ಸುದ್ದಿಗಳು

ತೆರೆ ಕಾಣಲು ಸಿದ್ದವಾಗಿರುವ ‘ಗಂಧದ ಗುಡಿ’ ಟೀಸರ್

ಗಣೇಶ್ ಹಬ್ಬಕ್ಕೆ ಬರಲಿದೆ ‘ಗಂಧದ ಗುಡಿ’

ಡಾ. ರಾಜ್ ಕುಮಾರ್ ಮತ್ತು ಡಾ. ವಿಷ್ಣುವರ್ಧನ್ ಅಭಿನಯದ ‘ಗಂಧದ ಗುಡಿ’ ಚಿತ್ರವು ಆಧುನಿಕ ತಂತ್ರಜ್ಞಾನದೊಂದಿಗೆ ತೆರೆ ಕಾಣಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ.

ಬೆಂಗಳೂರು, ಸ.04: ವರನಟ ಡಾ. ರಾಜ್ ಕುಮಾರ್ ಅಭಿನಯಿಸಿರುವ 150 ನೇ ಚಿತ್ರ ‘ಗಂಧದ ಗುಡಿ’. ಸಧ್ಯ ಈ ಚಿತ್ರವು ಡಿಜಿಟಲ್ ಡಿಟಿಎಸ್ ಸೌಂಡ್ ಹಾಗೂ ಡಿಜಿಟಲ್ ಕಲರ್ ಗ್ರೇಡಿಂಗ್ ತಂತ್ರಜ್ಞಾನವೊಂದಿಗೆ ಇದೇ ತಿಂಗಳ 13 ರಂದು ಮರು ಬಿಡುಗಡೆಯಾಗುತ್ತಿದೆ.

ಹಳೆಯ ಚಿತ್ರಗಳು ಮರು ಬಿಡುಗಡೆ

ಈಗಾಗಲೇ ಡಾ. ರಾಜ್ ಕುಮಾರ್ ಅವರ ಹಲಾವರು ಚಿತ್ರಗಳು ಡಿಜಿಟಲ್ ತಂತ್ರಜ್ಞಾನ ಮತ್ತು ಕಲರ್ ನಲ್ಲಿ ತೆರೆ ಕಂಡಿವೆ. ‘ಬಬ್ರುವಾಹನ’,’ದಾರಿ ತಪ್ಪಿದ ಮಗ’,’ಸತ್ಯ ಹರಿಶ್ಚಂದ್ರ’, ‘ಕಸ್ತೂರಿ ನಿವಾಸ’ ಸೇರಿದಂತೆ ಸದ್ಯ ‘ಎರಡು ಕನಸು’ ಚಿತ್ರವೂ ತೆರೆಗೆ ಬರುತ್ತಿವೆ.

ಗಮನ ಸೆಳೆದ ಟೀಸರ್

ಸದ್ಯ “ಗಂಧದ ಗುಡಿ” ಚಿತ್ರದ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿದೆ. ಈಗಾಗಲೇ ಯಶಸ್ಸು ಕಂಡಿರುವ ಮತ್ತು ಹಲವಾರು ಬಾರೀ ದೂರದರ್ಶನದಲ್ಲಿಯೂ ಪ್ರಸಾರವಾಗಿದ್ದರೂ ಮತ್ತೆ ಈ ಚಿತ್ರವನ್ನು ತೆರೆಯ ಮೇಲೆ ನೋಡಬೇಕೆನ್ನುವುದು ಪ್ರೇಕ್ಷಕರ ಅಭಿಪ್ರಾಯ. ಇನ್ನು ಈ ಚಿತ್ರದಲ್ಲಿ ಡಾ. ರಾಜ್ ಕುಮಾರ್ ಅವರೊಂದಿಗೆ ಡಾ. ವಿಷ್ಣುವರ್ಧನ್ ಸಹ ನಟಿಸಿದ್ದಾರೆ.

ತಾರಾಬಳಗ

ಈ ಚಿತ್ರವನ್ನು ನಿರ್ಮಾಪಕ ಎಂ.ಪಿ ಶಂಕರ್ ಅವರು ತಮ್ಮ ಭರಣಿ ಚಿತ್ರ ಸಂಸ್ಥೆಯ ಮೂಲಕ ನಿರ್ಮಿಸಿದ್ದರು. ಈ ಚಿತ್ರದಲ್ಲಿ ಡಾ. ರಾಜ್ ಕುಮಾರ್, ಡಾ. ವಿಷ್ಣುವರ್ಧನ್, ಕಲ್ಪನಾ, ಎಂ.ಪಿ ಶಂಕರ್, ಬಾಲಕೃಷ್ಣ, ನರಸಿಂಹರಾಜು, ಲಕ್ಷ್ಮಿ ದೇವಿ ಸೇರಿದಂತೆ ಇತರರು ಅಭಿನಯಿಸಿದ್ದು, ಚಿತ್ರವನ್ನು ವಿಜಯ್ ನಿರ್ದೇಶನ ಮಾಡಿದ್ದರು. ಈ ಚಿತ್ರವು 1973 ರಲ್ಲಿ ತೆರೆಗೆ ಬಂದಿತ್ತು. ಈ ಚಿತ್ರದ ಹಾಡುಗಳೆಲ್ಲವೂ ಯಶಸ್ವಿಯಾಗಿದ್ದು, ಚಿತ್ರಕ್ಕೆ ರಾಜನ್ – ನಾಗೇಂದ್ರ ಸಂಗೀತ ನೀಡಿದ್ದಾರೆ.

ಈಗ ಈ ಚಿತ್ರವು ಮರು ಬಿಡುಗಡೆಗೊಳ್ಳುತ್ತಿರುವುದರಿಂದ ಸಹಜವಾಗಿ ಅಭಿಮಾನಿಗಳಲ್ಲಿ ಸಂತಸ ಮೂಡಿದೆ. ಧೀರಜ್ ಎಂಟರ್ ಪ್ರೈಸಸ್ ಸಂಸ್ಥೆಯವರು ಈ ಚಿತ್ರವನ್ನು ನೂರಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ತೆರೆಗೆ ತರುತ್ತಿದ್ದಾರೆ.

Tags