ಸುದ್ದಿಗಳು

‘ಮೇಷ್ಟ್ರು’ ಬಿಡುಗಡೆ ಮಾಡಿದ ಶೀರ್ಷಿಕೆ ಮತ್ತು ಪೋಸ್ಟರ್

‘ಗಹನ’ವಾದ ವಿಚಾರ..!, ಸಿನೆಮಾಪ್ರಿಯರಿಗೆ ಅಪರೂಪದ ಹೂರಣ

ಬೆಂಗಳೂರು, ಜುಲೈ-16: ಪ್ರಾಯಶಃ ಸೋಮವಾರವಾದ ಕಾರಣ ಶುಭದಿನವೆಂದು “ಸ್ಟಿಲ್” ಸೀನು ನಿರ್ಮಾಣದ “ಗಹನ” ಸಿನೆಮಾದ ಶೀರ್ಷಿಕೆ ಹಾಗೂ ಪೋಸ್ಟರ್ ಬಿಡುಗಡೆಯನ್ನು ಸೀನುರವರ ಗುರುಸಮಾನರಾದ ‘ಮೇಷ್ಟ್ರು’ ನಾಗತಿಹಳ್ಳಿ ಚಂದ್ರಶೇಖರ್ ಖುದ್ದಾಗಿ ಬಿಡುಗಡೆ ಮಾಡಿದರು.

 

ಕರುನಾಡಿನ 2ನೇ ಅತೀ ಎತ್ತರದ ಶಿಖರ ಶ್ರೇಣಿಯಾದ ಕೊಡಗಿನ ತಡಿಯಂಡಮೋಳ್ ನಲ್ಲಿ ಕಳೆದ ನಾಲ್ಕೈದು ತಿಂಗಳ ಕಾಲ ಸತತವಾಗಿ ತಮ್ಮ ಎರಡೂ ಷೆಡ್ಯೂಲ್ ಚಿತ್ರೀಕರಣ ಮುಗಿಸಿಕೊಂಡು ಸುಮಾರು 10 ದಿನಗಳ ಇನ್ನೊಂದೇ ಷೆಡ್ಯೂಲ್ ನಷ್ಟು ಚಿತ್ರೀಕರಣ ಬಾಕಿ ಉಳಿದಿರುವ ಈ ‘ಗಹನ’ ಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ ರಚಿಸಿ ನಿರ್ದೇಶನದ ಹೊಣೆ ಹೊತ್ತವರು ಯುವನಿರ್ದೇಶಕ ಪ್ರೀತ್ ಹಾಸನ್.


ಸದ್ಯ ಚಂದನವನಕ್ಕೆ ಚಿರಪರಿಚಿತರಾದ ‘ನಿಶ್ಚಲ ಬಿಂಬಗ್ರಾಹಿ’ ಅದೇ ನಮ್ಮ “ಸ್ಟಿಲ್” ಸೀನು..’ಗಹನ’ದ ನಿರ್ಮಾಪಕರು. ಇದೇ ಚಿತ್ರದಿಂದ ಇವರಿಬ್ಬರೂ ಪೂರ್ಣಪ್ರಮಾಣದ ನಿರ್ದೇಶಕ-ನಿರ್ಮಾಪಕರಾಗುತ್ತಿರುವುದು ನಮ್ಮ ಇಂಡಸ್ಟ್ರಿಗೇ ಒಂದು ಹೆಮ್ಮೆಯ ಸಮಾಚಾರ! ಸುಮಾರು ವರ್ಷಗಳಿಂದ ಸ್ಥಿರ ಛಾಯಾಚಿತ್ರಗ್ರಾಹಕರಾಗಿ ಶ್ರಮಿಸಿರುವ ಸೀನು ‘ಗಹನ’ವಾಗಿ ಯೋಚಿಸಿಯೇ ಈ ಚಿತ್ರದ ಮೂಲಕ ತಮ್ಮ ಹೆಸರನ್ನೂ ‘ಸಾಯಿ ಶ್ರೀನಿವಾಸ್’ ಎಂದೂ ಬದಲಾಯಿಸಿಕೊಂಡವರು…!

ನಾದಬ್ರಹ್ಮ ಹಂಸಲೇಖರ ಶಿಷ್ಯ ಯುವಪ್ರತಿಭೆ ರಘು ಧನ್ವಂತರಿಯವರ ಮನಸೆಳೆಯುವ ಸಂಗೀತ ಸಂಯೋಜನೆ, ಇಕ್ಬಾಲ್ ಶಿವಮೊಗ್ಗ ರವರ ಸ್ಥಿರ ಛಾಯಾಚಿತ್ರಗ್ರಹಣ ಹೊಂದಿ ಆದಿತ್ಯ-ಶರಣ್ಯರಂಥಾ ಹೊಸಮುಖಗಳನ್ನೇ ನಾಯಕ-ನಾಯಕಿಯರಾಗಿ ಪರಿಚಯಿಸುತ್ತಿರುವ ‘ಗಹನ’ ಮುಖ್ಯವಾಗಿ ಒಂದು ಅಪರೂಪದ ಕಥಾವಸ್ತುವೆನಿಸುವ ಆತ್ಮಗಳ ಕುರಿತಾದ, ಮರಣಾನಂತರದ ಜೀವನ ಸಂಬಂಧೀ ಕಥಾನಕ. ಇನ್ನೇನು ಮೂರೇ ಮಾಸದಲ್ಲಿ ತೆರೆಗೆ ಅಪ್ಪಳಿಸುವ ಯೋಜನೆಯಲ್ಲಿರುವ ಈ ನವಯುವ ಚಿತ್ರತಂಡಕ್ಕೆ ‘ಬಾಲ್ಕನಿ’ಯಿಂದ ಹಾರ್ದಿಕ ಶುಭಾಶಯಗಳು. ವೀಕ್ಷಕರೇ..! ನೋಡಿರಿಲ್ಲಿ..ನಿಮಗಾಗಿ ‘ಗಹನ’ದ ಫೋಟೋಗ್ಯಾಲರಿ..!!

 

@ Dr. SUDARSHAN BHARATIYA P.V.

Tags

One Comment