ಸುದ್ದಿಗಳು

ಕುದುರೆಮುಖದಲ್ಲಿ ‘ಗಾಳಿಪಟ’ ಹಾರಿಸಲಿರುವ ಭಟ್ಟರು

‘ಪಂಚತಂತ್ರ’ ಚಿತ್ರದ ಯಶಸ್ಸಿನ ಬಳಿಕ ನಿರ್ದೇಶಕ ಯೋಗರಾಜ್ ಭಟ್ಟರು ‘ಗಾಳಿಪಟ-2’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ. ವಿಶೇಷವೆಂದರೆ ಈ ಚಿತ್ರವನ್ನು ಮಳೆಗಾಲದಲ್ಲಿಯೇ ಚಿತ್ರೀಕರಣ ಮಾಡಬೇಕಿದೆ. ಹೀಗಾಗಿ ಆಗಸ್ಟ್ ಮುಂ ತಿಂಗಳ ಮೊದಲ ವಾರದಿಂದ ಚಿತ್ರದ ಶೂಟಿಂಗ್ ಆರಂಭವಾಗಲಿದೆ.

ಈ ಚಿತ್ರದಲ್ಲಿ ಶರಣ್, ‘ಕವಲುದಾರಿ’ ಖ್ಯಾತಿಯ ರಿಷಿ, ‘ಲೂಸಿಯಾ’ ಪವನ್ಕುಮಾರ್ ನಾಯಕರಾಗಿ ನಟಿಸುತ್ತಿದ್ದು, ಇವರಿಗೆ ಜೋಡಿಯಾಗಿ ಶರ್ಮಿಳಾ ಮಾಂಡ್ರೆ, ಸೋನಲ್ ಮೊಂಥೆರೋ, ಆದಿತಿ ಪ್ರಭುದೇವ ನಟಿಸುತ್ತಿದ್ದಾರೆ.

ಈ ಚಿತ್ರವು 2009 ರಲ್ಲಿ ತೆರೆ ಕಂಡು ಯಶಸ್ವಿಯಾಗಿದ್ದ ‘ಗಾಳಿಪಟ’ ಚಿತ್ರದ ಸಿಕ್ವೇಲ್ ಆಗಿದ್ದರೂ ಸಹ ಈ ಚಿತ್ರದ ಕಥೆಗೂ, ಆ ಚಿತ್ರದ ಕಥೆಗೂ ಯಾವುದೇ ಸಂಬಂಧವಿಲ್ಲ. ಅಂದ ಹಾಗೆ ಕುದುರೆಮುಖದಲ್ಲಿ ಆರಂಭವಾಗುವ ಚಿತ್ರೀಕರಣ, ಬೆಂಗಳೂರು ಮೈಸೂರು, ಮಂಗಳೂರು, ಲಂಡನ್, ಮಲೇಶ್ಯಾದಲ್ಲಿ ನಡೆಯಲಿದೆ.

ಸದ್ಯ ಶರಣ್ ‘ಅವತಾರ್ ಪುರುಷ’ ಚಿತ್ರದಲ್ಲಿ ಬ್ಯುಸಿಯಾದರೆ. ರಿಷಿ ‘ಸಾರ್ವಜನಿಕರಿಗೆ ಸುವರ್ಣಾವಕಾಶ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾಗಳ ಕೆಲಸಗಳೊಂದಿಗೆ ‘ಗಾಳಿಪಟ-2’ ಚಿತ್ರದಲ್ಲೂ ಭಾಗಿಯಾಗಲಿದ್ದಾರೆ. ಇನ್ನು ಚಿತ್ರಕ್ಕೆ ಈಗಾಗಲೇ ಹಾಡುಗಳ ಮುದ್ರಣದ ಕೆಲಸ ಮುಗಿದಿದ್ದು. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ.

‘ಪ್ರೆಗ್ನೆನ್ಸಿ’ ಫೋಟೋಶೂಟ್ ಮಾಡಿಸಿಕೊಂಡ ಸೆಲೆಬ್ರೆಟಿಗಳು !!

galipata 2 movie shooting on kuduremukha balkani news