ಸುದ್ದಿಗಳು

ನನಸಾದ ‘ಗೋಲ್ಡನ್’ ಕನಸು: ಖುಷಿಯನ್ನು ಹಂಚಿಕೊಂಡ ಗಣೇಶ್

ಸ್ವಾಮಿ ವಿವೇಕಾನಂದ ಅವರ ಮನೆಗೆ ಭೇಟಿ ಮಾಡಿದ ಗಣೇಶ್

ಬೆಂಗಳೂರು.ಡಿ.15: ಗೋಲ್ಡನ್ ಸ್ಟಾರ್ ಗಣೇಶ್ ಒಂದು ಕನಸನ್ನು ಕಂಡಿದ್ದರು. ಅದು ನಿನ್ನೆಯಷ್ಟೇ ನೆರವೇರಿದೆ. ಅದನ್ನು ಅವರು ತಮ್ಮ ಟ್ವಿಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.

ಕೊಲ್ಕತ್ತಾದಲ್ಲಿ ಗಣೇಶ್

ಸದ್ಯ ಗಣೇಶ್ ‘ಗೀತಾ’ ಚಿತ್ರದ ಚಿತ್ರೀಕರಣಕ್ಕಾಗಿ ಕೊಲ್ಕತ್ತಾದಲ್ಲಿದ್ದಾರೆ. ಅಲ್ಲಿ ಸಿನಿಮಾ ಶೂಟಿಂಗ್ ನಡೀತಿದೆ. ಶೂಟಿಂಗ್ ನಡುವೆ ಬಿಡುವು ಮಾಡಿಕೊಂಡು, ಲೋಕ ಮೆಚ್ಚಿದ ಸನ್ಯಾಸಿ ಸ್ವಾಮಿ ವಿವೇಕಾನಂದರ ಜನ್ಮ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅವರ ಮನೆಯಲ್ಲಿ ಸುತ್ತಾಡಿದ್ದಾರೆ. ಜೊತೆಗೆ ಮನೆ ಎದುರಿಗಿರುವ ವಿವೇಕಾನಂದರ ಪ್ರತಿಮೆ ಬಳಿ ನಿಂತು ಬಹುದಿನಗಳ ಕನಸು ಇಂದು ನನಸಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.‘ಆರೆಂಜ್’ ಖುಷಿಯಲ್ಲಿ

ಇನ್ನು ಕಳೆದ ವಾರ ಬಿಡುಗಡೆಗೊಂಡಿದ್ದ ‘ಆರೆಂಜ್’ ಚಿತ್ರ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ಗಣೇಶ್ ಹಾಗೂ ಪ್ರಿಯಾ ಆನಂದ್ ಜೋಡಿ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ. ಈ ಚಿತ್ರದ ಬಗ್ಗೆಯೂ ಸಂತಸ ಹಂಚಿಕೊಂಡಿರುವ ಅವರು, ‘ಗೀತಾ’ ಚಿತ್ರದ ಬಗ್ಗೆಯೂ ಮಾತನಾಡಿದ್ದಾರೆ.ಖಂಡಿತ ಇಷ್ಟವಾಗುತ್ತದೆ

ಗಣೇಶ್ ಅಭಿನಯಿಸುತ್ತಿರುವ ‘ಗೀತಾ’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾದಾಗಿನಿಂದಲೂ ಈ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ದುಪ್ಪಟ್ಟಾಗಿದೆ. ಶಂಕರ್ ನಾಗ್ ಅಭಿನಯದ ‘ಗೀತಾ’ ಚಿತ್ರ ಅಭಿಮಾನಿಗಳ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿದೆ. ಹೀಗಾಗಿ ಈ ಚಿತ್ರವೂ ಸಹ ಖಂಡಿತ ನಿಮ್ಮನ್ನು ಮನ ರಂಜಿಸಲಿದೆ ಎನ್ನುತ್ತಾರೆ.

 

Tags