ವೈರಲ್ ನ್ಯೂಸ್ಸುದ್ದಿಗಳು

‘ದಯವಿಟ್ಟು ಸಾಲ ಕೊಡಿ’ ಎಂದ ವ್ಯಕ್ತಿ: ವೈರಲ್ ಆಯ್ತು ಪತ್ರಿಕೆಯ ಜಾಹಿರಾತು..!!!

‘ಸಾಲ ಬೇಕಾಗಿದೆ’ ಎಂಬ ಜಾಹಿರಾತು ಯಾವ ಪತ್ರಿಕೆಯಲ್ಲಿ ಪ್ರಕಟವಾಗಿದೆ ಎನ್ನುವುದು ನಿಖರವಾಗಿ ಗೊತ್ತಿಲ್ಲದಿದ್ದರೂ, ಈ ಜಾಹಿರಾತಿನ ಫೋಟೋ ಎರಡ್ಮೂರು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ.

ಸಾಲ ಬೇಕಾಗಿದೆ: ದಯವಿಟ್ಟು ಸಾಲ ಕೊಡಿ, 5 ಲಕ್ಷ ಸಾಲ ಕೊಟ್ಟರೆ ಪ್ರತಿ ತಿಂಗಳು 25000 ರೂ.ನಂತೆ 2 ವರ್ಷ ಕಂತನ್ನು ಕಟ್ಟುತ್ತೇನೆ. 2 ಲಕ್ಷ ಸಾಲ ಕೊಟ್ಟರೆ ಪ್ರತಿ ತಿಂಗಳು 10000 ರೂ.ನಂತೆ 2 ವರ್ಷ ಕಂತನ್ನು ಕಟ್ಟುತ್ತೇನೆ. ದಯವಿಟ್ಟು ಸಾಲ ಕೊಡುವವರು ಈ ನಂಬರಿಗೆ ಸಂಪರ್ಕಿಸಿ’ ಎಂದು ಓರ್ವ ವ್ಯಕ್ತಿಯೊಬ್ಬ ಪತ್ರಿಕೆಯೊಂದಕ್ಕೆ ಜಾಹಿರಾತು ನೀಡಿದ್ದಾರೆ. ಈ ಜಾಹೀರಾತಿನ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

‘ಅದೆಷ್ಟು ನಕ್ಕಿದ್ದೆನೋ ಏನೋ’, ‘ಯಪ್ಪಾ.. ಮಿಸ್ ಮಾಡದೇ ಇವನಿಗೆ ಸಾಲ ಕೊಡ್ರಿ ಪಾ’.. ಹೀಗೆ ಅನೇಕರು ಈ ಜಾಹಿರಾತಿನ ಫೋಟೋವನ್ನು ಪೋಸ್ಟ್ ಮಾಡುತ್ತಿದ್ದಾರೆ. ಹಾಗೆಯೇ ಕೆಲವರು ವಿವಿಧ ರೀತಿಯಲ್ಲಿ ಕಾಮೆಂಟ್ ಹಾಕುತ್ತಿದ್ದಾರೆ.

ಕೆಲವು ಜನರಿಗೆ ಬೇರೆಯವರ ಜಗಳ ನೋಡುವುದಂದ್ರೆ ಸಖತ್ ಖುಷಿ: ವಿಡಿಯೋ ವೈರಲ್

#GiveMeLoan #ViralNews #LoanAdvertisement  ‍#KannadaSuddigalu

Tags