ಸುದ್ದಿಗಳು

ಗೀತ ಗೋವಿಂದಂ ಚಿತ್ರದ ಹಾಡಿಗೆ 15 ತಿಂಗಳ ಫೋರನ ವೀಡಿಯೋ ವೈರಲ್…!

ಟಾಲಿವುಡ್ ನಲ್ಲಿ ಪ್ರಸ್ತುತ ವಿಜಯ್ ದೇವರಕೊಂಡ ಹಾಗು ಕನ್ನಡತಿ ರಶ್ಮಿಕಾ ಮಂದಣ್ಣ ಜೋಡಿಯಲ್ಲಿ ‘ಗೀತ ಗೋವಿಂದಂ’ ಚಿತ್ರದ ತಯಾರಿ ಭರ್ಜರಿಯಾಗಿ ನಡೆಯುತ್ತಿದ್ದು ಈಗಾಗಲೇ ಚಿತ್ರದ ಪೋಸ್ಟರ್ ಹಾಗು ಫಸ್ಟ್ ಸಾಂಗ್ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ಸದ್ದು ಮಾಡುತ್ತಿದ್ದು ಯುಟ್ಯೂಬ್ ನಲ್ಲಿ ದಾಖಲೆ ಮೊತ್ತದ ಡಿಜಿಟಲ್ ವೀವರ್ಸ್ ಗಳನ್ನು ಕಲೆಹಾಕಿದೆ ಎನ್ನುವುದು ತಿಳಿದ ವಿಷಯ.

ಬಹು ನಿರೀಕ್ಷಿತ ಚಿತ್ರ “ಗೀತ ಗೋವಿಂದಂ” ಫಸ್ಟ್ ಸಾಂಗ್ ಮೊನ್ನೆಯಷ್ಟೆ ಬಿಡುಗಡೆಯಾಗಿದ್ದು. ರಿಲೀಸ್ ಆದ ಕೇವಲ 24 ಗಂಟೆಯಲ್ಲಿ 2 ಲಕ್ಷ ವೀವ್ಸ್ ಪಡೆದಿತ್ತು. ಈ ಸಾಂಗ್ನಲ್ಲಿಯ ವಿಜಯ್ ಹಾಗೂ ರಶ್ಮಿಕಾ ಅವರ ಕೆಮಿಸ್ಟ್ರಿ ಸಕತ್ ವರ್ಕೌಟ್ ಆಗಿದ್ದು, ಎಲ್ಲರಿಂದಲೂ ಮೆಚ್ಚುಗೆ ಪಡೆಯುತ್ತಿದೆ ಎನ್ನಲಾಗಿದೆ.

ಇದೀಗ ವಿಷಯ ನಪಾ ಅಂದ್ರೆ 15 ತಿಂಗಳ ವಯಸ್ಸಿನ ಮಗುವೊಂದು ಈ ಸಾಂಗ್ಗೆ ಮನಸೋತಿದೆ. ಕಣ್ಣು ರೆಪ್ಪೆಗಳನ್ನು ಪಿಳಿಕಿಸದೆ ಆಸಕ್ತಿಯಿಂದ ಸಾಂಗ್ ನೋಡುವ ಪರಿಗೆ ಸ್ವತಃ ನಟ ವಿಜಯ್ ಹಾಘು ನಟಿ ರಶ್ಮಿಕಾ ಮಂದಣ್ಣಾ ಸಹ ಬರಗಾಗಿದ್ದಾರೆ ಎನ್ನಲಾಗಿದೆ.

ರಾಮು ಎಂಬುವರ ಮಗು ಗೀತಗೋವಿಂದಂ ಚಿತ್ರದ ಸಾಂಗ್ನ್ನು ಕುತೂಹಲದಿಂದ ನೋಡುವ ಈ ಪುಟ್ಟ ಪಾಪು… ಈ ಹಾಡನ್ನು ಒಂದು ವೇಳೆ ಸ್ಟಾಪ್ ಮಾಡಿದ್ರೆ ಅಳುವುದರ ಮೂಲಕ ಸಾಂಗ್ ಮತ್ತೆ ಪ್ಲೇ ಮಾಡುವಂತೆ ಹಠ ಮಾಡುವ ವೀಡಿಯೋ ಈ ಸಾಂಗ್ ನ ಪಾಪ್ಯುಲಾರಿಟಿಯನ್ನು ಹೆಚ್ಚಿಸಿದ್ದು. ಈ ವಿಡಿಯೋ ನೋಡಿರುವರ ದೇವರಕೊಂಡ, ಈ ಮಗುವನ್ನು ಖುದ್ದು ಭೇಟಿಯಾಗಲು ಬಯಸಿದ್ದಾರೆ. ಆತನನ್ನು ತಮ್ಮ ಶೂಟಿಂಗ್ ಸೆಟ್ಗೆ ಕರೆತನ್ನಿ, ನಾನು ಹಾಗೂ ರಶ್ಮಿಕಾ ಅವರು ಆತನನ್ನು ನೋಡಬೇಕು ಎಂದು ಟ್ವಿಟ್ಟರ್ನಲ್ಲಿ ರಾಮು ಅವರಿಗೆ ಟ್ವಿಟ್ ಮಾಡಿದ್ದಾರೆ. ರಶ್ಮಿಕಾ ಕೂಡ ಈ ಬಾಲಕನ ವಿಡಿಯೋ ನೋಡಿ ಹರ್ಷ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Tags

Related Articles

Leave a Reply

Your email address will not be published. Required fields are marked *