ಸುದ್ದಿಗಳು

‘ಗಹನ’ ಟ್ರೈಲರ್ ಮೆಚ್ಚಿದ ಶಿವಣ್ಣ

ಸದ್ಯದಲ್ಲಿಯೇ ತೆರೆಗೆ ಬರಲಿರುವ ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರದ ಸಿನಿಮಾ

ಬೆಂಗಳೂರು, ಡಿ.11: ಸದ್ಯದಲ್ಲಿಯೇ ತೆರೆಗೆ ಬರಲು ಸಿದ್ದತೆ ನಡೆಸುತ್ತಿರುವ ‘ಗಹನ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಟ್ರೈಲರ್ ಅನ್ನು ಮೆಚ್ಚಿಕೊಂಡು ಮಾತನಾಡಿದ್ದಾರೆ.

ಸ್ಟಿಲ್ ಸೀನು ಅವರಿಗೆ ಒಳ್ಳೆಯದಾಗಲಿ

‘ಗಹನ.. ಚಿತ್ರದ ಟ್ರೈಲರ್ ನೋಡಿದೆ. ಸ್ಟಿಲ್ ಸೀನು ಅರ್ಥಾತ್ ಆರ್ ಶ್ರೀನಿವಾಸ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ, ಇವರು 28, 30 ವರ್ಷಗಳಿಂದ ಪರಿಚಿತರಾಗಿರುವ ಸ್ನೇಹಿತರು. ಸ್ಟಿಲ್ ಫೋಟೋಗ್ರಾಫರ್ ಆಗಿರುವ ಅವರು ಇದೇ ಮೊದಲ ಬಾರಿಗೆ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚಿತ್ರದ ದೃಶ್ಯಗಳು ಚಂದವಾಗಿ ಮೂಡಿ ಬಂದಿದೆ. ಎಲ್ಲಾ ಕಲಾವಿದರು ಸಹ ಮುದ್ದಾಗಿ ಕಾಣುತ್ತಿದ್ದಾರೆ. ಎಲ್ಲರಿಗೂ ಒಳ್ಳೆಯ ಫ್ಯೂಚರ್ ಇದೆ. ಟ್ರೈಲರ್ ನೋಡುತ್ತಿದ್ದರೆ ಚಿತ್ರವು ಸಸ್ಪೆನ್ಸ್ ಕಥಾಹಂದರ ಶೈಲಿಯನ್ನು ಒಳಗೊಂಡಿದೆ ಎಂದು ಗೊತ್ತಾಗುತ್ತಿದೆ, ಚಿತ್ರಕ್ಕೆ ಶುಭವಾಗಲಿ” ಎಂದು ಶಿವರಾಜ್ ಕುಮಾರ್ ಟ್ರೈಲರ್ ಅನ್ನು ನೋಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

  ಚಿತ್ರದ ಬಗ್ಗೆ

ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರವನ್ನು ಒಳಗೊಂಡಿದ್ದು, ಚಿತ್ರದಲ್ಲಿ ಆದಿತ್ಯಶೆಟ್ಟಿ, ಶರಣ್ಯಗೌಡ, ರಂಜಿನಿ, ಶಿವು ಇಂಚರ ಭೀಮಯ್ಯ, ಸೇರಿದಂತೆ ಮುಂತಾದವರು ನಟಿಸಿದ್ದಾರೆ. ನಿರ್ದೇಶಕ ಪ್ರೀತ್ ಹಾಸನ್ ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ರಚಿಸಿದ್ದು, ಚಿತ್ರವನ್ನು ಮಂಗಳೂರು, ಡೆಲ್ಟಾ ಪಾಯಿಂಟ್, ಉಡುಪಿ, ಮಲ್ಪೆ, ಚಾರ್ಮುಡಿ ಘಾಟ್, ಮಡಿಕೇರಿ, ಶಿರಾಡಿ ಘಾಟ್ , ಬೆಂಗಳೂರು, ಚಿಕ್ಕಮಗಳೂರು ಮಡಿಕೇರಿ ಸುತ್ತಮುತ್ತ ಚಿತ್ರೀಕರಣ ನಡೆಸಿದೆ.

ಇನ್ನು ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸ್ಥಿರ ಛಾಯಾಗ್ರಹಕನಾಗಿ ಕೆಲಸ ಮಾಡುತ್ತಿದ್ದ ಸ್ಟಿಲ್ ಸೀನು ರವರು ತಮ್ಮ ‘ಓಂ ಶ್ರೀ ಸಾಯಿರಾಂ” ಬ್ಯಾನರ್ ಅಡಿಯಲ್ಲಿ ನಿರ್ಮಾಪಕರಾಗಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಜೊತೆಗೆ ಸ್ಥಿರ ಚಿತ್ರಣದಿಂದ ಸಿನಿಮಾ ಛಾಯಾಗ್ರಾಹಕನಾಗಿಯೂ ಭಡ್ತಿ ಪಡೆಯುತ್ತಿರುವುದು ವಿಶೇಷವಾಗಿದ್ದು, ಈ ಚಿತ್ರದ ಸ್ಟಿಲ್ ಫೋಟೋಗಳು ಗಮನ ಸೆಳೆಯುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

Tags

Related Articles