹುಟ್ಟಿದ್ದು, ಧನಂಜಯ್ ಆ ಮಗುವಿನಿಂದ ‘ತಾತ’ ಎಂದು ಕರೆಸಿಕೊಳ್ಳುತ್ತಿದ್ದಾರೆ. ಇದೀಗ ಸಿನಿಮಾದಲ್ಲಿ ಸಾಕಷ್ಟು ಸಕ್ರಿಯರಾಗಿದ್ದರೂ ಸಹ ಅವರು ತಮ್ಮ ಕುಟುಂಬಕ್ಕೆ ಸಮಯ, ಪ್ರೀತಿ ಎಲ್ಲವನ್ನು ನೀಡುತ್ತಾರೆ.

ಸದ್ಯ ಅವರು ಕನ್ನಡ ಮತ್ತು ತೆಲುಗು ಭಾಷೆಯ ‘ಭೈರವ ಗೀತಾ’ ಹಾಗೂ ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

Tags

Related Articles