ಸುದ್ದಿಗಳು

ಬಿರುಗಾಳಿ ಎಬ್ಬಿಸುತ್ತಿರುವ ‘ಗೀತ ಗೋವಿಂದಂ’ ಟ್ರೈಲರ್

ಬೆಂಗಳೂರು, ಜು.23: ತೆಲುಗು ಚಿತ್ರರಂಗದಲ್ಲಿ,  ಕೌಟುಂಬಿಕ ಹಿನ್ನೆಲೆ ಇರುವ ರೊಮ್ಯಾಂಟಿಕ್ ಕಾಮಿಡಿ ಚಿತ್ರ ‘ಗೀತ ಗೋವಿಂದಂ’ ಶೀರ್ಷಿಕೆಯಲ್ಲಿ ತೆರೆಗೆ ಬರಲಿದೆ ಎನ್ನುವುದು ತಿಳಿದ ವಿಷಯ. ಈ ಚಿತ್ರಕ್ಕೆ ನಿರ್ದೇಶಕ ಪರುಶುರಾಮ್ ಅವರು ಯಾಕ್ಷನ್ ಕಟ್ ಹೇಳಲಿದ್ದಾರೆ. ಗೀತಾ ಆರ್ಟ್ಸ್ ಬ್ಯಾನರ್ಸ್ ಅಡಿಯಲ್ಲಿ ಬನ್ನು ವಾಸ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ.

ದಾಖಲೆ ಮೊತ್ತ

ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಮತ್ತು ಚಂದನವನದ ಕ್ಯೂಟ್ ಬೆಡಗಿ ರಶ್ಮಿಕಾ ಮಂದಣ್ಣ  ಚಿತ್ರದಲ್ಲಿ ಜೋಡಿಯಾಗಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್, ಟೀಸರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮೊತ್ತದ ಡಿಜಿಟಲ್ ವೀವರ್ಸ್ ಗಳನ್ನು ಕಲೆ ಹಾಕಿದೆ.

ಬ್ಲ್ಯಾಕ್ ಅಂಡ್ ವೈಟ್ ಲವ್

ಸದ್ಯ  ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಬ್ಲ್ಯಾಕ್ ಅಂಡ್ ವೈಟ್ ಥೀಮ್ ನಲ್ಲಿ ಮೂಡಿಬಂದಿದೆ. ತೆಲುಗಿನ ಶೋಭೆನ್ ಬಾಬು ಹಾಗೂ ಕನ್ನಡದ ರಾಜ್ ಕುಮಾರ್ ಅವರ ಪಾಪ್ಯುಲರ್ ಹಾಡನ್ನು ಬಳಸಿಕೊಂಡು ವಿಜಯ್ ಮತ್ತು ರಶ್ಮಿಕಾ ಪ್ರೇಮ ಝಲಕುಗಳನ್ನು ಹಂಚಿಕೊಂಡಿದ್ದಾರೆ. ಮತ್ತು ಕೆಲ ಕ್ಷಣಗಳು ಹಾಸ್ಯಸ್ಪದವಾಗಿ ಮೂಡಿ ಬಂದಿದ್ದು, ಅಭಿಮಾನಿಗಳನ್ನು ರಂಜಿಸುತ್ತಿವೆ.

Tags