ಸುದ್ದಿಗಳು

ಭರದಿಂದ ಸಾಗುತ್ತಿದೆ ‘ಗಹನ’ ಚಿತ್ರದ ಚಿತ್ರೀಕರಣ

ಓಂ ಶ್ರೀ ಸಾಯಿರಾಂ ಫಿಲಂಸ್ ಲಾಂಛನದಲ್ಲಿ ಆರ್. ಶ್ರೀನಿವಾಸ್ ಸೀನು ನಿರ್ಮಾಣದ ‘ಗಹನ’ ಚಿತ್ರದ ಚಿತ್ರೀಕರಣ ಇದೀಗ ಆರಂಭಗೊಂಡಿದ್ದು, ರಮಣೀಯ ತಾಣಗಳಲ್ಲಿ ಚಿತ್ರದ ಚಿತ್ರೀಕರಣ ಸಾಗುತ್ತಿದೆ.

ಡಿಯಾಂಡ್ ಮೌಳ್ ಬೆಟ್ಟ ಮತ್ತು ಕೊಡಗು, ಸಕಲೇಶಪುರ, ಇನ್ನಿತರ ಸುಮಾರು 4 ರಮಣೀಯ ತಾಣಗಳಲ್ಲಿ ಪ್ರಥಮ ಬಾರಿಗೆ ಗಹನ ಚಿತ್ರದ ಚಿತ್ರೀಕರಣ ಸಾಗುತ್ತಿದ್ದು, ಚಿತ್ರದಲ್ಲಿ ಆದಿತ್ಯ ಶೆಟ್ಟಿ, ಶರಣ್ಯ ಗೌಡ, ರಂಜಿನಿ, ಶಿವು, ಇಂಚರ ಭೂಮಯ್ಯ ಸೇರಿದಂತೆ ಮುಂತಾದವರ ಅಭಿನಯವಿದ್ದು, ಪ್ರೀತ್ ಹಾಸನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಸೈಕಲಾಜಿಕಲ್ ಥ್ರಿಲ್ಲರ್ ಕಥಾವಸ್ತುವುಳ್ಳ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ಸ್ ಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಇನ್ನು ಬೆಟ್ಟ, ಕಾಡುಗಳಲ್ಲಿ, ಸುಮಾರು 300 ಅಡಿ ಆಳದಲ್ಲಿ ಇಳಿದು ಸುಂದರ ಜಲಪಾತದ ತಳದಲ್ಲಿ ಹಾಡಿನ ಚಿತ್ರೀಕರಣ ಮಾಡಿದ್ದು ಚಿತ್ರದ ಹೆಗ್ಗಳಿಕೆ. ಈ ಅಪಾಯಕಾರಿ ಸಂದರ್ಭದಲ್ಲಿ ಸಣ್ಣ ಪುಟ್ಟ ಗಾಯಗಳಾದರೂ, ಕಲಾವಿದರು, ಚಿತ್ರತಂಡ ಯಾವುದನ್ನೂ ಲೆಕ್ಕಿಸದೆ ಪಾಲ್ಗೊಂಡಿದ್ದಾರಂತೆ.

ಚಿತ್ರಕ್ಕೆ-ಸಾಯಿ ಶ್ರೀನಿವಾಸ್ ಅವರ ಛಾಯಾಗ್ರಹಣ, ರಘು, ಧನವಂ ಅವರ ಸಂಗೀತ, ರಾಜೀವ ಅವರ ಸಂಕಲನವಿದ್ದು, ವಿಜಯ್ ವಿಶ್ವಮಣಿ ಚಿತ್ರದ ಹಾಡುಗಳನ್ನು ಬರೆದಿದ್ದಾರೆ.

 

@ sunil javali

Tags

Related Articles

Leave a Reply

Your email address will not be published. Required fields are marked *