ಸುದ್ದಿಗಳು

‘ಗೀತಾ’ ಶೂಟಿಂಗ್ ಸೆಟ್ ನಲ್ಲಿ ಪವರ್ ಸ್ಟಾರ್

ಗಣೇಶ್ ಹಾಗೂ ಪುನೀತ್ ಒಟ್ಟಿಗೆ ನಟಿಸಲಿ ಎನ್ನುತ್ತಿರುವ ಫ್ಯಾನ್ಸ್

ಬೆಂಗಳೂರು.ಮಾ.24: ಗೋಲ್ಡನ್ ಸ್ಟಾರ್ ಗಣೇಶ್ ನಟಿಸುತ್ತಿರುವ ‘ಗೀತಾ’ ಚಿತ್ರದ ಚಿತ್ರೀಕರಣ ಸದ್ಯ ಬೆಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ. ವಿಶೇಷವೆಂದರೆ, ಶೂಟಿಂಗ್ ನಲ್ಲಿ ತಲ್ಲೀಣರಾಗಿದ್ದ ಗಣೇಶ್ ಹಾಗೂ ಟೀಮ್ ಗೆ ನಿನ್ನೆಯಷ್ಟೇ ಒಂದು ಸರ್ ಪ್ರೈಜ್ ಎದುರಾಗಿದೆ.

ಹೌದು, ‘ಗೀತಾ’ ಶೂಟಿಂಗ್ ಸ್ಥಳಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭೇಟಿ ನೀಡಿ ಚಿತ್ರತಂಡದೊಂದಿಗೆ ಕುಶಲೋಪರಿ ವಿಚಾರಿಸಿದರು. ಗೊಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ಮಾಪಕ ಸಯ್ಯದ್ ಸಲೀಂ ಅವರ ಜೊತೆ ಪೋಟೋಗೆ ಪೋಸ್ ಕೊಟ್ಟಿದ್ದಾರೆ. ಸುಮಾರು 30 ನಿಮಿಷಗಳಿಗೂ ಹೆಚ್ಚು ಕಾಲ ಸೆಟ್ ನಲ್ಲಿದ್ದು ಚಿತ್ರದ ಬಗ್ಗೆ ಮಾಹಿತಿ ಪಡೆದರು.

ಅಂದ ಹಾಗೆ ಈ ಚಿತ್ರವನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಶಿಷ್ಯ ವಿಜಯ್ ನಾಗೇಂದ್ರ ನಿರ್ದೇಶನ ಮಾಡ್ತಿದ್ದಾರೆ. ಚಿತ್ರದಲ್ಲಿ ಮೂವರು ನಾಯಕಿಯರಿದ್ದು, ‘ಗೀತಾ’ ಪಾತ್ರದಲ್ಲಿ ಮಲೆಯಾಳಿ ಬೆಡಗಿ ಪಾರ್ವತಿ ಅರುಣ ಕಾಣಿಸಿಕೊಂಡಿದ್ದಾರೆ.

ಇನ್ನು ನಾಯಕ ಗಣೇಶ್, ಕರಾಟೆಕಿಂಗ್ ಶಂಕರ್ ನಾಗ್ ರ ಅಭಿಮಾನಿಯಾಗಿದ್ದು, ಅವರು ನಟಿಸಿರುವ ಚಿತ್ರಗಳ ಹೆಸರಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ, ಈಗಾಗಲೇ ಅವರು ‘ಆಟೋರಾಜ’ ಹೆಸರಿನ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇದೂ ಸಹ ಶಂಕರ್ ನಾಗ್ ಅವರ ಸಿನಿಮಾದ ಹೆಸರು.

ಸಿನಿಮಾಕ್ಕಾಗಿ ಪ್ರಾಣವನ್ನೇ ಪಣವಿಟ್ಟು ಫೈಟ್ ಮಾಡಿದ ಪ್ರಥಮ್

#geetha, #movie, #set, #punithrajkumar, #balkaninews #punithrajkumar, #ganesh, #filmnews, #kannadasuddigalu

Tags