ಸುದ್ದಿಗಳು

ಮಾತಿನ ಭಾಗದ ಚಿತ್ರೀಕರಣ ಮುಗಿಸಿದ ‘ಗೋದ್ರಾ’

ಒಂದು ಹಾಡಿನ ಶೂಟಿಂಗ್ ಮುಗಿದರೆ ಚಿತ್ರೀಕರಣ ಮುಕ್ತಾಯ

ಬೆಂಗಳೂರು.ಮೇ.20: ನೀನಾಸಂ ಸತೀಶ್ ಹಾಗೂ ಶ್ರದ್ದಾ ಶ್ರೀನಾಥ್ ಇದೇ ಮೊದಲ ಬಾರಿಗೆ ಜೊತೆಯಾಗಿ ನಟಿಸುತ್ತಿರುವ ‘ಗೋದ್ರಾ’ ಚಿತ್ರವು ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದೆ. ಈಗಾಗಲೇ ಟೈಟಲ್ ನಿಂದಲೇ ಸಾಕಷ್ಟು ಕುತೂಹಲಗಳನ್ನು ಮೂಡಿಸಿರುವ ಈ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ.

ಸದ್ಯ ಈ ಚಿತ್ರದ ಕೆಲವು ಸ್ಟಿಲ್ ಗಳು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದ್ದು, ಚಿತ್ರದ ಬಗ್ಗೆ ಕುತೂಹಲವಿದೆ. ಇನ್ನು ಈ ಚಿತ್ರವನ್ನು ನಂದೀಶ್ ನಿರ್ದೇಶನ ಮಾಡುತ್ತಿದ್ದು, ಒಂದು ಹಾಡಿನ ಚಿತ್ರೀಕರಣ ಮುಗಿದರೆ, ಇಡೀ ಚಿತ್ರದ ಶೂಟಿಂಗ್ ಮುಗಿಯಲಿದೆ.

ಅಂದ ಹಾಗೆ ಇದೊಂದು ನಕ್ಸ್ ಲೈಟ್ ಹೋರಾಟಗಾರನೊಬ್ಬನ ಕತೆಯನ್ನು ಆಧರಿಸಿದ್ದು, ಜೊತೆಗೆ ಪ್ರೇಮಮಯ ಸನ್ನಿವೇಶಗಳು ಸಹ ಇರಲಿವೆಯಂತೆ. ಇನ್ನು ಇತ್ತಿಚೆಗಷ್ಟೇ ಆಂಧ್ರಪ್ರದೇಶದ ಕರ್ನೂಲ್ ನಲ್ಲಿ ಶೂಟಿಂಗ್ ಮಾಡಲಾಗಿದೆ.

Image may contain: 1 person, text

‘ಕರ್ನಲ್ ​ನಲ್ಲಿ ಚಿತ್ರೀಕರಿಸಿದ ಹಾಡು ಒಂದು ಡಾನ್ಸಿಂಗ್ ನಂಬರ್. ಇಡೀ ಚಿತ್ರದಲ್ಲಿ ಹಲವು ಗೆಟಪ್ ​ಗಳು ಬರಲಿವೆ. ಅದರಲ್ಲಿ ಇದು ಕೂಡ ಒಂದು. ವಯಸ್ಸಿಗೆ ತಕ್ಕಂತೆ ಲುಕ್ ಬದಲಾಗಲಿದೆ’ ಎನ್ನುತ್ತಾರೆ ಸತೀಶ್.

ಇನ್ನು ಚಿತ್ರದ ಕೊನೆಯ ಹಾಡನ್ನು ಜೂನ್ ಮೊದಲ ವಾರದಲ್ಲಿ ಕಂಠೀರದ ಸ್ಟುಡಿಯೋದಲ್ಲಿ ಚಿತ್ರೀಕರಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಮೂಲಗಳ ಪ್ರಕಾರ, ಆ ಗೀತೆ ತುಂಬ ಅದ್ದೂರಿ ಮತ್ತು ಕಲರ್ಫುಲ್ ಆಗಿ ಮೂಡಿ ಬರಲಿದೆ.

ನೋಟಗಾರನಿಗೆ ಜೊತೆಯಾದ ಅಶ್ವಿನಿ ಚಂದ್ರಶೇಖರ್

#godra, #film, #shooting, #balkaninews #sathishninasam, #shruddasrinath, #filmnews, #kannadasuddigalu

Tags