ಸುದ್ದಿಗಳು

ದಾಖಲೆ ಸೃಷ್ಟಿಸುತ್ತಿರುವ ಗೀತ ಗೋವಿಂದಂ ಮೊದಲ ಹಾಡು….!

ಚಂದನವನದ ಕ್ಯೂಟ್ ಬೆಡಗಿ ರಶ್ಮಿಕಾ ಮಂದಣ್ಣ ಪ್ರಸ್ತುತ ತೆಲುಗು ಚಿತ್ರರಂಗದಲ್ಲಿ ತನ್ನ ಛಾಪು ಮೂಡಿಸಲಿದ್ದಾಳೆ. ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಜೊತೆ  “ಗೀತಗೋವಿಂದಂ” ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವುದು ತಿಳಿದ ವಿಷಯ.  ಹಿನ್ನೆಲೆಯಲ್ಲಿ ಕಳೆದ ವಾರ  ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿ ಸಾಕಷ್ಟು ಗಮನ ಸೆಳೆದಿತ್ತು, ಈಗ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ.

ಈ ಚಿತ್ರದ ಹಾಡು ಸಾಹಿತ್ಯಕ್ಕೆ ಸಂಭಂದಿಸಿದಂತೆ ಸೊಗಸಾಗಿ ಮೂಡಿಬಂದಿದ್ದು ಈ ಹಾಡಿನಲ್ಲಿ ಹಾದು ಹೋಗುವ ಸ್ಲೈಡ್ಸ್ ಗಳು ಈ ಇಬ್ಬರ ಜೋಡಿಯ ಕೆಮಿಸ್ಟ್ರಿ ನೋಡುಗರ ಗಮನ ಸೆಳೆಯುವಂತಿದೆ. ಈಗಾಗಲೇ ಈ ಹಾಡು ಬಿಡುಗಡೆಯಾಗಿ ಮೂರು ದಿನಗಳು ಕಳೆದಿದ್ದು ದಾಖಲೆ ಮೊತ್ತದ ಡಿಜಿಟಲ್ ವೀವರ್ಸ್ ಗಳನ್ನು ಕಲೆ ಹಾಕುವುದರೊಂದಿಗೆ ತೆಲುಗು ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದೆ. ವಿಜಯ್ ಹಾಗು ರಶ್ಮಿಕಾ ತಮ್ಮ ಟ್ವಿಟರ್​​ನಲ್ಲಿ ಚಿತ್ರತಂಡ ಬಿಡುಗಡೆ ಮಾಡಿರುವ ಮೊದಲ ಹಾಡು ‘ ಇಂಕೇಮ್ ಇಂಕೇಮ್ ಇಂಕೇಮ್ ಕಾವಾಲೇ ‘ ಲಿಂಕನ್ನು ಶೇರ್ ಮಾಡಿಕೊಂಡಿದ್ದಾರೆ.ಸಿನಿ ಮೂಲಗಳ ಪ್ರಕಾರ ಆಗಸ್ಟ್​​​ 15 ರಂದು ಈ ಸಿನಿಮಾವನ್ನು ನೆಚ್ಚಿನ ಚಿತ್ರಮಂದಿರಗಳಲ್ಲಿ ವೀಕ್ಷಿಸಬಹುದು ಎಂದು ತಿಳಿಸಲಾಗಿದೆ.

Tags