ಸುದ್ದಿಗಳು

ಬಾಲಿವುಡ್ ಗೆ ರಿಮೇಕ್ ಆಗಲಿರುವ ‘ಗೀತಗೋವಿಂದಂ’ !!

ನಿಮಾ ಬಿಡುಗಡೆಗೂ ಮುನ್ನವೇ ಬಾರೀ ಸದ್ದನ್ನು ಮಾಡಿದ್ದ ಈ ಸಿನಿಮಾ

ಮುಂಬೈ,ಜ.10: ಟಾಲಿವುಡ್ ಚಾಕ್ಲೇಟ್ ಬಾಯ್ ವಿಜಯ್ ದೇವರಕೊಂಡ ಹಾಗೂ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅಭಿನಯದ ‘ಗೀತಗೋವಿಂದಂ’ ಬಾಲಿವುಡ್ ಗೆ ರಿಮೇಕ್ ಆಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ..

ಸಿನಿಮಾ ಬಿಡುಗಡೆಗೂ ಮುನ್ನವೇ ಬಾರೀ ಸದ್ದನ್ನು ಮಾಡಿದ್ದ ಈ ಸಿನಿಮಾ ಬಿಡುಗಡೆ ಆದ ನಂತರವೂ ಸದ್ದು ಮಾಡಿ ಬ್ಲಾಕ್ ಬ್ಲಸ್ಟರ್ ಹಿಟ್ ಆಯ್ತು, ಪರಶುರಾಮ್ ನಿರ್ದೇಶನದ ಈ ಸಿನಿಮಾವನ್ನು  ಬಾಲಿವುಡ್ ಗೆ ರಿಮೇಕ್ ಮಾಡಲು ಮಾತುಕತೆ ನಡೆಯುತ್ತಿದೆ ಎನ್ನಲಾಗುತ್ತಿದೆ.

Image result for Ishaan Khattar

ಯಾರು ಆಗುತ್ತಾರೆ ಬಾಲಿವುಡ್ ನಲ್ಲಿ ವಿಜಯ್ ದೇವರಕೊಂಡ?

ಇನ್ನು ವಿಜಯ್ ದೇವರಕೊಂಡ ಪಾತ್ರವನ್ನು ಯಾರು ಮಾಡಲಿದ್ದಾರೆ ಎಂಬ ಪ್ರಶ್ನಯಿತ್ತು? ಆದರೀಗ  ಹಿಂದಿಯಲ್ಲಿ ‘ಧಡಕ್’ ಹೀರೋ ಇಶಾನ್ ಖತ್ತರ್ ಮಾಡುತ್ತಿದ್ದಾರಂತೆ. ಆದರೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.. ಇನ್ನು ಶಾಹಿದ್ ಕಪೂರ್ ಕೂಡ ವಿಜಯ ದೇವರಕೊಂಡ ಅಭಿನಯದ ‘ಅರ್ಜುನ್ ರೆಡ್ಡಿ’ ಚಿತ್ರವನ್ನು ರಿಮೇಕ್ ಮಾಡುತ್ತಿದ್ದಾರೆ..  ಬಾಲಿವುಡ್ ನಲ್ಲಿ ‘ಕಬೀರ್ ಸಿಂಗ್’ ಎಂದು ಹೆಸರಿಡಲಾಗಿದೆ..

#ishan khatter #geethgovindam #balkaninews

Tags

Related Articles