ಸುದ್ದಿಗಳು

‘ದಿ ವಿಲನ್’ ನಲ್ಲಿ ಒಬ್ಬೊಬ್ಬರದು ಒಂದೊಂದು ಅವತಾರ..!!!

ಇದೇ ಆಗಸ್ಟ್ 19 ರಂದು (ಭಾನುವಾರ) ಸಂಜೆ 5 ಗಂಟೆಗೆ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಬಳಿ ಇರುವ ವೈಟ್ ಆರ್ಕಿಡ್ ನಲ್ಲಿ ‘ದಿ ವಿಲನ್’ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಬೆಂಗಳೂರು, ಆ.17: ಪ್ರೇಮ್ ನಿರ್ದೇಶನದ ಬಹು ನಿರೀಕ್ಷಿತ ‘ದಿ ವಿಲನ್’ ಚಿತ್ರದ ಮತ್ತೊಂದು ಪೊಸ್ಟರ್ ಬಿಡುಗಡೆಯಾಗಿ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ನೆಟ್ಟಿಗರಿಂದ ಮೆಚ್ಚುಗೆ ಗಳಿಸುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಚಿತ್ರದ ಧ್ವನಿಸುರುಳಿ ಬಿಡುಗಡೆಯಾಗುತ್ತಿವೆ.

ನಿಜವಾದ ವಿಲನ್ ಯಾರು

‘ದಿ ವಿಲನ್’ ಚಿತ್ರದಲ್ಲಿ ನಿಜವಾದ ವಿಲನ್ ಯಾರು..? ನಾಯಕ ಯಾರು..? ಕಥೆ ಏನು..? ಎಂಬುದರ ಬಗ್ಗೆ ಈಗಾಗಲೇ ಅನೇಕ ಚರ್ಚೆಗಳು ಶುರುವಾಗಿವೆ. ಈ ಕುತೂಹಲದ ಮಧ್ಯೆಯೂ ಎಲ್ಲರ ಗಮನ ಸೆಳೆಯುತ್ತಿರುವುದು ಪಾತ್ರಗಳ ನೋಟ. ಇಲ್ಲಿ ಸುದೀಪ್, ಶಿವಣ್ಣ ಇಬ್ಬರೂ ತುಂಬಾ ಭಿನ್ನವಾಗಿ ಕಾಣಿಕೊಂಡಿದ್ದಾರೆ.

ಕಪ್ಪು ಉಡುಪಿನಲ್ಲಿ ಕಿಚ್ಚ-ಆ್ಯಮಿ

ಚಿತ್ರದ ಪೋಸ್ಟರ್ ನಲ್ಲಿ ನಟ ಕಿಚ್ಚ ಸುದೀಪ್ , ತಲೆಗೆ ಟೋಪಿ ಧರಿಸಿ, ಉದ್ದ ಕೂದಲು ಬಿಟ್ಟು
ಕಪ್ಪು ಉಡುಪು ತೊಟ್ಟುಕೊಂಡು ವಿಭಿನ್ನವಾಗಿ ಮಿಂಚುತ್ತಿದ್ದು, ನಾಯಕಿ ಆ್ಯಮಿ ಜಾಕ್ಸನ್ ಕೈಯಲ್ಲಿ ಸಿಗರೇಟ್ ಹಿಡಿದು, ಬ್ಲ್ಯಾಕ್ ಗೌನ್ ತೊಟ್ಟು ಪಡ್ಡೆ ಹೈಕಳ ಮೈ ಚಳಿ ಹೆಚ್ಚಿಸಿದ್ದಾರೆ. ನಟ ಶಿವಣ್ಣ ತಲೆಗೆ ಪೇಟ ತೊಟ್ಟು , ಹಸಿರು ಪಂಚೆ, ಗುಲಾಬಿ ಕೋಟು ಧರಿಸಿ ಪಕ್ಕಾ ದೇಸಿ ನೋಟದಲ್ಲಿ ಕಾಣುತ್ತಿದ್ದಾರೆ.

ಹಾಡಿನಲ್ಲಿ ಶಿವಣ್ಣ

ಈ ಚಿತ್ರದ ಒಂದು ಹಾಡಿನಲ್ಲಿ ಶಿವರಾಜ್ ಕುಮಾರ್ ಅವರು ಡಾ. ರಾಜ್ ಕುಮಾರ್ ಅವರಂತೆ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ನೋಟದ ಪೋಸ್ಟರ್ ಬಿಡುಗಡೆಯಾಗಿದೆ.

ಧ್ವನಿಸುರುಳಿ ಬಿಡುಗಡೆ ಸಮಾರಂಭ

ಇದೇ ಆಗಸ್ಟ್ 19 ರಂದು (ಭಾನುವಾರ) ಸಂಜೆ 5 ಗಂಟೆಗೆ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಬಳಿ ಇರುವ ವೈಟ್ ಆರ್ಕಿಡ್ ನಲ್ಲಿ ‘ದಿ ವಿಲನ್’ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಂತರ ಆಗಸ್ಟ್ 24 ರಂದು ದುಬೈನಲ್ಲಿ ‘ದಿ ವಿಲನ್’ ಧ್ವನಿಸುರುಳಿಯ ಯಶಸ್ವಿಯಾದ ಕುರಿತಂತೆ ಸಮಾರಂಭ ನಡೆಯಲಿದೆ.

Tags