ಸುದ್ದಿಗಳು

ಗಜ ದಿಗ್ಗಜರು..! ದಸರೆಗೆಂದೇ ಬಂದ ನಮ್ಮ ನಾಡ ಐಸಿರಿಯ ಅಭ್ಯಾಗತರು..!

ದಸರೆಯ 12 ಆನೆಗಳ ಕುರಿತಾದ ವಿಶಿಷ್ಟ ಮಾಹಿತಿ ಗುಚ್ಛ ..!

                                                             BALKANI DASARA-2018

ಜಂಬೂ ಸವಾರಿಯಲ್ಲಿ ಬಲು ಜಂಬದಿಂದಲೇ ರಾಜಗಾಂಭೀರ್ಯದ ನಡೆಗಳಲ್ಲಿ ಕಣ್ಣಮುಂದೆ ಸಾಗುವ ದಸರಾ ಆನೆಗಳ ಉತ್ಸವ ಅನಾದಿಕಾಲದಿಂದಲೂ ಬಂದಂತಹಾ ಅಲೌಕಿಕ ಸಂಪ್ರದಾಯ! ಬಾಲ್ಕನೀ ಓದುಗರಿಗಾಗಿ ದಸರೆಗೆಂದು ಈ ಬಾರಿ  ಮೈಸೂರಿಗೆ ಆಗಮಿಸಿದ ಹನ್ನೆರಡು ಗಜಗಳ ಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ. ಓದಿ ಆನಂದಿಸಿ…. 

ಐದೂವರೆ-ಆರಡಿ ಎತ್ತರದ ಮಾನವ  ಅವನಿಗಿಂತ  ಮೂರು ಪಾಲು ಎತ್ತರ, 700 ಪಾಲು ಹೆಚ್ಚು ಭಾರವಿರುವ  ಈ ಜಗದ ಬೃಹತ್ –ಮಹತ್ ಸಸ್ತನಿಯನ್ನು ಕಾಡಿನಲ್ಲಿ ಸ್ವೇಚ್ಛೆಯಾಗಿರುವಾಗಲೇ ಅಡ್ಡ ಹಾಕಿ ಹಿಡಿದು, ಪಳಗಿಸಿ, ತಮ್ಮ ಹಿಡಿತಕ್ಕೆ ತಂದುಕೊಂಡು ಅದರ ಮೇಲೆ ಸವಾರಿ ಮಾಡುವ ಮನುಜನ ಬುದ್ಧಿಮತ್ತೆಗೆ ಬೆಟ್ಟದ ತಾಯಿಯ ಅನುಗ್ರಹವಿರಲಿ!

Tags