ಸುದ್ದಿಗಳು

ರಾಜಸ್ಥಾನದಲ್ಲಿ ‘ಗಂಡುಗಲಿ ಮದಕರಿ ನಾಯಕ’ ಶೂಟಿಂಗ್..!!!

‘ಧೀರ’ ರಾಕ್ ಲೈನ್ ವೆಂಕಟೇಶ್ ನಿರ್ಮಿಸುತ್ತಿರುವ ಐತಿಹಾಸಿಕ ಕಥೆಯನ್ನುಳ್ಳ ಸಿನಿಮಾ ‘ಗಂಡುಗಲಿ ಮದಕರಿ ನಾಯಕ’. ಈ ಚಿತ್ರದಲ್ಲಿ ಡಿ-ಬಾಸ್ ದರ್ಶನ್ ನಟಿಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ಸುದ್ದಿ ಮಾಡಿರುವ ಈ ಸಿನಿಮಾ ಆಗಸ್ಟ್ ತಿಂಗಳಲ್ಲಿ ರಾಜಸ್ಥಾನದಲ್ಲಿ ಶುರುವಾಗಲಿದೆ.

ಅಂದ ಹಾಗೆ ಈ ಐತಿಹಾಸಿಕ ಸಿನಿಮಾವನ್ನು ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸುತ್ತಿದ್ದು, ಚಿತ್ರಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಅಲ್ಲದೇ ಚಿತ್ರದ ಕಲಾವಿದರ ವಸ್ತ್ರ ವಿನ್ಯಾಸಕ್ಕಾಗಿ ಹೆಚ್ಚಿನ ಸಮಯ ಹಿಡಿಯುತ್ತದೆ. ಹೀಗಾಗಿ ಎಲ್ಲಾ ವಿಭಾಗಗಳಲ್ಲೂ ಕೆಲಸ ನಡೆಯುತ್ತಿದೆ.

ಇನ್ನು ದರ್ಶನ್ ಈ ಹಿಂದೆ ‘ಸಂಗೊಳ್ಳಿ ರಾಯಣ್ಣ’ ಬಹುದೊಡ್ಡ ಯಶಸ್ಸ ಕಂಡ ಚಿತ್ರದಲ್ಲಿ ನಟಿಸಿದ್ದರು. ಇದೀಗ ‘ಗಂಡುಗಲಿ ಮದಕರಿ ನಾಯಕ’ ಶುರು ಮಾಡುತ್ತಿದ್ದು, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಮೂಡಿವೆ.

ಸದ್ಯ ದರ್ಶನ್ ‘ರಾಬರ್ಟ್’ ಚಿತ್ರದ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದಾರೆ. ಹೀಗಾಗಿ ಈ ಹೊಸ ಸಿನಿಮಾ ಆಗಸ್ಟ್ ತಿಂಗಳಲ್ಲಿ ಶೂಟಿಂಗ್ ಆರಂಭವಾಗಲಿದೆ. ಇನ್ನು ಚಿತ್ರಕ್ಕೆ ಹಂಸಲೇಖಾ ಸಂಗೀತ ನೀಡುತ್ತಿದ್ದು, ಐತಿಹಾಸಿಕ ಸಿನಿಮಾವನ್ನು ಚಿತ್ರದುರ್ಗ, ಮುಂಬಯಿ, ಹೈದರಾಬಾದ್ ಹಾಗೂ ರಾಜಸ್ತಾನಗಳಲ್ಲಿ ಶೂಟಿಂಗ್ ನಡೆಯಲಿದೆ,

ಅತ್ಯದ್ಭುತ ನಿರೂಪಕಿ ಮಜಾ ಟಾಕೀಸ್ ನ ರಾಣಿ!

#gandugalumadakarinayaka, #movie, #darshan, #balkaninews #filmnews, #kannadasuddigalu

Tags