ಸುದ್ದಿಗಳು

ಮೂರು ಪ್ಲಸ್ ಒಂದು.. ಒಟ್ಟು ನಾಲ್ಕು ಚಿತ್ರಗಳು ಬಿಡುಗಡೆ: ಈ ವಾರ

ಕನ್ನಡದ ಚಿತ್ರಗಳೊಂದಿಗೆ ಒಂದು ಡಬ್ಬಿಂಗ್ ಸಿನಿಮಾ

ಬೆಂಗಳೂರು.ಫೆ.14

ಪ್ರತಿವಾರದಂತೆ ಈ ವಾರವೂ ಸಹ ಸ್ಯಾಂಡಲ್ ವುಡ್ ನಲ್ಲಿ ಸಿನಿಮಾಗಳು ತೆರೆ ಕಾಣುತ್ತಿವೆ. ಅಚ್ಚರಿಯೆಂದರೆ, ಈ ವಾರ ಒಟ್ಟು 4 ಚಿತ್ರಗಳು ಬೆಳ್ಳಿತೆರೆಯನ್ನು ಅಲಂಕರಿಸಲು ಸಿದ್ದವಾಗಿದ್ದು, ಅವುಗಳಲ್ಲಿ ಒಂದು ಡಬ್ಬಿಂಗ್ ಸಿನಿಮಾವಾಗಿದೆ.

ಈಗಾಗಲೇ ತನ್ನ ವಿಭಿನ್ನ ಪೋಸ್ಟರ್, ಟೀಸರ್, ಟ್ರೈಲರ್ ಮತ್ತು ಹಾಡುಗಳಿಂದ ಗಮನ ಸೆಳೆದಿರುವ ‘ಬೆಲ್ ಬಾಟಂ’, ‘ಗಹನ’, ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಹಾಗೂ ‘ಕಿರಿಕ್ ಲವ್ ಸ್ಟೋರಿ’ ಚಿತ್ರಗಳು ರಿಲೀಸ್ ಆಗುತ್ತಿವೆ.

1 ಬೆಲ್ ಬಾಟಂ : ಜಯತೀರ್ಥ ನಿರ್ದೇಶನದ ಈ ಸಿನಿಮಾ ಈಗಾಗಲೇ ಎಲ್ಲರ ಗಮನ ಸೆಳೆದಿದೆ. 80 ರ ದಶಕದ ಕಥೆಯನ್ನು ಈ ಸಿನಿಮಾ ಹೇಳಲಿದ್ದು, ನಿರ್ದೇಶಕ ರಿಷಬ್ ಶೆಟ್ಟಿ ಈ ಚಿತ್ರದ ಮೂಲಕ ನಾಯಕ ನಟರಾಗಿ ಎಂಟ್ರಿ ಕೊಡುತ್ತಿದ್ದಾರೆ. ಅವರಿಗೆ ನಾಯಕಿಯಾಗಿ ಹರಿಪ್ರಿಯಾ ನಟಿಸಿದ್ದು, ಇವರೊಂದಿಗೆ ಯೋಗರಾಜ್ ಭಟ್, ಶಿವಮಣಿ ಸೇರಿದಂತೆ ಅನೇಕರು ನಟಿಸಿದ್ದಾರೆ.

2 ಗಹನ : ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸ್ಥಿರ ಛಾಯಾಗ್ರಾಹಕನಾಗಿ ಕೆಲಸ ಮಾಡುತ್ತಿದ್ದ ಸ್ಟಿಲ್ ಸೀನುರವರು ತಮ್ಮ ‘ಓಂ ಶ್ರೀ ಸಾಯಿರಾಂ” ಬ್ಯಾನರ್ ಅಡಿಯಲ್ಲಿ ನಿರ್ಮಾಪಕರಾಗಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಆದಿತ್ಯಶೆಟ್ಟಿ, ಶರಣ್ಯಗೌಡ, ರಂಜಿನಿ, ಶಿವು ಇಂಚರ ಭೀಮಯ್ಯ, ಸೇರಿದಂತೆ ಮುಂತಾದವರು ನಟಿಸಿದ್ದಾರೆ.

3 ಕೆಮಿಸ್ಟ್ರಿ ಆಫ್ ಕರಿಯಪ್ಪ : ಅಪ್ಪ-ಅಮ್ಮ ಹಾಗೂ ಮಗನ ಸುತ್ತ ಸುತ್ತುವ ಸಿನಿಮಾ ಇದಾಗಿದ್ದು, ತಬಲಾ ನಾಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಂ ಸಿರಿ ಬ್ಯಾನರ್ ನಡಿ ಮಂಜುನಾಥ್ ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ಚಂದನ್ ಆಚಾರ್, ಸಂಜನಾ ಸೇರಿದಂತೆ ಹಲವರು ನಟಿಸಿದ್ದಾರೆ.

4 ಕಿರಿಕ್ ಲವ್ ಸ್ಟೋರಿ : ಮಲೆಯಾಳಂನ ‘ಒರು ಅಡಾರ್ ಲವ್ ಸ್ಟೋರಿ’ ಈಗ ಕನ್ನಡಕ್ಕೆ ‘ಕಿರಿಕ್ ಲವ್ ಸ್ಟೋರಿ’ ಹೆಸರಿನಲ್ಲಿ ಡಬ್ ಆಗಿದ್ದು, ಕನ್ನಡ, ತಮಿಳು, ಮಲೆಯಾಳಂ ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಚಿತ್ರದಲ್ಲಿ ಪ್ರಿಯಾ ವಾರಿಯರ್, ಓಮರ್ ಅಬ್ದುಲ್ಲಾ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರೌಡಶಾಲೆಯಲ್ಲಿ ಪ್ರೌಡಾವಸ್ತೆಯ ಯುವಕ-ಯುವತಿಯರ ನಡುವಿನ ಪ್ರೇಮವನ್ನು ಈ ಚಿತ್ರ ಚಿತ್ರಿಸುತ್ತದೆ.

ಈ ಚಿತ್ರಗಳಿಗೂ ಶುಭವಾಗಲಿ ಎಂದು ಬಾಲ್ಕನಿ ನ್ಯೂಸ್ ಶುಭ ಹಾರೈಸುತ್ತದೆ.

ಹಿಟ್ ಆಯ್ತು ಕನ್ನಡಕ್ಕೆ ಡಬ್ ಆದ ‘ಕಿರಿಕ್ ಲವ್ ಸ್ಟೋರಿ’ ಚಿತ್ರದ ಟ್ರೈಲರ್ ಮತ್ತು ಹಾಡುಗಳು..

#filmsnews, #balkaninews #bellbottom, #gahana, #kiriklovestory, #chemistryofkariyappa, #kannadasuddigalu

Tags

Related Articles