ಸುದ್ದಿಗಳು

ಒಂದೊಂದೇ ಮಾತಿಂದ…’ ಗಹನ’ ಚಿತ್ರದ ಇಂಪಾದ ಹಾಡು

ಪ್ರೀತ್ ಹಾಸನ್ ನಿರ್ದೇಶನದ ನಿರೀಕ್ಷಿತ ಚಿತ್ರ

ಬೆಂಗಳೂರು, ಸೆ,25: ‘ಓಂ ಶ್ರೀ ಸಾಯಿರಾಂ’ ಬ್ಯಾನರ್ ನ ಅಡಿಯಲ್ಲಿ ಸ್ಟಿಲ್ ಸೀನುರವರು ನಿರ್ಮಿಸುತ್ತಿರುವ ‘ಗಹನ’ ಚಿತ್ರದ ಲಿರಿಕಲ್ ವಿಡಿಯೋ ಹಾಡೊಂದು ಬಿಡುಗಡೆಯಾಗಿದೆ. ‘ಒಂದೊಂದೇ ಮಾತಿಂದ’ ಎಂದು ಶುರುವಾಗುವ ಈ ಗೀತೆಯನ್ನು ವಿಜಯ್ ವಿಶ್ವಮಣಿ ಬರೆದಿದ್ದಾರೆ.

ಹಾಡಿನ ಬಗ್ಗೆ

ರಘು ಧನ್ವಂತ್ರೀ ಸಂಗೀತದ ಈ ಹಾಡಿಗೆ ಅವರ ಮತ್ತು ದೇಸಿ ಮೊಹನ್ ಧ್ವನಿಯಾಗಿದ್ದಾರೆ. ಸದ್ಯ ಈ ಹಾಡು ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ. ಆನಂದ್ ಆಡಿಯೋ ಸಂಸ್ಥೆಯು ತನ್ನ ಯೂಟ್ಯೂಬ್ ವಾಹಿನಿಯಿಂದ ಬಿಡುಗಡೆ ಮಾಡಿದೆ.

ಸ್ಟಿಲ್ ಗಳು

ಈಗಾಗಲೇ ಚಿತ್ರತಂಡವು ಮಂಗಳೂರು, ಡೆಲ್ಟಾ ಪಾಯಿಂಟ್, ಉಡುಪಿ, ಮಲ್ಪೆ, ಚಾರ್ಮುಡಿ ಘಾಟ್, ಮಡಿಕೇರಿ, ಶಿರಾಡಿ ಘಾಟ್ , ಬೆಂಗಳೂರು, ಚಿಕ್ಕಮಗಳೂರು ಮಡಿಕೇರಿ ಸುತ್ತಮುತ್ತ ಚಿತ್ರೀಕರಣ ನಡೆಸಿದೆ. ಈ ಸ್ಥಳಗಳಲ್ಲಿ ತೆಗೆದಿರುವ ಸ್ಟಿಲ್ ಫೋಟೋಗಳು ಗಮನ ಸೆಳೆಯುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

ತಾರಾಬಳಗ

ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರವನ್ನು ಒಳಗೊಂಡಿದ್ದು, ಚಿತ್ರದಲ್ಲಿ ಆದಿತ್ಯಶೆಟ್ಟಿ, ಶರಣ್ಯಗೌಡ, ರಂಜಿನಿ, ಶಿವು ಇಂಚರ ಭೀಮಯ್ಯ, ಸೇರಿದಂತೆ ಮುಂತಾದವರು ನಟಿಸಿದ್ದಾರೆ. ಪ್ರೀತ್ ಹಾಸನ್ ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ರಚಿಸಿದ್ದಾರೆ.

ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರವನ್ನು ಒಳಗೊಂಡಿದ್ದು, ಚಿತ್ರದಲ್ಲಿ ಆದಿತ್ಯಶೆಟ್ಟಿ, ಶರಣ್ಯಗೌಡ, ರಂಜಿನಿ, ಶಿವು ಇಂಚರ ಭೀಮಯ್ಯ, ಸೇರಿದಂತೆ ಮುಂತಾದವರು ನಟಿಸಿದ್ದಾರೆ. ಪ್ರೀತ್ ಹಾಸನ್ ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ರಚಿಸಿದ್ದಾರೆ.

ನವೀನ ಪ್ರಚಾರದ ಸಾಧನ

ಮಾಧ್ಯಮದಲ್ಲಿ ಅತೀ ಪ್ರಭಾವಿ ಮಾಧ್ಯಮ ಎನಿಸಿರುವ ಸಿನಿಮಾದಲ್ಲೂ ಪ್ರಚಾರ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ವರ್ಷಕ್ಕೆ ನೂರುನ್ನೂರು ಚಿತ್ರಗಳು ಪುಟಿದೇಳುವ ಸ್ಯಾಂಡಲ್ ವುಡ್ ನಲ್ಲೂ ಪ್ರಚಾರದ ಕೊರತೆಯಿಂದಾಗಿ ಸೊರಗುವ ಚಿತ್ರಗಳ ಸಂಖ್ಯೆ ಸಿಂಹ ಪಾಲಿನದಾಗಿದ್ದು, ಈ ಕೊರತೆಯನ್ನು ಬಗ್ಗು ಬಡೆಯಲು ಅತ್ಯಂತ ನವೀನ ಪ್ರಚಾರದ ಸಾಧನವಾಗಿ ಲಿರಿಕಲ್ ವಿಡಿಯೋ ಹೊರ ಹೊಮ್ಮಿದೆ.

ಮೊನ್ನೆ ತಾನೇ ‘ದಿ ಟೆರರಿಸ್ಟ್’ ತಂಡದಿಂದ ‘ಸುರಿಯೋ ಕಣ್ಣೀರ.. ನೋಡಿ ಹೋಗು’ ಎಂಬ ಶೀರ್ಷಿಕೆಯಲಿ ಬಂದ ಹಾಡು ಒಂದೇ ದಿನದಲ್ಲಿ 11 ಸಾವಿರ ನೋಡುಗರನ್ನು ಸಂಪಾದಿಸಿದ್ದರೆ, ನಿನ್ನೆ ಬಿಡುಗಡೆಯಾದ ‘ಗಹನ’ ಚಿತ್ರದ ‘ಒಂದೊಂದೇ ಮಾತಿಂದ…’ ಈ ಲಿರಿಕಲ್ ವಿಡಿಯೋ ಕೂಡಾ ತಾನು ಯಾರಿಗೇನು ಕಡಿಮೆಯೆಂಬ ಧೋರಣೆ ಸಾಭೀತು ಪಡಿಸುವಂತೆ ಅದೂ ಸಹ 11 ಸಾವಿರ ನೋಡುಗರನ್ನು ಸಂಪಾದನೆ ಮಾಡಿದೆ.

ಒಟ್ಟಾರೆ, ಚಿತ್ರ ಬಿಡುಗಡೆಯಾಗುವುದಕ್ಕೆ ಮುನ್ನ ಆ ಚಿತ್ರದ ಸಾರವನ್ನು ಪ್ರಸಾರ ಮಾಡುವ ಈ ಕೌಶಲ್ಯ ಚಿತ್ರರಸಿಕರನ್ನು ಸೆಳೆಯುತ್ತಿರುವುದು ಗಮನಾರ್ಹ ವಿಷಯ.

 

 

 

 

 

Tags