ಸುದ್ದಿಗಳು

‘ಗೀತಾ’ ಪೋಸ್ಟರ್ ಮೇಕಿಂಗ್ ಕಸರತ್ತು.

ಜುಲೈ 2 ರಂದು ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಬರ್ತಡೇ ದಿನದಂದು ‘ಗೀತಾ’ ಚಿತ್ರವು ಸೆಟ್ಟೇರಿದೆ. ಆಗ ‘ಗೀತಾ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮಾತ್ರ ಬಿಡುಗಡೆಯಾಗಿದ್ದು ಗೊತ್ತೇ ಇದೆ.ಈ ಚಿತ್ರದ ಫೋಟೊ ಶೂಟ್ ಹಿಂದಿನ ಕಸರತ್ತಿನ ವಿಡಿಯೋ ಇಲ್ಲಿದೆ ನೋಡಿ.

ವಿಜಯ್ ನಾಗೇಂದ್ರ ಅವರು ಮೊದಲ ಬಾರಿಗೆ ‘ಗೀತಾ’ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದು, ಚಿತ್ರಕ್ಕೆ ಗಣೇಶ್ ನಾಯಕರಾಗಿದ್ದಾರೆ. ಆದರೆ ನಾಯಕಿ ಇನ್ನೂ ಫಿಕ್ಸ್ ಆಗಿಲ್ಲ.

ಗೀತಾ ಓರ್ವ ಅಪ್ಪಟ ಕನ್ನಡಾಭಿಮಾನಿಯ ಕಥೆ. ಸ್ವಮೇಕ್ ಕಥೆ ಹೊಂದಿರುವ ಈ ಚಿತ್ರದ ನಾಯಕಿಯೇ ಗೀತಾ. ತಲೆ ಮೇಲೆ ಕ್ಯಾಪ್, ಶರ್ಟ್ ಮೇಲೆ ಕನ್ನಡದ ಬಾವುಟ, ಒಂದು ಯಜ್ಡಿ ಬೈಕು ಇವೆಲ್ಲಾ ‘ಗೀತಾ’ ಚಿತ್ರದಲ್ಲಿ ಕಂಡು ಬರುವ ಗಣೇಶ್ ರ ಅವತಾರದ ವಿವರಗಳು. ಕನ್ನಡ ಪ್ರೇಮಿ ನಾಯಕನ ಪ್ರೇಮಕಥೆ ಈ ಚಿತ್ರದ ಸ್ಟೋರಿ.

ಎರಡು ವರ್ಷಗಳ ನಂತರ ಗಣೇಶ್ ಅವರ ಗೋಲ್ಡನ್ ಮೂವೀಸ್ ಹಾಗೂ ಮುಗುಳು ನಗೆ ನಿರ್ಮಾಪಕ ಸಯ್ಯದ್ ಸಲಾಂ ಅವರ ಬ್ಯಾನರ್ ಈ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದು, ಈಗಾಗಲೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ಸ್ ಗಳು ಚಿತ್ರಪ್ರೇಮಿಗಳ ಗಮನ ಸೆಳೆದಿವೆ. ಇತ್ತ ಕಂಪ್ಲೀಟ್ ರೆಟ್ರೋ ಲುಕ್ ಅಲ್ಲ..ಅತ್ತ ಕಂಪ್ಲೀಟ್ ಮಾಡ್ರನ್ ಲುಕ್ ಕೂಡ ಅಲ್ಲ. ಆದರೆ ರೊಮ್ಯಾಂಟಿಕ್ ಫೀಲ್ ನೀಡುವಂತಿದೆ ‘ಗೀತಾ’ ಸಿನಿಮಾ ಪೋಸ್ಟರ್.ಮತ್ತು ಗಣೇಶ್ ಅವರು ಮೈಸೂರು ಹುಡ್ಗ ಅನ್ನೋದು ಪಕ್ಕಾ ಆಗಿದೆ. ಅಷ್ಟೇ ಅಲ್ಲದೆ ಕನ್ನಡ ಹಾಗೂ ಕರ್ನಾಟಕದ ಪ್ರೇಮಿ ಎನ್ನುವುದು ತಿಳಿಯುತ್ತಿದೆ.

ಚಿತ್ರಕ್ಕೆ ಶ್ರೀಶಾ ಕ್ಯಾಮೆರಾ ವರ್ಕ್ ಮಾಡುತ್ತಿದ್ದು, ಹರಿಕೃಷ್ಣ ಅವರು ಸಂಗೀತ ನೀಡುತ್ತಿದ್ದಾರೆ, ಗಣೇಶ್ ಅವರ ಈಗಾಗಲೇ ಆರೆಂಜ್ ಚಿತ್ರವು ಸಧ್ಯದಲ್ಲಿಯೇ ಚಿತ್ರೀಕರಣ ಮುಗಿಸಿ, ತೆರೆಗೆ ಬರಲು ಸಿದ್ದತೆ ನಡೆಸುತ್ತಿದೆ. ಇದರೊಂದಿಗೆ ಗಣೇಶ್ ಅವರು ನಾಗಣ‍್ಣ ನಿರ್ದೇಶನದ ಹೆಸರಿಡದ ಹಾರರ್ ಚಿತ್ರದಲ್ಲೂ ನಟಿಸುತ್ತಿದ್ದಾರೆ.

ಹೀಗೆ ಒಟ್ಟಿಗೆ ಮೂರು ಚಿತ್ರಗಳಲ್ಲಿ ತೊಡಗಿಕೊಂಡಿರುವ ಗಣೇಶ್ ಅವರು ತಮ್ಮ ಕೈಯಲ್ಲಿರೋ ಎರಡು ಚಿತ್ರಗಳನ್ನು ಮುಗಿಸಿ ಸೆಪ್ಟೆಂಬರ್ ತಿಂಗಳಿಂದ ಗೀತಾ ಚಿತ್ರದ ಶೂಟಿಂಗ್ನಲ್ಲಿ ಭಾಗವಹಿಸಲಿದ್ದಾರೆ. ಈ ಚಿತ್ರದ ಶೂಟಿಂಗ್ ಮೈಸೂರು, ಕೋಲ್ಕತ್ತಾ, ಬೆಂಗಳೂರು ಮುಂತಾದೆಡೆ ನಡೆಯಲಿದೆ.

 

@ sunil javali

Tags