
ಸುದ್ದಿಗಳು
ಗೋಲ್ಡನ್ ಗ್ಲೋಬ್ ನಾಮನಿರ್ದೇಶನಗಳನ್ನು ಪ್ರಕಟಿಸಲಿರುವ ಟೆರ್ರಿ ಕ್ರ್ಯೂಸ್, ಲೆಸ್ಲಿ ಮನ್
ಹಾಲಿವುಡ್ ಕಲಾವಿದರು ಟೆರ್ರಿ ಕ್ರ್ಯೂಸ್, ಲೆಸ್ಲಿ ಮನ್
ಬೆಂಗಳೂರು, ಡಿ.07: ‘ಬ್ರೂಕ್ಲಿನ್ ನೈನ್ ನೈನ್’ ಸ್ಟಾರ್ ಟೆರ್ರಿ ಕ್ರ್ಯೂಸ್ ಮತ್ತು ಡ್ಯಾನೈ ಗುರಿರಾ (ಬ್ಲ್ಯಾಕ್ ಪ್ಯಾಂಥರ್) ಈ ವರ್ಷದ ಗೋಲ್ಡನ್ ಗ್ಲೋಬ್ ನಾಮನಿರ್ದೇಶನಗಳ ನಿರೂಪಕರಾಗಿ ಆಯ್ಕೆಯಾಗಿದ್ದಾರೆ.
ಇವರಲ್ಲದೇ, ಲೆಸ್ಲಿ ಮನ್ (ಬ್ಲಾಕರ್ಸ್) ಮತ್ತು ಕ್ರಿಶ್ಚಿಯನ್ ಸ್ಲೇಟರ್ (ಮಿಸ್ಟರ್ ರೋಬೋಟ್) ಸಹ 76ನೇ ವಾರ್ಷಿಕ ಪ್ರಶಸ್ತಿ ಗೌರವವನ್ನು ಘೋಷಿಸಲಿದ್ದಾರೆ ಎಂದು ವೆರೈಟಿ ವರದಿ ಮಾಡಿದೆ.
ಪತ್ರಿಕಾಗೋಷ್ಠಿಯಲ್ಲಿ 25 ವಿಭಾಗಗಳಿಗೆ ನಾಮಿನಿಗಳ ಘೋಷಣೆ
ಗುರುವಾರ ಪತ್ರಿಕಾಗೋಷ್ಠಿಯಲ್ಲಿ 25 ವಿಭಾಗಗಳಿಗೆ ನಾಮಿನಿಗಳನ್ನು ಬಹಿರಂಗಪಡಿಸಲಾಗುವುದು. ಹಾಲಿವುಡ್ ಫಾರಿನ್ ಪ್ರೆಸ್ ಅಸೋಸಿಯೇಷನ್ (ಎಚ್ಎಫ್ಪಿಎ) 2019ರ ಗೋಲ್ಡನ್ ಗ್ಲೋಬ್ ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು, ಅಧಿಕೃತ ಗೋಲ್ಡನ್ ಗ್ಲೋಬ್ಸ್ ಫೇಸ್ ಬುಕ್ ಪುಟ ಮತ್ತು ಗೋಲ್ಡನ್ ಗ್ಲೋಬ್ಸ್ ವೆಬ್ ಸೈಟ್ ನಿಂದ ನೇರ ಪ್ರಸಾರ ಮಾಡಲಾಗುತ್ತದೆ.
ಸಮಾರಂಭವು ದೇಶೀಯ ಮತ್ತು ವಿದೇಶಿ ಚಲನಚಿತ್ರಗಳು ಮತ್ತು ದೂರದರ್ಶನದಲ್ಲಿ ಶ್ರೇಷ್ಠತೆಯನ್ನು ಗುರುತಿಸುತ್ತದೆ. ಜನವರಿ 6, 2019ರಂದು ಸಮಾರಂಭ ನಡೆಯಲಿದ್ದು, ಇದು ಬೆವರ್ಲಿ ಹಿಲ್ಟನ್ ನಿಂದ ನೇರ ಪ್ರಸಾರವಾಗುತ್ತದೆ. ಸೇಥ್ ಮೆಯರ್ಸ್ 2018ರ ಸಮಾರಂಭದಲ್ಲಿ ಆತಿಥ್ಯ ವಹಿಸಿದ್ದಾಗೂ, ಈ ವರ್ಷದ ಪ್ರಸಾರಕ್ಕೆ ಹೋಸ್ಟ್ ಇನ್ನೂ ಘೋಷಿಸಲ್ಪಟ್ಟಿಲ್ಲ.