ಸುದ್ದಿಗಳು

ಶ್ರೀಲಂಕಾ ಉಗ್ರರರ ದಾಳಿ: ಗೆಳೆಯರನ್ನು ಕಳೆದುಕೊಂಡ ಗಣಿಯ ಭಾವುಕ ಪೋಸ್ಟ್!!

ಬೆಂಗಳೂರು,ಏ.24: ಭಾನುವಾರ ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದಲ್ಲಿ ಶ್ರೀಲಂಕಾ ಪ್ರವಾಸಕ್ಕೆ ತೆರಳಿದಲ್ಲಿದ್ದ ಕನ್ನಡಿಗರಲ್ಲಿ 7 ಮಂದಿ ಸಾವನ್ನಪ್ಪಿದ್ದರು.. ರಾಜ್ಯದ ಐವರ ಮೃತದೇಹ ಮಂಗಳವಾರ ತಡರಾತ್ರಿ ಬೆಂಗಳೂರಿಗೆ ಆಗಮಿಸಿತ್ತು. ಸ್ಪೋಟದಲ್ಲಿ ಒಟ್ಟು 8 ಕನ್ನಡಿಗರು ಸಾವನ್ನಪ್ಪಿದ್ದು ಇದರಲ್ಲಿ ಐವರ ಶವಗಳು ಬೆಂಗಳೂರಿಗೆ ಆಗಮಿಸಿದ್ದು ಕುಟುಂಬಿಗರು, ಆಪ್ತರ ಆಕ್ರಂದನ ಮುಗಿಲು ಮುಟ್ಟಿದೆ. ಈಗ ತಮ್ಮ ಆತ್ಮೀಯ ಗೆಳೆಯರನ್ನು ಕಳೆದುಕೊಂಡಿರುವ ಗಣೇಶ್ ತಮ್ಮ ಗೆಳೆಯರನ್ನು ನೆನೆದು ನಟ ಗಣೇಶ್ ಭಾವುಕ ಪೋಸ್ಟ್ ಮಾಡಿದ್ದಾರೆ.

ದುಃಖವನ್ನು ವ್ಯಕ್ತಪಡಿಸಲು ಯಾವುದೇ ಪದಗಳಿಲ್ಲ

ತಮ್ಮ ಟ್ವಿಟ್ಟರ್ ನಲ್ಲಿ ಗೆಳೆಯರೊಂದಿಗಿನ ಫೋಟೋ ಹಂಚಿಕೊಂಡಿರುವ ನಟ ಗಣೇಶ್, ನೀವು ನಮ್ಮೊಂದಿಗೆ ನಂಬುವುದಿಲ್ಲ, ದುಃಖವನ್ನು ವ್ಯಕ್ತಪಡಿಸಲು ಯಾವುದೇ ಪದಗಳಿಲ್ಲ, ಪುಟ್ಟರಾಜು ಎನ್ ಮರೆಗೌಡ (ಅಪ್ಪಿ) ನನ್ನ ಪ್ರೀತಿಯ ಸ್ನೇಹಿತನು ನಿಮ್ಮನ್ನು ಮಿಸ್ ಮಾಡುತ್ತೇನೆ ಶ್ರೀಲಂಕಾದಲ್ಲಿ ನಡೆದ ಉಗ್ರರ ದಾಳಿಯನ್ನು ನಾನು ಖಂಡಿಸುತ್ತೇನೆ ಎಂದು ತಿಳಿಸಿದ್ದಾರೆ.

ಅಮೂಲ್ಯ ವರ್ಕೌಟ್!

#sandalwood #ganesh #srilanka #terroristattack

Tags