ಸುದ್ದಿಗಳು

ಗಂಟು ಮೂಟೆ: ನ್ಯೂಯಾರ್ಕ್ ನಲ್ಲಿ ಬೆಸ್ಟ್ ಸ್ಕ್ರೀನ್ ಪ್ಲೇ ಅವಾರ್ಡ್ ಪಡೆದಿರುವ ಮೊದಲ ಸಿನಿಮಾ

ಇತ್ತಿಚೆಗಿನ ದಿನಗಳಲ್ಲಿ ಕನ್ನಡದ ಸಿನಿಮಾಗಳು ಬೇರೆ ರಾಷ್ಟ್ರಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆಯುತ್ತಿವೆ. ಹಾಗೆಯೇ ಕನ್ನಡ ಚಿತ್ರರಂಗದ ಕೀರ್ತಿಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಹೆಚ್ಚಿಸುತ್ತಿವೆ.

ಅದರಂತೆ ಇದೀಗ ಕನ್ನಡದ ‘ಗಂಟು ಮೂಟೆ’ ಚಿತ್ರವು ಸಹ ಕನ್ನಡ ಚಿತ್ರರಂಗದ ಕೀರ್ತಿಯನ್ನು ಹೆಚ್ಚಿಸಿದೆ ಎಂದರೆ ತಪ್ಪಾಗಲಾರದು. ಹೌದು, ನಿರ್ದೇಶಕಿ ರೂಪಾ ರಾವ್ ಚಿತ್ರೀಸಿರುವ ಈ ಚಿತ್ರವು ಇದೀಗ ಅಂದರೆ, ಮೇ 10 ರಂದು ನ್ಯೂಯಾರ್ಕ್ ನಲ್ಲಿ ನಡೆದ ಇಂಡಿಯನ್ ಚಲನ ಚಿತ್ರೋತ್ಸವ -2019 ರಲ್ಲಿ ಪ್ರದರ್ಶನ ಕಂಡು ಬೆಸ್ಟ್ ಸ್ಕ್ರೀನ್ ಪ್ಲೇ ಅವಾರ್ಡ್ ಪಡೆದುಕೊಂಡಿದೆ.

ಇನ್ನು ಈ ಚಿತ್ರದ ಎರಡು ಟೀಸರ್ ಬಿಡುಗಡೆಯಾಗಿದ್ದು, ನೋಡುಗರಿಂದ ಗಮನ ಸೆಳೆಯುತ್ತಿದೆ. ಚಿತ್ರದಲ್ಲಿ 16 ರ ಹರೆಯದ ಹುಡುಗಿಯ ದೃಷ್ಟಿಕೋನದಲ್ಲಿ ಹೆಣೆದ ಈ ಕಥೆಯಲ್ಲಿ ಹೆಣ್ಣಿನ ಭಾವನೆಗಳ ತುಡಿತಗಳು, ಶಾಲೆಯ ದಿನಗಳಲ್ಲಾಗುವ ತೊಂದರೆಗಳು, ಕುಡಿಯೊಡೆಯುವ ಪ್ರೇಮ, ವಿಧ್ಯಾಭ್ಯಾಸದ ಒತ್ತಡ ಹೀಗೆ ಸಾಕಷ್ಟು ವಿಚಾರಗಳನ್ನು ಇಲ್ಲಿ ತೋರಿಸಲಾಗಿದೆ.

ಈ ಚಿತ್ರವು 90 ರ ದಶಕದಲ್ಲಿ ನಡೆಯುವ ಕಥೆಯಾಗಿದ್ದು, ನಿರ್ದೇಶಕರೇ ಕಥೆ ಬರೆದಿದ್ದಾರೆ. ಹಾಗೆಯೇ ಚಿತ್ರದ ನಿರ್ಮಾಣದಲ್ಲಿ ರೂಪ ರಾವ್ ಮತ್ತು ಸಹದೇವ್ ಕೆಲ್ವಾಡಿ ಬಹುಮುಖ್ಯ ಪಾತ್ರವಹಿಸಿದ್ದು, ತಮ್ಮ ತಂಡದ ಇತರರು (ಕ್ರೌಡ್ ಫಂಡ್) ಸಹ ಸಾಥ್ ನೀಡಿದ್ದಾರೆ.

ಈ ಚಿತ್ರದಲ್ಲಿ ತೇಜು ಬೆಳವಾಡಿ., ನಿಶ್ಚಿತ್ , ಭಾರ್ಗವ್ ರಾಜು, ಸೂರ್ಯ ವಸಿಷ್ಠ, ಶರತ್ ಗೌಡ, ಶ್ರೀರಂಗ, ರಾಮ್ ಮಂಜುನಾಥ್, ಅರ್ಚನಾ ಶ್ಯಾಮ್, ಅನುಶ್ರೀ, ಕಶ್ಯಪ್, ಚಂದನ ಸೇರಿದಂತೆ ಅನೇಕರು ನಟಿಸಿದ್ದಾರೆ.

ನಾಯಕಿಗಾಗಿ ಎಂಟ್ರಿ ಕೊಟ್ಟ ಕೊಡಗಿನ ಕುವರಿ ಸೌಮ್ಯ

#ganthumoote #movie, #news, #balkaninews #filmnews, #kannadasuddigalu #rooparao, #tejubelavaadi

Tags