ಬಾಲ್ಕನಿಯಿಂದವಿಡಿಯೋಗಳುಸುದ್ದಿಗಳು

‘ಗೀತಾ ನನ್ನ ಗೀತಾ’ ಎಂದು ಹಾಡಿದ ಗೋಲ್ಡನ್ ಸ್ಟಾರ್ ಗಣೇಶ್

ಗೋಲ್ಡನ್ ಸ್ಟಾರ್ ಗಣೇಶ್ ಎರಡು ವಿಭಿನ್ನ ಶೇಡ್ ನಲ್ಲಿ ನಟಿಸಿರುವ ‘ಗೀತಾ’ ಚಿತ್ರವು ಈಗಾಗಲೇ ತನ್ನ ವಿಭಿನ್ನ ಟೀಸರ್, ಟ್ರೈಲರ್ ಮತ್ತು ಕೆಲವು ಹಾಡುಗಳಿಂದ ಗಮನ ಸೆಳೆದಿದೆ. ಸದ್ಯ ಚಿತ್ರದ ‘ಗೀತಾ ನನ್ನ ಗೀತಾ’ ಎಂಬ ಸಾಲಿನ ಹಾಡೊಂದು ಬಿಡುಗಡೆಯಾಗಿದೆ.

ವಿಶೇಷವೆಂದರೆ, ಈ ಹಾಡನ್ನು ಕೇಳುತ್ತಿದ್ದರೆ ಶಂಕರ್ ನಾಗ್ ರವರ ‘ಗೀತಾ’ ಸಿನಿಮಾ ನೆನಪಾಗುತ್ತದೆ. ಹಾಗೆಯೇ ಅದೇ ಚಿತ್ರದ ಟ್ಯೂನ್ ನಲ್ಲಿ ಈ ಚಿತ್ರದಲ್ಲಿ ಎರಡು ಬಾರಿ ಹಾಡು ಬರುತ್ತದೆ. ಇದರ ಹೊರತಾಗಿ ಶಂಕರ್ನಾಗ್ ಅವರ ‘ಗೀತಾ’ ಚಿತ್ರಕ್ಕೂ ನಮ್ಮ ‘ಗೀತಾ’ಗೂ ಯಾವ ಸಂಬಂಧವಿಲ್ಲ’ ಎಂದು ಚಿತ್ರತಂಡದವರು ಹೇಳಿದ್ದಾರೆ.

ಇನ್ನು ಈ ಚಿತ್ರವು ಸೆ.27 ಚಿತ್ರ ಬಿಡುಗಡೆಯಾಗುತ್ತಿದ್ದು, ಚಿತ್ರದಲ್ಲಿ ಶಂಕರ್ ನಾಗ್ ಲುಕ್ಕು, ಗೋಕಾಕ್ ಚಳವಳಿಯ ಕಾವು, ರೆಟ್ರೋ ಲವ್ ಸ್ಟೋರಿ, ಡಾ ರಾಜ್ ಕುಮಾರ್ ನೆರಳು… ಹೀಗೆ ಸಾಕಷ್ಟುಅಂಶಗಳನ್ನು ನೋಡಬಹುದು.

ಇನ್ನು ಈ ಹಾಡನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ರಚಿಸಿದ್ದು ಅನೂಪ್ ರೂಬೆನ್ಸ್ ಸಂಗೀತದಲ್ಲಿ ಸೋನು ನಿಗಮ್ ಧ್ವನಿಯಾಗಿದ್ದಾರೆ. ಚಿತ್ರದಲ್ಲಿ ಗಣೇಶ್ ರೊಂದಿಗೆ ಶಾನ್ವಿ ಶ್ರೀವಾತ್ಸವ್, ಪ್ರಯಾಗ, ಪಾರ್ವತಿ, ದೇವರಾಜ್, ಸುಧಾರಾಣಿ, ರಂಗಾಯಣ ರಘು ಸೇರಿದಂತೆ ಅನೇಕರಿದ್ದಾರೆ.

ಪ್ರಜಾಧನಿ: ಉಪ್ಪಿ ಬರ್ತಡೇಗೆ ಮಹಿಳಾ ಅಭಿಮಾನಿಯಿಂದ ಸ್ಪೆಷಲ್ ಗಿಫ್ಸ್

#Geetha #GeethaSong #Geethamovie #sandalwoodmovies  ‍#kannadasuddigalu

Tags