ಸುದ್ದಿಗಳು

ಫೋರ್ಬ್ಸ್ ಟಾಪ್ 100ರ ಪಟ್ಟಿಯಲ್ಲಿ ಸಲ್ಲುಗೆ ಸಿಕ್ತು ಮೊದಲ ಸ್ಥಾನ …!

ಸೆಲೆಬ್ರಿಟಿಗಳು ಗಳಿಸಿದ ಆದಾಯದ ಮೇರೆಗೆ ನಡೆಯುವ ಕಾರ್ಯಕ್ರಮ

ಬೆಂಗಳೂರು, ಡಿ.5: ಈ ವರ್ಷದ ಫೋರ್ಬ್ಸ್‌ ಇಂಡಿಯಾ ಸೆಲೆಬ್ರಿಟಿ 100ರ ಲಿಸ್ಟ್‌ ಬಿಡುಗಡೆಯಾಗಿದೆ. ಈ 100ರ ಲಿಸ್ಟ್ ನಲ್ಲಿ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್‌ ಖಾನ್‌ ದೇಶದ ಅತಿ ಶ್ರೀಮಂತ ಸೆಲೆಬ್ರಿಟಿಯಂತೆ. ಹೌದು, ಮನರಂಜನೆಗೆ ಸಂಬಂಧಿಸಿದ ಸೆಲೆಬ್ರಿಟಿಗಳ ವರ್ಷದ ಆದಾಯದ ಮೇರೆಗೆ ಫೋರ್ಬ್ಸ್‌ ಪ್ರತಿ ವರ್ಷ ಈ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. 2018ರ ಪಟ್ಟಿಯನ್ನು ಅಕ್ಟೋಬರ್ 1, 2017 ರಿಂದ ಸೆಪ್ಟೆಂಬರ್‌ 30, 2018ರವರೆಗೆ ಸೆಲೆಬ್ರಿಟಿಗಳು ಗಳಿಸಿದ ಆದಾಯದ ಮೇರೆಗೆ ಈ ಪಟ್ಟಿಯನ್ನು ಮಾಡಲಾಗಿದೆಯಂತೆ.

3 ವರ್ಷಗಳಿಂದ ಸಲ್ಮಾನ್‌ ಖಾನ್‌ ದೇಶದ ಅತಿ ಶ್ರೀಮಂತ ..!

ಅಲ್ಲದೆ, ಸತತ 3 ವರ್ಷಗಳಿಂದ ಸಲ್ಮಾನ್‌ ಖಾನ್‌ ದೇಶದ ಅತಿ ಶ್ರೀಮಂತ ಸಲೆಬ್ರಿಟಿ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ.  ಆದ್ರೆ ಈ ಬಾರಿಯೂ ನಂ. 1 ಸ್ಥಾನವನ್ನು ಸಲ್ಲು ಗಿಟ್ಟಿಸಿಕೊಂಡಿದ್ದಾರೆ. ನಟ ಸಲ್ಮಾನ್‌ ಖಾನ್ ಈ ವರ್ಷ ಅಂದಾಜು 253.25 ಕೋಟಿ ರೂ. ಆದಾಯ ಗಳಿಸಿದ್ದು, ಟೈಗರ್‌ ಜಿಂದಾ ಹೈ ಹಾಗೂ ರೇಸ್‌ 3 ಚಿತ್ರಗಳು ಹಿಟ್‌ ಆದ ಕಾರಣ 52 ವರ್ಷದ ಸಲ್ಲು ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ. ಜತೆಗೆ, ಪ್ರಮುಖ ಜಾಹೀರಾತುಗಳಲ್ಲೂ ಸಲ್ಲು ಹಣ ಗಳಿಸಿದ್ದಾರೆ. ಒಟ್ಟಾರೆ ಟಾಪ್ 100 ಸೆಲೆಬ್ರಿಟಿಗಳ ವರ್ಷದ ಆದಾಯ 3,140.25 ಕೋಟಿ ರೂ. ಗಳಾಗಿದ್ದು, ಈ ಪೈಕಿ ಸಲ್ಮಾನ್‌ ಖಾನ್‌ ಒಬ್ಬರೇ ಶೇ. 8 ರಷ್ಟು ಆದಾಯ ಗಳಿಸಿಕೊಂಡಿದ್ದಾರೆ ಎಂದು ಫೋರ್ಬ್ಸ್‌ ಮಾಹಿತಿ ನೀಡಿದೆ.

ಅಕ್ಷಯ್ ಕುಮಾರ್ ಗೆ 3ನೇ ಸ್ಥಾನ ..!

ಕಳೆದ ವಾರ ರಿಲೀಸ್ ಆಗಿದ್ದ 2.0 ಚಿತ್ರದಲ್ಲಿ ನಟಿಸಿರುವ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್ ಮೂರನೇ ಸ್ಥಾನಗಳಿಸಿಕೊಂಡಿದ್ದು, ಅವರು 185 ಕೋಟಿ ರೂ. ಆದಾಯ ಗಳಿಸಿಕೊಂಡಿದ್ದಾರೆ. ಆದ್ರೆ, ಕಳೆದ ವರ್ಷ 2017ರ ಫೋರ್ಬ್ಸ್‌ ಪಟ್ಟಿಯಲ್ಲಿ ಟಾಪ್ 2 ರಲ್ಲಿದ್ದ ಶಾರುಖ್‌ ಖಾನ್‌ ಈ ಬಾರಿ ಟಾಪ್‌ 10ರಿಂದಲೇ ಹೊರಹೋಗಿದ್ದು, 13ನೇ ಸ್ಥಾನಕ್ಕಿಳಿದಿದ್ದಾರೆ.

Tags