ಸುದ್ದಿಗಳು

ಗಿಣಿಯೊಂದು ಕಥೆ ಹೇಳಲು ಬರುತ್ತಿದೆ

ಸದ್ದಿಲ್ಲದೇ ಹೊಸಬರ ಚಿತ್ರವೊಂದು ತೆರೆಗೆ ಬರಲು ಸಿದ್ದತೆ ನಡೆಸಿದ್ದು, ನಾಗರಾಜ್ ಉಪ್ಪುಂದ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಬೆಂಗಳೂರು, ಜು. 31: ನಾಗರಾಜ್ ಉಪ್ಪುಂದ ಅವರ ಚೊಚ್ಚಲ ನಿರ್ದೇಶನದ ‘ಗಿಣಿ ಹೇಳಿದ ಕಥೆ’ ಎಂಬ ವಿಭಿನ್ನ ಶೀರ್ಷಿಕೆಯ ಸಿನಿಮಾವೊಂದು ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಿದ್ದತೆ ನಡೆಸಿದೆ.

ಬುದ್ದ ಚಿತ್ರಾಲಯ ಬ್ಯಾನರ್ ನಡಿಯಲ್ಲಿ ವಿ.ದೇವರಾಜ್ ಎಂಬುವವರು ನಡಿಯಲ್ಲಿ ಗಿಣಿ ಹೇಳಿದ ಕಥೆ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಈ ಚಿತ್ರದ ಪೋಸ್ಟರ್ಸ್ ಗಳು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗಿವೆ.

ಇನ್ನು ಈ ಚಿತ್ರಕ್ಕೆ ದೇವ್ ಅವರು ನಾಯಕನಾಗಿ ನಟಿಸಿದ್ದು, ಚಿತ್ರಕ್ಕೆ ಹಿತನ್ ಹಾಸನ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಸದ್ಯ ಚಿತ್ರದ ಮೋಷನ್ ಟೀಸರ್ ಬಿಡುಗಡೆಯಾಗಿದ್ದು ಸದ್ಯದಲ್ಲೇ ಹಾಡುಗಳು ಮತ್ತು ಟ್ರೈಲರ್ ಬಿಡುಗಡೆಯಾಗಲಿದೆ. ಚಿತ್ರವು ಸೆಪ್ಟೆಂಬರ್ ತಿಂಗಳಲ್ಲಿ ತೆರೆಗೆ ಬರಲಿದೆ.

ಇನ್ನು ಚಿತ್ರದ ನಿರ್ದೇಶಕರೇ ಈ ಚಿತ್ರದ ಛಾಯಾಗ್ರಹಕರಾಗಿದ್ದು, ಇದೇ ಮೊದಲ ಬಾರಿಗೆ ಚಿತ್ರವೊಂದನ್ನು ನಿರ್ದೇಶನ ಮಾಡುವುದರ ಮೂಲಕ ಬೆಳ್ಳಿತೆರೆಗೆ ಪ್ರವೇಶ ಮಾಡಿದ್ದಾರೆ. ಚಿತ್ರದ ಪೋಸ್ಟರ್ ಗಳಲ್ಲಿ ಕೆಲವೊಂದು ಸಾಲುಗಳನ್ನು ಮುದ್ರಿಸಿದ್ದು, ನೋಡುಗರ ಗಮನ ಸೆಳೆದಿವೆ.

‘ರಸ್ತೆ ದಾಟಿ ಮುಂದಕ್ಕೆ ಹೋಗಬಹುದು
ಆದರೆ ನೆನಪುಗಳನ್ನು ದಾಟಿ ಮುಂದೆ ಹೋಗೋಕ್ಕಾಗಲ್ಲ ಅಲ್ವಾ..’

‘ನೀನೆಲ್ಲಿಗೂ ಬರಲಿಲ್ಲ, ಬಂದ ಹಾಗೆ ನೆನಪು..
ನೀನೆಲ್ಲಿಗೂ ಹೋಗಲಿಲ್ಲ ಹೋದ ಹಾಗೆ ಕನಸು..’

ನೀ ನನ್ನ ಮರೆತೆ.. ಜಗವನ್ನಲ್ಲ..
ನಾ ಜಗವನ್ನೇ ಮರೆತೆ ನಿನ್ನನ್ನಲ್ಲ..

 

ಈ ರೀತಿಯ ಸಾಲುಗಳು ಗಮನ ಸೆಳೆಯುತ್ತಿವೆ.

 

 

@ sunil Javali

Tags

Related Articles

Leave a Reply

Your email address will not be published. Required fields are marked *