ಸುದ್ದಿಗಳು

ಈ ಕಾರಣಕ್ಕೆ ರಿಷಿ ‘ಗಾಳಿಪಟ-2’ ಚಿತ್ರದಿಂದ ಔಟ್ ಆದ್ರಾ!!?!!

ನಿರ್ದೇಶಕ ಯೋಗರಾಜ್ ಭಟ್ ಅವರು ಇತ್ತೀಚೆಗೆ ಬಿಡುಗಡೆಯಾದ ‘ಪಂಚತಂತ್ರ’ ಚಿತ್ರದ ಬಳಿಕ ‘ಗಾಳಿಪಟ-2’  ಹಾರಿಸಲು ರೆಡಿಯಾಗಿದ್ದಾರೆ.. ಶರಣ್, ರಿಷಿ, ಪವನ್ ಕುಮಾರ್ ನಟಿಸ ಬೇಕಿತ್ತು.. ಆದರೆ, ಅವರ ಜಾಗಕ್ಕೀಗ ಈ ಹಿಂದಿನ ಚಿತ್ರದಲ್ಲಿ ಅಭಿನಯಿಸಿದ್ದ ಗಣೇಶ್ ಮತ್ತು ದಿಗಂತ್ ರನ್ನೇ ಮತ್ತೆ ಕರೆದುಕೊಂಡು ಬರಲಾಗಿದೆ.. ಇನ್ನು ರಾಜೇಶ್ ಕೃಷ್ಣನ್ ಅಭಿನಯಿಸಿದ್ದ ಪಾತ್ರದಲ್ಲಿ ಈಗ ಪವನ್ ಕುಮಾರ್ ಅಭಿನಯಿಸಲಿದ್ದಾರೆ.

ಇದು ಕೇವಲ ಗಾಳಿ ಸುದ್ದಿ ಎನ್ನಲಾಗುತ್ತಿದ್ದಾರೂ, ಈ ವಿಷಯವನ್ನು ಈಗ ನಟ ರಿಷಿ ಟ್ವೀಟ್​ ಮಾಡುವ ಮೂಲಕ ಖಚಿತಪಡಿಸಿದ್ದಾರೆ.

“ಹಾಯ್ ..

ಅನೇಕ ಬದಲಾವಣೆಗಳು, ಚಿತ್ರೀಕರಣದ ಡೇಟ್ ಕ್ಲ್ಯಾಶ್ ಮತ್ತು ಇತರ ಅನಿವಾರ್ಯ ಕಾರಣಗಳಿಂದಾಗಿ ಗಾಳಿಪಟ 2 ರಿಂದ ಹೊರಬರಲು ನಾವು ಪರಸ್ಪರ ನಿರ್ಧರಿಸಿದ್ದೇವೆ. ಬದಲಾವಣೆ ಅನಿವಾರ್ಯವಾಗಿತ್ತು. ಇದು ಉತ್ತಮ ಸ್ಕ್ರಿಪ್ಟ್ ಮತ್ತು ಚಿತ್ರವು ಮತ್ತೊಂದು ಬ್ಲಾಕ್ಬಸ್ಟರ್ ಆಗಿರುತ್ತದೆ ಎಂದು ನನಗೆ ಖಾತ್ರಿಯಿದೆ. ಇಡೀ ತಂಡಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ

ನಾಯಕಿಯರಾಗಿ ಸೋನಲ್ ಮೊಂಥೆರೋ, ಶರ್ಮಿಳಾ ಮಾಂಡ್ರೆ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು ಮಹೇಶ್ ಬಂಡವಾಳ ಹೂಡುತ್ತಿದ್ದಾರೆ.

ಸಿಹಿ ಗೆಣಸಿನ ಆರೋಗ್ಯ ಪುರಾಣ

#galipata2 #diganth #goldenstarganesh #pawankumar

Tags