ಸುದ್ದಿಗಳು

‘ಗಿಮಿಕ್’’ಸಿನಿಮಾ ಟ್ರೇಲರ್ ಲಾಂಚ್!!

ಬೆಂಗಳೂರು,ಮೇ.19: ಗಣೇಶ್ ಅಭಿನಯದ ‘ಗಿಮಿಕ್’ ಸಿನಿಮಾದ ಟ್ರೇಲರ್ ಲಾಂಛ್ ಆಗಿದ್ದು ಸಖತ್ ಸೌಂಡ್ ಮಾಡ್ತಾ ಇದೆ.

ನಟ ಗಣೇಶ್ ಮುಂದಿನ ಸಿನಿಮಾ ಗಿಮಿಕ್. ಈಗಾಗಲೇ ಟೈಟಲ್ ಮೂಲಕ ಸಕ್ಕತ್ ಸದ್ದು ಮಾಡುತ್ತಿದೆ ಈ ಚಿತ್ರ. ಆರೇಂಜ್ ಅಷ್ಟಾಗಿ ಸಿಹಿ ನೀಡಲಿಲ್ಲ. ನಂತರ ಭಗ್ನ ಪ್ರೇಮಿಯಾಗಿ ೯೯ ರಲ್ಲಿ ಮಿಂಚಿದ್ರು ಗಣೇಶ್. ಈ ಸಿನಿಮಾ ಸದ್ಯ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೀಗ ಗಿಮಿಕ್ ಸಿನಿಮಾ ಮೂಲಕ ಮತ್ತೆ ರಂಜಿಸೋದಕ್ಕೆ ರೆಡಿಯಾಗಿದ್ದಾರೆ ಗಣೇಶ್‌. ಸದ್ಯ ಈ ನಟನ ಗಿಮಿಕ್ ಸಿನಿಮಾ ಟ್ರೇಲರ್ ಲಾಂಚ್ ಆಗಿದೆ.

ಹೇಗಿದೆ ಗೊತ್ತಾ ಟ್ರೇಲರ್..?

ಹೌದು, ಬಿಡುಗಡೆಯಾಗಿರುವ ಟ್ರೇಲರ್ ಸಖತ್ ಹಾರರ್ ಆಗಿದ್ದರೂ, ಕಾಮಿಡಿಯಲ್ಲಿ ಗಣೇಶ್ ಮಿಂಚಿದ್ದಾರೆ. ದೆವ್ವ ಮುಂದೆ ಬಂದರೂ ಕೂಡ ಗಣೇಶ್ ಭೂತದ ಜೊತೆ ಮಾತನಢುವ ಕಾಮಿಡಿ ಸೀನ್ ಗಳು ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಸದ್ಯ ಈ ಚಿತ್ರದ ಟ್ರೇಲರ್ ಈಗಾಗಲೇ ಯುಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ. ಸದಾ ವಿಭಿನ್ನತೆಯಿಂದ ಕಾಮಿಡಿಯಿಂದಲೇ ನಟ ಗಣೇಶ್ ಸದ್ದು ಮಾಡುತ್ತಿದ್ದರು. ಇದೀಗ ಭೂತದ ಜೊತೆ ಮಾತನಾಡುವಲ್ಲಿ ಕಾಮಿಡಿ ಮಾಡಿ ಅಭಿಮಾನಿಗಳಿಗೆ ಮತ್ತಷ್ಟು ರಸದೌತಣ ನೀಡೋದ್ರಲ್ಲಿ ಡೌಟೇ ಇಲ್ಲ.

ಕಾಮಿಡಿ ಹಾರರ್ ಸಿನಿಮಾ

ಗಿಮಿಕ್‌ ಸಿನಿಮಾದಲ್ಲಿ ಹಾರರ್ ಹಾಗೂ ಕಾಮಿಡಿ ಅಂಶಗಳಿವೆ ಅನ್ನೋದು ಟ್ರೇಲರ್ ಮೂಲಕ ಗೊತ್ತಾಗುತ್ತಿದೆ. ಇದೇ ಮೊದಲ ಬಾರಿಗೆ ಹಾರರ್ ಚಿತ್ರದಲ್ಲಿ ಗಣೇಶ್ ನಟಿಸುತ್ತಿದ್ದಾರೆ. ಗಿಮಿಕ್ ಮೂಲಕ ಇದೇ ಮೊದಲ ಬಾರಿಗೆ ನಾಗಣ್ಣ ಹಾಗೂ ಗಣೇಶ್ ಒಂದಾಗಿದ್ದಾರೆ. ಸದ್ಯ ಬೇರೆ ಬೇರೆ ದೇಶಗಳಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗುತ್ತಿದೆಯಂತೆ. ಸದ್ಯ ಈ ಸಿನಿಮಾದಲ್ಲಿ ಗಣೇಶ್ ಗೆ ನಾಯಕಿಯಾಗಿ ಪಂಜಾಬಿ ಹುಡುಗಿ ರೋನಿಕಾ ಸಿಂಗ್ ಗಿಮಿಕ್ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಶೋಭರಾಜ್, ಸುಂದರ್ ರಾಜ್, ಸಾಧು ಕೋಕಿಲ ಕೂಡ ಇರಲಿದ್ದಾರೆ. ಇನ್ನು ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಇರಲಿದೆ..

ಕಾಲೇಜು ವಾರ್ಷಿಕೋತ್ಸವದಲ್ಲಿ ನಟ ಜಗ್ಗೇಶ್ ಭಾಗಿ!!

#gimik #goldenstarganesh #gimiktrailer

Tags