ಸುದ್ದಿಗಳು

ಪ್ರಥಮ್ ಗೆ “ನೀನೇ ಭಯಂಕರ ನಟ” ವೆಂದ ಗೋಲ್ಡನ್ ಸ್ಟಾರ್.

ಇಂದು ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ 38ನೇ ಹುಟ್ಟುಹಬ್ಬದ ಸಂಭ್ರಮ. ಈ ಸಂಭ್ರಮದಲ್ಲಿ ಅಭಿಮಾನಿಗಳೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಗಣೇಶ್ ಅವರಿಗೆ ನಟ ಪ್ರಥಮ್ ಅವರೂ ಸಹ ವಿಶೇಷವಾಗಿ ಶುಭ ಹಾರೈಸಿದ್ದಾರೆ.

“ಅನಂತ್ ನಾಗ್ –ಶಂಕರನಾಗ್, ರಣಧೀರ-ಮಗಧೀರ, ಉದಯಕುಮಾರ್-ಕಲ್ಯಾಣಕುಮಾರ್, ಹ್ಯಾಫಿ ಮ್ಯಾರೀಡ್ ಲೈಫ್ , ಸ್ವಾರಿ, ಹ್ಯಾಫಿ ಬರ್ತಡೇ, ಒಳ್ಳೆದಾಗಲಿ ಬಾಸ್” ಎಂದು ವಿಶೇಷವಾಗಿ ಗಣೇಶ್ ಅವರೊಂದಿಗೆ ಜೊತೆಗೆ ನಿಂತು ಬರ್ತಡೇ ವಿಶ್ ಮಾಡಿದ್ದಾರೆ. ಹಾಗೆಯೇ ಗಣೇಶ್ ಅವರು ಮುಗುಳುನಗುತ್ತಾ ಪ್ರಥಮ್ ಅವರ ಮುಂದಿನ ಚಿತ್ರ “ಎಮ್.ಎಲ್.ಎ” ಗೂ ವಿಶೇಷವಾಗಿ ಶುಭ ಹಾರೈಸಿದ್ದಾರೆ.

“ಆಲ್ ದಿ ವೇರಿ ಬೆಸ್ಟ್ ಪ್ರಥಮ್, ನಿನ್ನ “ಎಮ್.ಎಲ್.ಎ’ ಹಾಗೂ “ನಟ ಭಯಂಕರ”ಕ್ಕೆ ನೀನೇ ಭಯಂಕರ, ನಟ ಭಯಂಕರ ಅಂತ ಟೈಟಲ್ ಇಟ್ಟಿದ್ದಿಯಾ ಭಯಂಕರವಾಗಿ ಒಳ್ಳೆದಾಗಲಿ” ಎಂದು ಶುಭ ಹಾರೈಸಿದ್ದಾರೆ. “ಇನ್ನು ಬರ್ತಡೇ ಬಗ್ಗೆ ಏನ್ ಹೇಳ್ತಿರಾ..?” ಎಂಬ ಪ್ರಥಮ್ ಅವರ ಪ್ರಶ್ನೆಗೆ “ಥ್ಯಾಂಕೂ ವೇರಿ ಮಚ್ ವಿಷ್ ಮಾಡಿದ್ದಕ್ಕೆ”ಎಂದು ಅಭಿಮಾನಿಗಳಿಗೆ ಹಾಗೂ ಆಪ್ತರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಇನ್ನು ‘ಎಂ ಎಲ್ ಎ’ ಚಿತ್ರವು ಈಗಾಗಲೇ ಹಾಡುಗಳು ಮತ್ತು ಟ್ರೈಲರ್ ಮೂಲಕ ಗಮನ ಸೆಳೆಯುತ್ತಿದ್ದು, ಅತೀ ಶೀಘ್ರದಲ್ಲಿ ತೆರೆಯ ಮೇಲೆ ಸಿದ್ದತೆ ನಡೆಯುತ್ತಿದೆ. ಚಿತ್ರವನ್ನು ಮೌರ್ಯ ಅವರು ನಿರ್ದೇಶನ ಮಾಡಿದ್ದು, ಮಂಗಳೂರಿನ ಬೆಡಗಿ ಸೋಹಲ್ ಮಂತೆರೋ ಪ್ರಥಮ್ ಗೆ ನಾಯಕಿಯಾಗಿದ್ದಾರೆ.

ಇನ್ನು ಗಣೇಶ್ ಬರ್ತ್ ಡೇ ಹಿನ್ನೆಲೆಯಲ್ಲಿ ಇವತ್ತು ಬೆಳಗ್ಗೆ ‘ಆರೆಂಜ್’ ಚಿತ್ರತಂಡವು ಟೀಸರ್ ರಿಲೀಸ್ ಮಾಡಿದ್ದಾರೆ. ಇನ್ನು ಗಣೇಶ್ ಅವರು, ಮಗಳ ಬಲವಂತಕ್ಕೆ ಒಂದು ಹಾರರ್ ಸಿನಿಮಾ ಮಾಡುತ್ತಿದ್ದು, ನಿರ್ದೇಶಕ ನಾಗಣ್ಣ ಅವರ ಜೊತೆ ಸಿನಿಮಾ ಮಾಡುತ್ತಿರುವುದು ಸಂತಸವಾಗಿದೆ ಎಂದು ಹೇಳಿದ್ದಾರೆ ಹಾಗೂ ಅವರದೇ ಹೋಮ್ ಪ್ರೊಡೆಕ್ಷನ್ ನಲ್ಲಿ `ಗೀತಾ’ ಸಿನಿಮಾ ಮಾಡುತ್ತಿದ್ದು, ಅಭಿಮಾನಿಗಳಿಗೆ ಮತ್ತು ಸ್ನೇಹಿತರಿಗೆ ತುಂಬು ಹೃದಯದಿಂದ ಧನ್ಯವಾದ ತಿಳಿಸಿದ್ದಾರೆ.

 

@ sunil javali

Tags

Related Articles

Leave a Reply

Your email address will not be published. Required fields are marked *