ಸುದ್ದಿಗಳು

ಗಣೇಶ್ ಬಂದರೆ ಮಾತ್ರ ನಾನು ತಾಳಿ ಕಟ್ಟಿಸಿಕೊಳ್ತಿನಿ ಎಂದು ಹಠ ಹಿಡಿದ ವಧು..!!!

ಅಂತೂ ಕೊನೆಗೂ ಗಣೇಶ್ ಬಂದ್ಮೇಲೇ ನಡೆದ ಮದುವೆ

ಬೆಂಗಳೂರು, ಡಿ.7: ಪ್ರತಿಯೊಬ್ಬ ಕಲಾವಿದರಿಗೂ ಲಕ್ಷಾಂತರ ಅಭಿಮಾನಿಗಳಿರುತ್ತಾರೆ. ಅವರಲ್ಲಿ ಕೆಲವರು ಅತೀ ಹುಚ್ಚು ಅಭಿಮಾನಿಗಳು ಸಹ ಇರುತ್ತಾರೆ. ಇನ್ನು ನಿನ್ನೆಯಷ್ಟೇ ಇಲ್ಲೊಂದು ಘಟನೆ ಬೆಂಗಳೂರಿನ ನಾಯಂಡಳ್ಳಿಯಲ್ಲಿ ನಡೆದಿದೆ.

ಮದುವೆಗೆ ಬಂದ ಗಣೇಶ್

ಮದುವೆಯಲ್ಲಿ ಮಧು ಮಗಳು ‘ಗೋಲ್ಡನ್ ಸ್ಟಾರ್’ ಗಣೇಶ್ ಉಪಸ್ಥಿತಿಯಲ್ಲೇ ತಾಳಿ ಕಟ್ಟಿಸಿಕೊಳ್ಳುವುದಾಗಿ ಹಠ ಹಿಡಿದು ಕುಳಿತಿದ್ದಳು. ಈ ವಿಷಯ ತಿಳಿದ ಗಣೇಶ್ ಮದುವೆ ಮಂಟಪಕ್ಕೆ ಬಂದು ಮದುವೆ ಮಾಡಿಸಿದ್ದಾರೆ.

ಶೂಟಿಂಗ್ ನಲ್ಲಿದ್ದ ಗಣೇಶ್

ತಮ್ಮ ಅಭಿಮಾನಿ ಮದುವೆ ಆಗುವುದಿಲ್ಲ ಅಂತ ಹಠ ಹಿಡಿದಿರುವ ಸುದ್ದಿ ಕೇಳಿ, ಗಣೇಶ್ ಕೂಡಲೇ ಶೂಟಿಂಗ್ ನಿಲ್ಲಿಸಿ, ನಾಯಂಡಳ್ಳಿಯ ಮದುವೆ ಮಂಟಪಕ್ಕೆ ಹೋಗಿ ಅಭಿಮಾನಿಯ ಮದುವೆಗೆ ಸಾಕ್ಷಿಯಾಗಿವುದರೊಂದಿಗೆ, ಆ ವಧುವಿಗೆ ಸ್ವಲ್ಪ ಬುದ್ಧಿಮಾತು ಹೇಳಿ ತಾವೇ ಮುಂದೆ ನಿಂತು ಮದುವೆಯನ್ನು ನಡೆಸಿಕೊಟ್ಟಿದ್ದಾರೆ. ಮಹಿಳಾ ಅಭಿಮಾನಿಗಳು

 

ಗಣೇಶ್ ಅಭಿನಯದ ‘ಮುಂಗಾರು ಮಳೆ’ ಚಿತ್ರ ಬಂದ ನಂತರ ಅಭಿಮಾನಿ ಬಳಗಗಳು ಹೆಚ್ಚಾದವು.. ಅದರಲ್ಲೂ ಫೀಮೇಲ್ ಫಾಲೋವರ್ಸ್ ಅವರನ್ನು ಹುಚ್ಚರಂತೆ ಪ್ರೀತಿಸಲು ಆರಂಭಿಸಿದರು.. ನಂತರ ಭರವಸೆಯ ನಟನಾಗಿ ಹೊರಹೊಮ್ಮಿದ ಅವರಿಗೆ ‘ಚೆಲುವಿನ ಚಿತ್ತಾರ’ ಮತ್ತು ‘ಗಾಳಿಪಟ’ ಚಿತ್ರಗಳು ಅವರಿಗೆ ದೊಡ್ಡ ಅಭಿಮಾನಿ ಬಳಗವನ್ನು ಸೃಷ್ಟಿಸಿತು.

ಆದರೆ, ಅಭಿಮಾನಿಗಳು ಹೀಗೆ ಅಭಿಮಾನದ ಪರಾಕಾಷ್ಠೆಯಲ್ಲಿ ಹಠ ಮಾಡಿರುವ ಸಾಕಷ್ಟು ಘಟನೆಗಳಿವೆ. ಆದರೆ ಮಹಿಳಾ ಅಭಿಮಾನಿಯೊಬ್ಬರು ಹೀಗೆ ಮೆಚ್ಚಿನ ನಟ ಬರದೇ ತಾಳಿ ಕಟ್ಟಿಸಿಕೊಳ್ಳುವುದಿಲ್ಲ ಅಂದಿದ್ದು ವಿಶೇಷವಾಗಿದೆ. ಆದರೆ ಅಭಿಮಾನ ಇರಬೇಕು.. ಆದರೆ ಅದು ಎಂದೂ ಅತಿರೇಕ ಎನಿಸಬಾರದು.. ಜೊತೆಗೆ ನಮ್ಮ ಅಭಿಮಾನದಿಂದ ಸ್ಟಾರ್ ಗಳಿಗೆ ಯಾವುದೇ ತೊಂದರೆ ಆಗಬಾರದು ಅಲ್ಲವೇ…?

Tags

Related Articles