ಸುದ್ದಿಗಳು

ಬಾಹುಬಲಿಗೆ ಸೆಡ್ಡು ಹೊಡೆದ ‘ಗೀತಾಗೋವಿಂದಂ’

ಬಾಹುಬಲಿಯನ್ನು ಹಿಂದಿಕ್ಕಿದ ‘ಗೀತಾ ಗೋವಿಂದಂ’

ಇನ್ನು ತಮಿಳುನಾಡಿನಲ್ಲಿಬಾಹುಬಲಿ’ ಬಿಡುಗಡೆಯಾಗಿ ವಾರದಲ್ಲಿ ಗಳಿಸಿದ್ದಕ್ಕಿಂತ ಹೆಚ್ಚಿನ ಹಣ ಗಳಿಸಿದೆಗೀತಾ ಗೋವಿಂದಂ’ ಸಿನಿಮಾ.

 ಹೈದರಾಬಾದ್,ಸೆ.03: ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಅಭಿನಯದ ಸೂಪರ್ ಹಿಟ್ ಚಿತ್ರ ‘ಗೀತಾ ಗೋವಿಂದಂ’ ಈಗಾಗಲೇ ಬಹಳಷ್ಟು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ಬಾರೀ ಸದ್ದನ್ನು ಮಾಡಿದ್ದ ಈ ಸಿನಿಮಾ ಬಿಡುಗಡೆ ಆದ ನಂತರವೂ ಸದ್ದು ಮಾಡುತ್ತಲೇ ಇದೆ. ಹೊಸ ವಿಚಾರ ಏನಪ್ಪಾ ಅಂದರೆ ‘ಅರ್ಜುನ್ ರೆಡ್ಡಿ’ ಇದುವರೆಗು ಗಳಿಸಿದ್ದ ಹಣವನ್ನು ಈ ಸಿನಿಮಾ  ೨ ವಾರಗಳಲ್ಲೇ ಗಳಿಸಿದೆಯಂತೆ…

Related image

ಬಾಕ್ಸ್ ಆಫೀಸ್ ಉಡೀಸ್

ಹೌದು, ಈಗಾಗಲೇ ‘ಅರ್ಜುನ್ ರೆಡ್ಡಿ’ ಕೂಡ ಯಶಸ್ಸು ಪಡೆದ ಸಿನಿಮಾ. ಆದರೆ ಅದು ಇಲ್ಲಿಯವರೆಗೂ  ಗಳಿಸಿದ ಹಣವನ್ನು ಕೇವಲ ೨ ವಾರಗಳ್ಳಲ್ಲೇ ಗಳಿಸಿದೆ. ಇನ್ನು ತಮಿಳುನಾಡಿನಲ್ಲಿ ‘ಬಾಹುಬಲಿ’ ಬಿಡುಗಡೆಯಾಗಿ ೨ ವಾರದಲ್ಲಿ ಗಳಿಸಿದ್ದಕ್ಕಿಂತ ಹೆಚ್ಚಿನ ಹಣ ಗಳಿಸಿದೆ ‘ಗೀತಾ ಗೋವಿಂದಂ’ ಸಿನಿಮಾ. ಇನ್ನು ಇದನ್ನೆಲ್ಲಾ ನೋಡುತ್ತಾ ಇದ್ದರೆ ಈ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯವುದರಲ್ಲಿ ಅನುಮಾನವೇ ಇಲ್ಲ.

ಈ ಸಿನಿಮಾವನ್ನು  ಪರುಶುರಾಮ್ ನಿರ್ದೇಶನ ಮಾಡಿದ್ದಾರೆ. ಅಷ್ಟೆ ಅಲ್ಲ ಚಿತ್ರಕಥೆಯನ್ನು ಮಾಡಿದ್ದಾರೆ.  ಬನ್ನಿ ವಾಸ್ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ.

 

Tags

Related Articles