ಉದಯೋನ್ಮುಖರುಬಾಲ್ಕನಿಯಿಂದವಿಡಿಯೋಗಳುಸಂದರ್ಶನಸುದ್ದಿಗಳು

ಹೊಸಬರ ತಂಡದ ವಿಭಿನ್ನ ಪ್ರಯೋಗವನ್ನು ಮೆಚ್ಚಿದ ಪ್ರೇಕ್ಷಕರಿಗೆ ಧನ್ಯವಾದಗಳು: ‘ಅನುಕ್ತ’ ಚಿತ್ರತಂಡ

‘ಬಜಾರ್’ನಲ್ಲಿ ‘ಅನುಕ್ತ’ ಸೇಲ್

ಬೆಂಗಳೂರು.ಫೆ.02: ಕಾರ್ತಿಕ್ ಅತ್ತಾವರ್ ನಾಯಕನಟರಾಗಿ ನಟಿಸಿರುವ ‘ಅನುಕ್ತ’ ಚಿತ್ರ ನಿನ್ನೆಯಷ್ಟೇ ತೆರೆ ಕಂಡಿದೆ. ಕರಾವಳಿ ಪ್ರದೇಶದ ಅವ್ಯಕ್ತ ವಿಚಾರಗಳನ್ನೊಳಗೊಂಡ ಕಥೆ, ಪತ್ತೇದಾರಿಕೆ, ಭೂತ ಕೋಲ, ದೈವಾರಾಧನೆ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ರಿಂದ ಅದ್ಭುತ ಪ್ರಶಂಸೆ.. ಹೀಗೆ ಅನೇಕ ವಿಚಾರಗಳಿಂದ ಈ ಸಿನಿಮಾ ನಿರೀಕ್ಷೆಗೆ ಕಾರಣವಾಗಿತ್ತು. ಅದೆಲ್ಲವನ್ನು ತಣಿಸುವಂತೆ, ಕರಾವಳಿ ತೀರದೊಳಗಿನ ಥ್ರಿಲ್ಲಿಂಗ್ ಜರ್ನಿಯಂಥಾ ಅನುಭವವನ್ನು ‘ಅನುಕ್ತ’ ನೀಡುವಂತಿದೆ.

ಹೊಸಬರಾದರೂ ಸಾಕಷ್ಟು ಅನುಭವಿ ತಂತ್ರಜ್ಞರು ಮತ್ತು ಕಲಾವಿದರನ್ನು ಒಳಗೊಂಡಿರುವ ‘ಅನುಕ್ತ’ ಚಿತ್ರತಂಡದವರನ್ನು ಬಾಲ್ಕನಿ ನ್ಯೂಸ್ ಸಂಪರ್ಕಿಸಿತು. ಇದೇ ವೇಳೆ ನಮ್ಮೊಂದಿಗೆ ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಬಾಲ್ಕನಿ ನ್ಯೂಸ್: ನಿನ್ನೆಯಷ್ಟೇ ತೆರೆ ಕಂಡ ‘ಅನುಕ್ತ’ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ಅದಕ್ಕಾಗಿ ಚಿತ್ರತಂಡಕ್ಕೆ ಶುಭಾಶಯಗಳು. ನಿಮ್ಮ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಹಾಗೆಯೇ ಮತ್ತೊಂದು ‘ರಂಗಿ ತರಂಗ’ ತರಹ ಬ್ಲಾಕ್ ಬ್ಲಸ್ಟರ್ ಹಿಟ್ ಎಂದು ಹೇಳುತ್ತಿದ್ದಾರೆ. ಹೇಗೆ ಅನಿಸ್ತಿದೆ ನಿಮಗೆ..??

ಚಿತ್ರತಂಡ: ಮೊದಲಿಗೆ ಪ್ರೇಕ್ಷಕರಿಗೆ ಧನ್ಯವಾದಗಳು.. ನಾವು ಏನು ಅಂದುಕೊಂಡಿದ್ದೇವೋ ಅದಕ್ಕಿಂತ ಜಾಸ್ತಿನೇ ನಮ್ಮ ಸಿನಿಮಾ ಹಿಟ್ ಆಗಿದೆ. ಖಂಡಿತ, ನಮ್ಮ ಸಿನಿಮಾ ನೀವು ಕೊಟ್ಟ ಕಾಸಿಗೆ ಮೋಸ ಮಾಡುವುದಿಲ್ಲ. ಒಂದು ಕಂಪ್ಲೀಟ್ ಮನರಂಜನಾತ್ಮಕ ಸಿನಿಮಾ ಎಂದು ಹೇಳುವುದಕ್ಕೆ ಖುಷಿಯಿದೆ. ಇನ್ನು ಪ್ರೇಕ್ಷಕರು ನಮ್ಮ ಸಿನಿಮಾವನ್ನು ‘ರಂಗಿತರಂಗ’ ಹೋಲಿಸುತ್ತಿದ್ದಾರೆ. ಹೀಗಾಗಿ ಒಂದು ರೀತಿಯ ಜವಾಬ್ದಾರಿಯಿತ್ತು. ಈಗ ಸಿನಿಮಾ ನೋಡಿದ ಪ್ರೇಕ್ಷಕರು ಪುಲ್ ಖುಷಿಯಲ್ಲಿದ್ದಾರೆ. ಹೀಗಾಗಿ ಪ್ರೇಕ್ಷಕ ಪ್ರಭುಗಳಿಗೆ ಧನ್ಯವಾದಗಳು.

ಬಾಲ್ಕನಿ ನ್ಯೂಸ್: ಚಿತ್ರದ ನಾಯಕರಾಗಿ ನಟಿಸಿರುವ ನಿಮಗೆ ಹೇಗೆ ಅನಿಸುತ್ತಿದೆ.?

ಕಾರ್ತಿಕ್ ಅತ್ತಾವರ್: ಖಂಡಿತಾ ಖುಷಿಯಾಗುತ್ತಿದೆ. ಚಿತ್ರದ ನಾಯಕನ ಪಾತ್ರಕ್ಕೆ ನಾನು ನ್ಯಾಯ ಸಲ್ಲಿಸಿದ್ದೇನೆ ಎಂದು ಅನಿಸುತ್ತಿದೆ. ಎಲ್ಲರೂ ಹೇಳುವ ಹಾಗೆ ನಾನು ಧಾರಾವಾಹಿಯಲ್ಲಿ ನಟಿಸುತ್ತಿದ್ದೆ. ‘ಯಶೋದೆ’ ಧಾರಾವಾಹಿಯ ನಂತರ ಸ್ವಲ್ಪ ಗ್ಯಾಪ್ ತೆಗೆದುಕೊಂಡು, ‘ಅನುಕ್ತ’ ಚಿತ್ರದವರೊಂದಿಗೆ ನನ್ನನ್ನು ನಾನು ತೊಡಗಿಸಿಕೊಂಡೆ. ಇನ್ನು ನಾನೊಬ್ಬನೇ ಅಲ್ಲಾ, ನಮ್ಮ ಚಿತ್ರತಂಡದವರ ಪ್ರೋತ್ಸಾಹ, ಅನುಭವಿ ಮತ್ತು ಹಿರಿಯ ಕಲಾವಿದರು.. ಇಂಥದ್ದೊಂದು ಕಥೆ, ನಿರ್ಮಾಣ ಸಂಸ್ಥೆ ಸಿಕ್ಕಿದ್ದು ತುಂಬಾ ಪುಣ್ಯ.. ನಾನು ಎಲ್ಲರಿಗೂ ಧನ್ಯವಾದಗಳನ್ನು ಹೇಳಲು ಇಷ್ಟಪಡುತ್ತೇನೆ.

ಬಾಲ್ಕನಿ ನ್ಯೂಸ್: ಅಶ್ವಥ್ ಸ್ಯಾಮುವೆಲ್ ಸರ್, ನೀವೂ ಸಹ ಇದೇ ಮೊದಲ ಬಾರಿಗೆ ನಿರ್ದೇಶಕರಾಗಿ ಬಡ್ತಿ ಪಡೆದಿದ್ದೀರಿ..?? ಅದರಲ್ಲೂ ಕರಾವಳಿ ಭಾಗದ ಕಥಾಹಂದರವನ್ನು ಒಳಗೊಂಡ ಕಥೆ.. ಹೇಗೆಲ್ಲಾ ತಯಾರಿ ಮಾಡಿಕೊಂಡ್ರಿ..??

ಅಶ್ವಥ್ ಸ್ಯಾಮುವೆಲ್: ನನಗೆ ಇದೇ ಮೊದಲ ನಿರ್ದೇಶನದ ಸಿನಿಮಾವಿರಬಹುದು. ಆದರೆ ನಾನು ಈ ಹಿಂದೆ ಸಾಕಷ್ಟು ಸೀರಿಯಲ್ ಗಳಲ್ಲಿ ಕೆಲಸ ಮಾಡಿದ್ದೇನೆ. ಇನ್ನು ನಮ್ಮ ಸಿನಿಮಾದಲ್ಲಿ ಹೊಸ ಮುಖಗಳೊಂದಿಗೆ ಅನುಭವಿ ಮತ್ತು ಹಿರಿಯ ಕಲಾವಿದರು ಸಹ ಕೆಲಸ ಮಾಡಿದ್ದಾರೆ. ಇನ್ನು ಸಿನಿಮಾ ರಿಲೀಸ್ ಮುನ್ನ ಸಾಕಷ್ಟು ಭಯವಿತ್ತು. ಈಗ ಪ್ರೇಕ್ಷಕರು ನಮ್ಮ ಸಿನಿಮಾ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಕೊಟ್ಟ ಕಾಸಿಗೆ ಖಂಡಿತಾ ನಮ್ಮ ಚಿತ್ರ ಮೋಸ ಮಾಡುವುದಿಲ್ಲ. ನನಗೂ ಖುಷಿಯಿದೆ. ಮುಂದೆ ಇದೇ ತರಹದ ಸಿನಿಮಾಗಳನ್ನು ಮಾಡುವ ತಯಾರಿದ್ದೇನೆ. ಸದ್ಯದಲ್ಲಿಯೇ ಆ ಚಿತ್ರಗಳ ಬಗ್ಗೆ ತಿಳಿಸುತ್ತೇನೆ.

 

ಬಾಲ್ಕನಿ ನ್ಯೂಸ್: ಈ ಚಿತ್ರದಲ್ಲಿ ಇತ್ತೀಚೆಗಷ್ಟೇ #ಮಿಟೂ ಪ್ರಕರಣದಿಂದಾಗಿ ಗಮನ ಸೆಳೆದಿದ್ದ ಸಂಗೀತಾ ಭಟ್ ಅದ್ಭುತ ಪ್ರತಿಕ್ರಿಯೆ ನೀಡಿದ್ದಾರೆ. ಅವರಿಲ್ಲಿ ಮಡದಿಯ ಪಾತ್ರವನ್ನು ತನ್ಮಯತೆಯಿಂದ ನಿರ್ವಹಿಸಿದ್ದಾರೆ.

ಅಶ್ವಥ್ ಸ್ಯಾಮುವೆಲ್: ನಿಜಾ, ಖಂಡಿತಾ.. ನಮ್ಮ ಚಿತ್ರದಲ್ಲಿ ಸಂಪತ್ ರಾಜ್, ಅನು ಪ್ರಭಾಕರ್, ಮೇರಿ ಪಾತ್ರದ ಉಷಾ ಭಂಡಾರಿ ಸೇರಿದಂತೆ ಎಲ್ಲರೂ ಅದ್ಬುತವಾಗಿ ನಟಿದ್ದಾರೆ. ಅವರಂತೆಯೇ ಕಾರ್ತಿಕ್ ಹಾಗೂ ಸಂಗೀತಾ ಭಟ್ ಕೂಡಾ ಒಳ್ಳೆಯ ಫರ್ಪಾರ್ಮೆನ್ಸ್ ನೀಡಿದ್ದಾರೆ. ಆದರೆ, ಒಂದು ಮಾತು, ಸಂಗೀತಾ ಭಟ್ ಅವರಿಗೆ ಏನೇ ಕಹಿಗಳಾಗಿರಲಿ ಅವುಗಳನ್ನೆಲ್ಲಾ ಮರೆತು ಸಿನಿಮಾಗಳಲ್ಲಿ ತೊಡಗಿಕೊಳ್ಳಲಿ.. ಈ ಮಾತು ಬರೀ ನಾವುಗಳಷ್ಟೇ ಅಲ್ಲಾ, ಪ್ರೇಕ್ಷಕರು ಸಹ ಹೇಳುತ್ತಿದ್ದಾರೆ.
ಇನ್ನು ನಮ್ಮ ನಿರ್ಮಾಪಕರಾದ ಹರೀಶ್ ಬಂಗೇರಾ ಅವರ ಬಗ್ಗೆ ಹೇಳಲೇ ಬೇಕು. ಇಂತಹ ನಿರ್ಮಾಪಕರು ಖಂಡಿತಾ ಸಿನಿಮಾ ರಂಗಕ್ಕೆ ಬರಬೇಕು. ಅವರು ಹಣ ಮಾಡಲು ಈ ಸಿನಿಮಾ ಮಾಡಿಲ್ಲಾ. ಅವರಿಗೆ ಒಳ್ಳೆಯ ಸಿನಿಮಾ ಮಾಡಬೇಕು ಎಂಬ ಆಸೆಯಿತ್ತು. ಈಗ ಅವರೂ ಸಹ ಪ್ರೇಕ್ಷಕರು ಕೊಟ್ಟ ಪ್ರಶಂಸೆಯಿಂದ ಸಂತೃಪ್ತರಾಗಿದ್ದಾರೆ.

ಬಾಲ್ಕನಿ ನ್ಯೂಸ್: ಅಂತಿಮವಾಗಿ ನಿಮ್ಮ ಮಾತು.. ಪ್ರೇಕ್ಷಕರಿಗೆ.??

ಖಂಡಿತಾ ನಮ್ಮ ಸಿನಿಮಾ 100 ಕ್ಕೆ ನೂರರಷ್ಟು ಮನರಂಜನೆ ನೀಡುತ್ತದೆ. ಖಂಡಿತಾ ಸಿನಿಮಾ ನೋಡಿ, ಇನ್ನು ನಮ್ಮ ಕನ್ನಡದ ಪ್ರೇಕ್ಷಕರು ಯಾವತ್ತೂ ಒಳ್ಳೆಯ ಸಿನಿಮಾಗಳನ್ನು ಕೈ ಬಿಡುವುದಿಲ್ಲ. ಈಗಾಗಲೇ ಅನೇಕ ಸಿನಿಮಾಗಳನ್ನು ನೋಡಿ, ಚಿತ್ರತಂಡದವರನ್ನು ಹರಸಿ ಹಾರೈಸಿದ್ದಾರೆ. ಹಾಗೆಯೇ ನಮ್ಮ ಸಿನಿಮಾವನ್ನು ಗೆಲ್ಲಿಸುತ್ತಾರೆ ಎಂಬ ನಂಬಿಕೆಯಿದೆ.
ಇನ್ನು ಪ್ರೇಕ್ಷಕರು ಸಹ ಹೆಚ್ಚೆಚ್ಚು ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡಿದರೆ ಇಂತಹ ಅನೇಕ ಪ್ರಯೋಗಗಳನ್ನು ಹೆಚ್ಚೆಚ್ಚು ಮಾಡಬಹುದು. ಇನ್ನು ಈ ಸಿನಿಮಾವನ್ನು ಬರೀ ಒಬ್ಬರಲ್ಲಾ, ಇಡೀ ಫ್ಯಾಮಿಲಿ ಒಟ್ಟಿಗೆ ಕುಳಿತು ಸಿನಿಮಾ ನೋಡಬಹುದು.

#filmanukta, #balkaninews #ashwathsamaul, #fimnews, #kannadasuddigalu sangeethabhat #intereview

Tags