ಸುದ್ದಿಗಳು

ಸುಚಿತ್ರ ಕನ್ನಡ ಚಿತ್ರೋತ್ಸವ- 2018

ನ. 9 ರಿಂದ ಮೂರು ದಿನಗಳ ಕಾಲ ನಡೆಯುವ ಚಿತ್ರಗಳ ಪ್ರದರ್ಶನ

ಬೆಂಗಳೂರು, ನ.8: ನ. 9 ರಿಂದ 11 ವರೆಗೆ ‘ಸುಚಿತ್ರ ಫಿಲ್ಮಂ ಸೊಸೈಟಿ’ಯಿಂದ ಸುಚಿತ್ರ ಕನ್ನಡ ಚಿತ್ರೋತ್ಸವ-2018 ಕಾರ್ಯಕ್ರಮ ನಡೆಯಲಿದೆ. ಈ ಚಿತ್ರೋತ್ಸವದಲ್ಲಿ ಏಳು ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಪ್ರದರ್ಶನಗೊಳ್ಳಲಿರುವ ಸಿನಿಮಾಗಳು

‘ಹೆಬ್ಬೆಟ್ ರಾಮಕ್ಕ’, ‘ಕೆಂಪಿರ್ವೆ’, ‘ರೈಲ್ವೆಚಿಲ್ಡ್ರನ್’ ‘ಗುಳ್ಟು’ ‘ಸ.ಹಿ.ಪ್ರಾ.ಶಾಲೆ ಕಾಸರಗೋಡು’, ‘ಕಾನೂರಾಯಣ’, ‘ಭೇಟೆ’, ‘ದಯವಿಟ್ಟು ಗಮನಿಸಿ’ ಚಿತ್ರಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ. ಈ ಕಾರ್ಯಕ್ರಮದಲ್ಲಿ ಈ ಎಲ್ಲಾ ಚಿತ್ರಗಳ ಚಿತ್ರತಂಡದವರೊಂದಿಗೆ ಸಂವಾದವೂ ಇರಲಿದೆ. ಇಲ್ಲಿ  ಎಲ್ಲರೂ ಭಾಗವಹಿಸಬಹುದಾಗಿದೆ.

ಚಿತ್ರಗಳ ಬಗ್ಗೆ

ಈ ಚಿತ್ರೋತ್ಸವದಲ್ಲಿ ಕನ್ನಡದ ಚಿತ್ರಗಳನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಕನ್ನಡದ ಚಿತ್ರಗಳು ಸಹ ಜಾಗತಿಕ ನೆಲೆಯಲ್ಲಿ ಗುರುತಿಸುವಂತಾದರೆ ಮಾರುಕಟ್ಟೆ ಬೆಳೆಯುತ್ತದೆ ಎಂಬ ಆಶಯ ಸುಚಿತ್ರಾ ಫಿಲ್ಮಂನವರದ್ದು.

ಸುಚಿತ್ರಾ ಫಿಲ್ಮಂ ಸೊಸೈಟಿ 2006 ರಲ್ಲಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಚಿತ್ರೋತ್ಸವ ನಡೆಸಿತ್ತು. ಬಳಿಕ 2008 ಮತ್ತು 2009 ರಲ್ಲಿ ಯೂ ಚಿತ್ರೋತ್ಸವ ನಡೆದಿತ್ತು. ಅದು ನಿರಂತರವಾಗಿ ನಡೆಯುತ್ತಿದೆ.

ದಿನಾಂಕ: ನ. 9 ರಿಂದ 11

ಸ್ಥಳ: ಸುಚಿತ್ರ ಫಿಲ್ಮಂ ಸೊಸೈಟಿ, ಬಿ.ವಿ ಕಾರಂತ್ ರಸ್ತೆ, ಬನಶಂಕರಿ ಎರಡನೇ ಹಂತ, ಬೆಂಗಳೂರು.

Tags