ಸುದ್ದಿಗಳು

‘ಗಿರಿಗಿಟ್ಲೆ’ ಚಿತ್ರಕ್ಕೆ ಸಿನಿ ಮಂದಿ ವಿಶ್

ಬೆಂಗಳೂರು, ಮಾ.15:

ಇತ್ತೀಚೆಗೆ ಸ್ಯಾಂಡಲ್​ ವುಡ್​ ನಲ್ಲಿ ಹೊಸ ಪ್ರಯೋಗಗಳೊಂದಿಗೆ, ವಿಭಿನ್ನ ಪ್ರಯತ್ನಗಳು ಬರುತ್ತಲೇ ಇವೆ. ಯುವ ಪ್ರತಿಭೆಗಳ ಸಿನಿಮಾಗಳು ಕೂಡ ಬಾಕ್ಸಾಫೀಸ್​ ನಲ್ಲಿ ಬಹಳಷ್ಟು ಸದ್ದು ಮಾಡುತ್ತಿವೆ. ಪ್ರತಿ ವಾರ ಬಿಡುಗಡೆಯಾಗುವ ಸಿನಿಮಾಗಳಲ್ಲಿ ಹೊಸಬರ ಚಿತ್ರಗಳು ಇದ್ದೇ ಇರುತ್ತವೆ. ಈ ವಾರವೂ ಹೊಸಬರ ಹೊಸ ಪ್ರಯತ್ನವಾಗಿ ‘ಗಿರ್ ​ಗಿಟ್ಲೆ’ ಎಂಬ ವಿಭಿನ್ನ ಟೈಟಲ್ ಸಿನಿಮಾ ತೆರೆ ಕಂಡಿದೆ. ಇದೀಗ ಈ ಸಿನಿಮಾಗೆ ವಿಶ್ ಮಾಡಿದ್ದಾರೆ ಸಿನಿ ತಾರೆಯರು.

ವಿಭಿನ್ನ ಕಥೆಯ ಸಿನಿಮಾ

ಸಿನಿಮಾದಲ್ಲಿ ಚಂದ್ರಶೇಖರ್, ಗುರು ರಾಜ್ ಹಾಗೂ ಪ್ರದೀಪ್ ರಾಜ್ ಮೂವರು ಸ್ನೇಹಿತರಾಗಿ ಪಾತ್ರ ನಿರ್ವಹಿಸಿದ್ದಾರೆ. ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ, ಅದ್ವಿತಿ ಶೆಟ್ಟಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಈ ನಾಯಕರ ಜೀವನ ಹೇಗೆ ಭೂಗತ ಲೋಕಕ್ಕೆ ಲಿಂಕ್​ ಆಗುತ್ತೆ, ಪ್ರೀತಿ ಅನ್ನೋದು ಯಾರಿಗೆ ದಕ್ಕುತ್ತೆ ಅನ್ನೋದೆ ಈ ಸಿನಿಮಾದ ಒನ್ ಲೈನ್ ಸ್ಟೋರಿಯಾಗಿದೆ. ಇದೀಗ ಸಿನಿಮಾಗೆ ನಟಿ ಮಾನ್ವಿತಾ, ಪುನೀತ್ ರಾಜ್ ಕುಮಾರ್,  ದುನಿಯಾ ವಿಜಯ್ ಸೇರಿದಂತೆ ಹಲವಾರು ಮಂದಿ ವಿಶ್ ಮಾಡಿದ್ದಾರೆ.

ಸಿನಿ ಮಂದಿಯಿಂದ ವಿಶ್

ಈ ವಿಚಾರವಾಗಿ ಮಾತನಾಡಿರುವ ನಟ ಪುನೀತ್ ಈ ಸಿನಿಮಾ ರಿಲೀಸ್ ಆಗ್ತಾ ಇದೆ ಯಶಸ್ವಿಯಾಗಲಿ ಎಂದಿದ್ದಾರೆ. ಇನ್ನು ನಟಿ ಮಾನ್ವಿತಾ ಕೂಡ ಮೂವಿ ಲ್ಯಾಂಡ್ ನಲ್ಲಿ ಸಿನಿಮಾ ರಿಲೀಸ್ ಆಗ್ತಾ ಇದೆ. ಅದ್ವಿತಿ ಶೆಟ್ಟಿ ನನ್ನ ಸ್ನೇಹಿತರು. ನನ್ನ ಮೊದಲ ಸಿನಿಮಾ ಕೂಡ ಅಲ್ಲಿಯೇ ರಿಲೀಸ್ ಆಗಿ ಯಶಸ್ಸು ಕಂಡಿತ್ತು. ನಿಮ್ಮ ಸಿನಿಮಾ ಕೂಡ ಯಶಸ್ವಿಯಾಗಲಿ ಎಂದಿದ್ದಾರೆ. ಇನ್ನು, ಕಾವ್ಯಶೆಟ್ಟಿ, ನೀತು ಸೇರಿದಂತೆ ಹಲವಾರು ಮಂದಿ ವಿಶ್ ಮಾಡಿದ್ದಾರೆ.

ಟ್ರೋಲ್ ಗೆ ಒಳಗಾದ ದೇವೇಗೌಡರ ಕುಟುಂಬ, ಫೇಮಸ್ ಆಯ್ತು ‘ನಿಖಿಲ್ ಎಲ್ಲಿದಿಯಪ್ಪ..?’ ಡೈಲಾಗ್

#girgitlekannadamovie #sandalwood #kannadamovies #balkaninews

Tags