ಸುದ್ದಿಗಳು

‘ಗಿಮ್ಮಿಕ್’ ಮಾಡೋಕೆ ರೆಡಿಯಾದ ‘ಚಮಕ್’ ಹೀರೋ..

ಫ್ಯಾನ್ಸ್ ಗಳಿಗೆ ಹೊಸ ಅಪ್ಡೇಟ್ ಕೊಟ್ಟ ಗೋಲ್ಡನ್ ಸ್ಟಾರ್

ಗಿಮ್ಮಿಕ್ ಚಿತ್ರದ ಶೂಟಿಂಗ್​ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ನಂತರ ಚಿತ್ರತಂಡ ಶ್ರೀ ಲಂಕಾಗೆ ತೆರಳಲಿದೆ.

ಬೆಂಗಳೂರು,ಸೆ.02: ಈತ ಸ್ಯಾಂಡಲ್​ವುಡ್​ನ ಚಿನ್ನದ ಹುಡುಗ. ರೋಮ್ಯಾಂಟಿಕ್​ ಚಿತ್ರಗಳ ಸರದಾರ. ನಕ್ಕು ನಗಿಸುವ ಮೂಲಕ ಕಾಮಿಡಿ ಟೈಮ್​, ಸೂಪರ್​ ಮಿನಿಟ್​ ಅಂದುಕೊಂಡು ಪ್ರೇಕ್ಷಕರಿಗೆ ಇನ್ನೂ ಹತ್ತಿರವಾದ ಹ್ಯಾಂಡ್ಸಮ್ ಹಂಕ್​.. ಯಾರು ಅಂತ ಗೊತ್ತಾಗಿರಬೇಕಲ್ವಾ.. ಅದೇ ರೀ ಮಳೆ ಹುಡುಗ ಗಣೇಶ್​.. ಈ ಗೋಲ್ಡನ್​ ಸ್ಟಾರ್​ ಈಗ ಅಭಿಮಾನಿಗಳಿಗೆ ಗೋಲ್ಡನ್​ ಸುದ್ದಿ ಒಂದನ್ನು ಕೊಟ್ಟಿದ್ದಾರೆ. ಸಿನಿ ಜೀವನದಲ್ಲಿ ಮೊದಲು ಅವಮಾನ. ಆಮೇಲೆ ಅನುಮಾನ ಅದಾದ ನಂತರ ಸನ್ಮಾನ ಅನ್ನೋ ಪಾಲಿಸಿಯಲ್ಲೇ ಗಣೇಶ್ ಕೂಡ ಬೆಳೆದು ಬಂದಿದ್ದು. ಅದನ್ನು ಕೆಲವು ಸಲ ಹೇಳಿಕೊಂಡಿದ್ದಾರೆ ಕೂಡ ಗೋಲ್ಡನ್ ಸ್ಟಾರ್. ಆದರೆ ಇಂದು ಸ್ಟಾರ್​ ಆಗೋಕೆ ಕಾರಣ ಅವರ ಸ್ಥೈರ್ಯ, ಡೆಡಿಕೇಷನ್​, ಕಾನ್ಫಿಡೆನ್ಸ್​, ಏನಾದರೂ ಸರಿ ಮುಂದೆ ನುಗ್ಗುತ್ತೇನೆ ಅನ್ನೋ ಛಲ ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸದೆ.. ಚೆಲ್ಲಾಟದಿಂದ ಕೆರಿಯರ್​ ಶುರು ಮಾಡಿದ್ದ ಈ ಕಾಮಿಡಿ ಟೈಮ್​ ಹೀರೋಗೆ ಟರ್ನಿಂಗ್​ ಪಾಯಿಂಟ್​ ಕೊಟ್ಟಿದ್ದು ಮುಂಗಾರು ಮಳೆ.

Image result for golden star ganesh

ಹಾರರ್​ ಸಿನಿಮಾ

ಅದೃಷ್ಟವೆಂಬಂತೆ ಮುಂಗಾರು ಮಳೆಯಲ್ಲಿ ನಟನೆಯ ಮಳೆ ಸುರಿಸಿದ್ದೇ ತಡ ಗಣಿಯ ಬಹುತೇಕ ಎಲ್ಲ ಸಿನಿಮಾಗಳು ಹಿಟ್​ ಆಗುತ್ತನೇ ಹೋಯ್ತು. ಇತ್ತೀಚೆಗಷ್ಟೇ ‘ಚಮಕ್’​ ಚಿತ್ರದಲ್ಲೂ ಚಮಕ್​ ಕೊಡುತ್ತಾ ಇನ್ನೂ ಚಾರ್ಮ್​ ಉಳಿಸಿಕೊಂಡಿರುವ ಗಣಿ ಈಗ ಹೊಸ ಪ್ರಾಜೆಕ್ಟ್​ಗೆ ಕೈ ಹಾಕಿದ್ದಾರೆ. ಗಣೇಶ್​ ತಮ್ಮ ಕೆರಿಯರ್​ನಲ್ಲೇ ಮೊದಲ ಬಾರಿ​ ಹಾರರ್​ ಸಿನಿಮಾದ ಮೂಲಕ ಪ್ರೇಕ್ಷಕರನ್ನ ಬೆಚ್ಚಿ ಬೀಳಿಸೋಕೆ ಬರ್ತಿದ್ದಾರೆ. ನಾಗಣ್ಣ ನಿರ್ದೇಶನದ ಹೊಸ ಹಾರರ್​ ಚಿತ್ರದಲ್ಲಿ ಗಣಿ ನಟಿಸುತ್ತಿದ್ದು, ಈ ಸಿನಿಮಾದ ಮುಹೂರ್ತ ನೆರವೇರಿದೆ. ಇನ್ನು ಗಣಿಗೆ ಜೋಡಿಯಾಗಿ ಪಂಜಾಬಿ ಬೆಡಗಿ ರೋನಿಕಾ ಸಿಂಗ್ ಕಾಣಿಸಿಕೊಂಡಿದ್ದು, ಚಿತ್ರಕ್ಕೆ ‘ಗಿಮ್ಮಿಕ್​’ ಅ್ನುವ ಶೀರ್ಷಿಕೆ ಖಚಿತವಾಗಿದೆ. ಸದ್ಯ ಈ ‘ಗಿಮ್ಮಿಕ್’​ ಚಿತ್ರದ ಶೂಟಿಂಗ್​ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ನಂತರ ಚಿತ್ರತಂಡ ಶ್ರೀ ಲಂಕಾಗೆ ತೆರಳಲಿದೆ. ಅರ್ಜುನ್​ ಜನ್ಯರ ಮ್ಯೂಸಿಕ್​ , ರವಿವರ್ಮಾರ ಸ್ಟಂಟ್​ ಡೈರೆಕ್ಷನ್​  ಈ ಸಿನಿಮಾದಲ್ಲಿರಲಿದೆ. ದೀಪಕ್​ ಸಾಮಿ ನಿರ್ಮಾಣದ ಈ ಚಿತ್ರದಲ್ಲಿ ಸಾಧುಕೋಕಿಲ, ಶೋಭರಾಜ್​, ಹಾಗೂ ಸುಂದರ್​ರಾಜ್​ ಮುಖ್ಯ ತಾರಬಳಗದಲ್ಲಿದ್ದಾರೆ. ಕಚಗುಳಿ ಇಡುವ ಸಂಭಾಷಣೆಗಳನ್ನು ನೀಡುವ ಮೂಲ ಅಭಿಮಾನಿಗಳನ್ನು ರಂಜಿಸುತ್ತಿದ್ದ ಸ್ಯಾಂಡಲ್’ವುಡ್’ನ ಗೋಲ್ಡನ್ ಸ್ಟಾರ್ ಗಣೇಶ್ ಅವರು ನಾಗಣ್ಣ ನಿರ್ದೇಶನದ ಹಾರರ್-ಕಾಮಿಡಿ ಚಿತ್ರದಲ್ಲಿ ಹೇಗೆ ಕಮಾಲ್​ ಮಾಡಲಿದ್ದಾರೆ ಅನ್ನೋದನ್ನು ನೋಡಬೇಕು

 

Tags