ಸುದ್ದಿಗಳು

ಉಪೇಂದ್ರರ ಮನೆಯಲ್ಲಿ ಗಣೇಶ ಹಬ್ಬದ ಸಂಭ್ರಮ…

ಗಣೇಶನ ಭಕ್ತರಾಗಿರುವ ಉಪೇಂದ್ರ

ಬೆಂಗಳೂರು, ಸ.14: ನಿನ್ನೆ ಗೌರಿ ಗಣೇಶ ಚತುರ್ಥಿ. ಎಲ್ಲರಂತೆ ನಟ ರಿಯಲ್ ಸ್ಟಾರ್ ಉಪೇಂದ್ರರ ಮನೆಯಲ್ಲೂ ಈ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಕತ್ರಿಗುಪ್ಪೆಯಲ್ಲಿರುವ ಮನೆಯಲ್ಲಿ ಉಪ್ಪಿ ಕುಟುಂಬ, ಹಬ್ಬದ ಸಡಗರದಲ್ಲಿ ಮಿಂದೆದ್ದಿದೆ. ಸ್ವತಃ ಉಪ್ಪಿ ತಮ್ಮ ಪತ್ನಿ ಜತೆ ಸೇರಿ ಗಣೇಶನ ಮೂರ್ತಿಗೆ ಅಲಂಕಾರ ಮಾಡಿ ಪೂಜೆ ಸಲ್ಲಿಸಿದ್ದಾರೆ.

ಇಡೀ ಕುಟುಂಬವೇ ಭಾಗಿ

ಈ ಹಬ್ಬದ ಸಂಭ್ರಮದಲ್ಲಿ ಉಪೇಂದ್ರರ ಇಡೀ ಕುಟುಂಬವೇ ಭಾಗಿಯಾಗಿತ್ತು. ಇನ್ನು ಸ್ವತಃ ಉಪ್ಪಿಗೆ ಅವರಿಗೆ ಗಣೇಶನ ಮೇಲೆ ತುಂಬಾ ನಂಬಿಕೆ. ಪ್ರತಿವರ್ಷ ಉಪ್ಪಿ ಮನೆಯಲ್ಲಿ ಗಣೇಶನ ಉತ್ಸವ ಜೋರಾಗಿ ನಡೆಯುತ್ತದೆ. ಇನ್ನು ಅವರ ಸಿನಿಮಾಗಳಲ್ಲಿಯೂ ಅಷ್ಟೇ, ಯಾವುದಾದರೂ ಒಂದು ರೂಪದಲ್ಲಿ ಒಂದು ಕಡೆಯಾದರೂ ದೇವರಾದ ಗಣೇಶ ಬಂದು ಹೋಗುತ್ತಾರೆ.

ಮನೆಯಲ್ಲಿ ಸಂಭ್ರಮ

ಪ್ರತಿವರ್ಷ ತಪ್ಪದೇ ಗಣೇಶನ ಮೂರ್ತಿಯನ್ನು ಕೂರಿಸಿ, ಪೂಜಿಸುವ ಉಪೇಂದ್ರರ ಮನೆಯಲ್ಲಿ ಈ ಸಲವೂ ಸಹ ಹಬ್ಬದ ವಾತಾವರಣ ಕಳೆಗೆಟ್ಟಿದೆ. ತಮ್ಮ ಮನೆಯಲ್ಲಿ ನಡೆಯುವ ಗಣಪತಿ ಹಬ್ಬಕ್ಕೆ ತಾವೇ ತಳಿರು ತೋರಣಗಳನ್ನು ಉಪ್ಪಿಯವರೇ ಕಟ್ಟುತ್ತಾರೆ.

ಈ ಹಬ್ಬದ ಸಂಭ್ರಮವನ್ನು ಉಪ್ಪಿಯವರು ತಮ್ಮ ಪತ್ನಿ ಪ್ರಿಯಾಂಕಾ, ಹಾಗೂ ತಂದೆ-ತಾಯಿ, ಅಣ್ಣ-ಅತ್ತಿಗೆ- ಅವರ ಮಕ್ಕಳೊಂದಿಗೆ ಆಚರಿಸಿದ್ದಾರೆ.

‘ಎ’ ಸಿನಿಮಾ

ಇನ್ನು ಉಪೇಂದ್ರ ಹಾಗೂ ಗಣೇಶ ಎಂದ ಕೂಡಲೇ ‘ಎ’ ಚಿತ್ರ ನೆನಪಾಗುತ್ತದೆ. ಈ ಚಿತ್ರದಲ್ಲಿ ನಾಯಕ ಉಪ್ಪಿ, ಗಣೇಶನ ಬೈಯುತ್ತಲೇ ‘ಗಾಡ್ ಈಸ್ ಗ್ರೇಟ್’ ಎಂದು ಆ ಮೂರ್ತಿಯನ್ನು ಎತ್ತಿಕೊಂಡು ಬಾವಿಗೆ ಬಿಸಾಕುತ್ತಾರೆ. ಈ ಚಿತ್ರವು ಸೂಪರ್ ಹಿಟ್ ಆಗಿತ್ತು. ಹಾಗೂ ‘ಗಾಟ್ ಈಸ್ ಗ್ರೇಟ್’,’ಗುಡ್ ಲಕ್’,’ಐ ಆ್ಯಮ್ ಗಾಡ್’ ಎಂಬ ಡೈಲಾಗ್ ಗಳು ಜನಪ್ರಿಯವಾಗಿದ್ದವು.

 

 

Tags