ಸುದ್ದಿಗಳು

ಜಟ್ಟ ಗಿರಿರಾಜ್ ಅವರ ವೆಬ್ ಸೀರೀಸ್.

ಜಟ್ಟ , ಮೈತ್ರಿ ಚಿತ್ರಗಳ ನಿರ್ದೇಶಕ ಬಿ.ಎಂ ಗಿರಿರಾಜ್ ಇತ್ತಿಚೆಗೆ ಸಿನಿಮಾ ಕ್ಷೇತ್ರಗಳನ್ನು ಹೊರತು ಪಡಿಸಿ ಬೇರೆ ಬೇರೆ ವಿಬಾಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ವೆಬ್ ಸೀರಿಸ್ ನಿರ್ದೇಶನ ಮಾಡಲಿರುವ ಗಿರಿರಾಜ್. ಇತ್ತೀಚೆಗೆ ತಮ್ಮ ಹೊಸ ನಾಟಕ ‘ಸುಗಂಧದ ಸೀಮೆಯಾಚೆ’ಯಿಂದ ಎಲ್ಲರ ಗಮನ ಸೆಳೆದಿದ್ದರು. ಇದೀಗ ರಕ್ತ ಚಂದನ ಎಂಬ ಕ್ರೈಂ ಥ್ರಿಲ್ಲರ್ ವೆಬ್ ಸೀರಿಸ್ ನಿರ್ದೇಶಿಸಲಿದ್ದಾರೆ.

ನಿರ್ದೇಶಕ ಗಿರಿರಾಜ್ ಅವರು ಚಿತ್ರ ನಿರ್ದೇಶನದ ಜೊತೆ ಜೊತೆಯಲ್ಲಿಯೇ ರಂಗಭೂಮಿಯಲ್ಲೂ ತೊಡಗಿಸಿಕೊಂಡಿದ್ದವರು. ಹಾಗೂ ರಂಗಕ್ಷೇತ್ರದಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದವರು. ಇದೇ ಮೊದಲ ಬಾರಿಗೆ ವೆಬ್ ಸೀರಿಸ್ ಮಾಡಲಿದ್ದಾರೆ.

ನಿರ್ಗುಣ ಪ್ರೊಡಕ್ಷನ್ಸ್ ಸಂಸ್ಥೆ ಈಗಾಗಲೇ ರಂಗ ಪ್ರಯೋಗಗಳಲ್ಲಿ ಹೆಸರು ಮಾಡಿದೆ. ಆ ಸಂಸ್ಥೆಯಡಿಯೇ ಗಿರಿರಾಜ್ ಈಗ ವೆಬ್ ಸೀರಿಸ್ ಗೆ ಮುಂದಾಗಿದ್ದು, ತಂಡದ ನಟಿ ಆದ್ವಿಕಾರನ್ನು ಮುಖ್ಯ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಗಿರಿರಾಜ್ ಕತೆ, ಚಿತ್ರಕತೆ ಬರೆದು ನಿರ್ದೇಶನ ಮಾಡಲಿದ್ದಾರೆ. ಮೊದಲ ಸೀರಿಸ್ನಲ್ಲಿ 8 ಕಂತುಗಳಿದ್ದು, ವಾರಕ್ಕೊಂದರಂತೆ ಬಿಡುಗಡೆ ಮಾಡಲಿದ್ದಾರೆ. ಸಧ್ಯಕ್ಕೆ ಅದರ ನೀಲ ನಕ್ಷೆಯ ಸಿದ್ದತೆಯಲ್ಲಿ ತೊಡಗಿಕೊಂಡಿದ್ದಾರೆ.

ವೆಬ್ ಸೀರಿಸ್ ಅನ್ನು ಬೇರೆ ಬೇರೆ ಕತೆಗಳೊಂದಿಗೆ ಮುಂದುವರಿಸಿಕೊಂಡು ಹೋಗಲು ಗಿರಿರಾಜ್ ಅವರು ನಿರ್ಧರಿಸಿದ್ದು, ಪ್ರದೀಪ್ ರೆಡ್ಡಿ ಛಾಯಾಗ್ರಹಣ, ಅಭಿ ಸಂಗೀತ ನೀಡಲಿದ್ದು ಮೇ ಕೊನೆಯಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು, ಉಳಿದ ಪಾತ್ರಗಳಿಗೆ ನಟರ ಆಯ್ಕೆ ಪ್ರಕ್ರಿಯೆ ನಡೆದಿದೆ. ಇವರಂತೆ ಇತ್ತಿಚೆಗೆ ನಟ ಶಿವರಾಜಕುಮಾರ್ ಅವರು ಸಹ ಸಖತ್ ಸ್ಟೂಡಿಯೋ ಮೂಲಕ ವೆಬ್ ಸೀರಿಸ್ ನಿರ್ಮಿಸುವುದಾಗಿ ಹೇಳಿಕೊಂಡಿದ್ದರು.

Tags