ಸುದ್ದಿಗಳು

ಚಂದನವನಕ್ಕೆ ಮತ್ತೆ ಮರಳಿದ ಗಾಯಿತ್ರಿ ಅಯ್ಯರ್..

ಬೆಂಗಳೂರು.ಮೇ.22: ಗಾಯಿತ್ರಿ ಅಯ್ಯರ್.. ಚಂದನವನದಲ್ಲಿ ದರ್ಶನ್ ರೊಂದಿಗೆ ‘ಜಗ್ಗುದಾದ’, ವಿನೋದ್ ಪ್ರಭಾಕರ್ ರೊಂದಿಗೆ ‘ಟೈಸನ್’, ಸೇರಿದಂತೆ ‘ನಮೋ ಭೂತಾತ್ಮ’ ಹಾಗೂ ‘ಓಜಾ’ ಚಿತ್ರಗಳಲ್ಲಿ ನಟಿಸಿದ್ದರು. ನಂತರ ಬೇರೆ ಭಾಷೆಗಳಲ್ಲಿ ಬ್ಯುಸಿಯಾದರು. ಇದೀಗ ಪುನಃ ಸ್ಯಾಂಡಲ್ ವುಡ್ ಗೆ ಮರಳಿದ್ದಾರೆ.

ಹೌದು, ನಟಿ ಗಾಯಿತ್ರಿ ಅಯ್ಯರ್ ಇದೀಗ ಕನ್ನಡದ ಹೆಸರಿಡದ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಮಲಯಾಳಂ ಛಾಯಾಗ್ರಹಕ ಸುಶೀಲ್ ನಂಬಿಯಾರ್ ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷವೆಂದರೆ, ಈ ಚಿತ್ರದಲ್ಲಿ ‘ಉಪ್ಪು ಹುಳಿ ಖಾರ’ ಖ್ಯಾತಿಯ ಜಯಶ್ರೀ ರಾಮಯ್ಯ ಕೂಡಾ ನಟಿಸುತ್ತಿದ್ದಾರೆ.

Image result for actress gayatri iyer

ಅಂದ ಹಾಗೆ ಈ ಚಿತ್ರವು ಕನ್ನಡ ಮತ್ತು ತಮಿಳು ಭಾಷೆಯಲ್ಲಿ ನಿರ್ಮಾಣವಾಗುತ್ತಿದ್ದು, ಕಳೆದ ವಾರ ಈ ಚಿತ್ರಕ್ಕೆ ಮುಹೂರ್ತವಾಗಿದೆ. ಈ ಚಿತ್ರದಲ್ಲಿ ಪ್ರದೀಪ್ ವರ್ಮಾ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದು, ಸಂಜಯ್ ಎನ್ನುವವರು ನಿರ್ಮಾಣ ಮಾಡುತ್ತಿದ್ದಾರೆ.

Related image

‘ಈ ಚಿತ್ರದ ಮೂಲಕ ನಾನು ತಮಿಳು ಚಿತ್ರರಂಗಕ್ಕೂ ಪದಾರ್ಪಣೆ ಮಾಡುತ್ತಿದ್ದೇನೆ ಎಂಬುದೇ ನನಗೆ ದೊಡ್ಡ ಖುಷಿ. ಇದರಲ್ಲಿ ನನ್ನ ಪಾತ್ರ ಬಹಳ ಮುದ್ದಾಗಿದೆ. ಎರಡನೇ ನಾಯಕಿಯಾಗಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ. ಚಿತ್ರೀಕರಣ ಈಗಷ್ಟೇ ಶುರುವಾಗಿರುವುದರಿಂದ ಪಾತ್ರದ ಬಗ್ಗೆ ಹೆಚ್ಚು ಹೇಳುವಂತಿಲ್ಲ’ ಎನ್ನುತ್ತಾರೆ ಜಯಶ್ರೀ.

ಅಂದ ಹಾಗೆ ಈ ಚಿತ್ರವು ಕಾಮಿಡಿ ಕಮ್ ಥ್ರಿಲ್ಲರ್ ಕಥಾಹಂದರವನ್ನು ಒಳಗೊಂಡಿದ್ದು, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಮೂಡಿಸಿವೆ. ಅಂದ ಹಾಗೆ ನಟಿ ಗಾಯಿತ್ರಿ ಕೂಡಾ ಚಿತ್ರದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ‘ನಿರ್ದೇಶಕ ಸುಶೀಲ್ ನಂಬಿಯಾರ್ ರವರು ನನಗೆ ಮುಂಚೆಯಿಂದಲೂ ಪರಿಚಯ. ಅವರು ಹೇಳಿದ ಕಥೆ ಇಷ್ಟವಾಯಿತು. ಇನ್ನು ಈ ಚಿತ್ರವು ಎರಡು ಭಾಷೆಯಲ್ಲಿ ಮೂಡಿ ಬರುತ್ತಿದೆ’ ಎನ್ನುತ್ತಾರೆ.

‘ಮಾಯಾ ಕನ್ನಡಿ’ ಟೀಸರ್ ರಿಲೀಸ್…

#gaayatriiyyer, #new, #movie, #balkaninews #filmnews, #kannadasuddigalu, #jaggudaada

Tags