ಸುದ್ದಿಗಳು

2019 ರಲ್ಲಿ ಚಿಂದಿ ಉಡಾಯಿಸಲಿರುವ ನಾಯಕಿ ಪ್ರಧಾನ ಚಿತ್ರಗಳು

ಮತ್ತೆ ನಾಯಕಿ ಪ್ರಧಾನ ಚಿತ್ರಗಳತ್ತ ಚಂದನವನ

ಬೆಂಗಳೂರು.ಡಿ.28: ಈ ವರ್ಷ ಸ್ಯಾಂಡಲ್ ವುಡ್ ನಲ್ಲಿ ಅಷ್ಟೊಂದು ಮಹಿಳಾ ಪ್ರಧಾನ ಚಿತ್ರಗಳು ತೆರೆಗೆ ಬರದಿದ್ದರೂ, ಮುಂದಿನ ವರ್ಷ ಏನಿಲ್ಲವೆಂದರೂ ಸುಮಾರು 15 ರಿಂದ 20 ಸಿನಿಮಾಗಳು ರಿಲೀಸ್ ಆಗುತ್ತಿವೆ.

2018 ರ ಚಿತ್ರಗಳು

2018 ರಲ್ಲಿ ‘ಮಂಜರಿ’, ‘ಜನ ಗಣ ಮನ’, ‘ಅತೃಪ್ತ’, ‘ಚಿಟ್ಟೆ’, ‘ಕುಲ್ಫಿ’, ‘ಸಾವಿತ್ರಿ ಬಾಯಿ ಪುಲೆ’, ‘ಪತಿಬೇಕು ಡಾಟ್ ಕಾಮ್’, ‘ಹೀಗೊಂದು ದಿನ’, ‘ಅಮೃತಘಳಿಗೆ’, ‘ನಾತಿಚರಾಮಿ’ ಸೇರಿದಂತೆ ಅನೇಕ ಚಿತ್ರಗಳ ಮಹಿಳಾ ಪ್ರಧಾನ ಕತೆಯನ್ನು ಹೊಂದಿದ್ದವು. ಇವೆಲ್ಲಾ ಈ ವರ್ಷದ ಮಹಿಳಾ ಪ್ರಧಾನ ಚಿತ್ರಗಳಾದರೆ, ಮುಂದಿನ ವರ್ಷ ತೆರೆಗೆ ಬರಲಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ.

 

2019 ರ ನಾಯಕಿ ಹರಿಪ್ರಿಯ

ಮುಂದಿನ ವರ್ಷ ಅಂದರೆ, 2019 ರಂದು 15 ರಿಂದ 20 ಸಿನಿಮಾಗಳು ರಿಲೀಸ್ ಆಗುತ್ತಿವೆ. ವಿಶೇಷವೆಂದರೆ ಅವುಗಳಲ್ಲಿ ಹರಿಪ್ರಿಯಾ ನಟನೆಯ ‘ಸೂಜಿದಾರ’, ‘ಕನ್ನಡ್ ಗೊತ್ತಿಲ್ಲ’, ಹಾಗೂ ‘ಡಾಟರ್ ಆಫ್ ಪಾರ್ವತಮ್ಮ’ ಚಿತ್ರಗಳು ಬರುತ್ತಿವೆ. ಹೀಗಾಗಿ ಅವರು ವರ್ಷದ ನಾಯಕಿ ಎನ್ನಬಹುದು.

ಚಿತ್ರಗಳ ಪಟ್ಟಿ

ಇನ್ನು ರಾಧಿಕಾ ಕುಮಾರ ಸ್ವಾಮಿ ನಟಿಸುತ್ತಿರುವ ‘ಭೈರಾದೇವಿ’ ಹಾಗೂ ‘ದಮಯಂತಿ’ ಚಿತ್ರಗಳು ರಿಲೀಸ್ ಆಗುತ್ತಿರುವುದು ಸಹ ವಿಶೇಷ. ಇವುಗಳೊಂದಿಗೆ ‘ಡಾಕ್ಟರ್ 56’, ‘ಅನುಷ್ಕಾ’ , ‘ಝಾನ್ಸಿ’, ‘ಹೌರಾಬ್ರಿಡ್ಜ್’, ‘ವಜ್ರಮುಖಿ’, ‘1888’, ‘ಏಪ್ರೀಲ್’ ಚಿತ್ರಗಳು ಮಹಿಳಾ ಪ್ರಧಾನ ಕಥೆಯನ್ನು ಒಳಗೊಂಡಿವೆ.

Tags

Related Articles