ಸುದ್ದಿಗಳು

ವಿದ್ಯಾರ್ಥಿನಿಯರ ಜೊತೆಗೆ ಹಾಡಿ ಕುಣಿದ ಚಿನ್ನದ ಹುಡುಗ

‘ಚೆಲ್ಲಾಟ’ ಮತ್ತು ‘ಮುಂಗಾರು ಮಳೆ’ ಚಿತ್ರಗಳ ಮೂಲಕ ಕನ್ನಡ ಚಿತ್ರರಸಿಕರ ಮನ ಗೆದ್ದಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಸದ್ಯ ‘ಗೀತಾ’ ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರವು ಬಿಡುಗಡೆಯ ಹಂತದಲ್ಲಿದೆ. ಇದೇ ಸಮಯದಲ್ಲಿ ಚಿತ್ರತಂಡ ಪ್ರಚಾರಕಾರ್ಯ ಕೈಗೊಂಡಿದೆ.

ಇನ್ನು ವಿಶೇಷವಾಗಿ ಚಿತ್ರತಂಡದವರು ಜಯನಗರದ ಎನ್ಎಂಕೆಆರ್ವಿ ಮಹಿಳಾ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗಣೇಶ್ ಹಾಗೂ ಚಿತ್ರತಂಡದವರು ಭಾಗಿಯಾಗಿದ್ದು, ಅಲ್ಲಿ ವಿದ್ಯಾರ್ಥಿನಿಯರು ಕೇಳಿದ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಇನ್ನು ಈ ಸಂವಾದದಲ್ಲಿ ಗಣೇಶ್ ತಮ್ಮ ನಟನೆಯ ಸಿನಿಮಾಗಳು ಸೇರಿದಂತೆ ವಯಕ್ತಿಕ ಜೀವನದ ಕುರಿತು ಹಂಚಿಕೊಂಡಿದ್ದಾರೆ. ಅಲ್ಲದೇ ಒಂದೇ ಒಂದು ಡೈಲಾಗ್ ಹೇಳಿ ಎಂದು ವಿದ್ಯಾರ್ಥಿನಿಯರು ಬೇಡಿಕೆ ಇಟ್ಟಾಗ, “ದುಡ್ಡುಕೊಟ್ಟು ಕರ್ನಾಟಕ ಮ್ಯಾಪ್ ಕೊಂಡ್ಕೋಬೋದು ಕನ್ನಡಿಗರ ಸ್ವಾಭಿಮಾನ ಕೊಂಡುಕೊಳ್ಳೋಕೆ ಆಗಲ್ಲ. ಕರ್ನಾಟಕದಲ್ಲಿ ಕನ್ನಡಿಗನೇ ಯಜಮಾನ, ಕನ್ನಡಿಗನೇ ಸಾರ್ವಭೌಮ” ಎಂದು ಹೇಳಿ ಚಪ್ಪಾಳೆ ಗಿಟ್ಟಿಸಿದರು.

ಅಂದ ಹಾಗೆ ಈ ಕಾರ್ಯಕ್ರಮವನ್ನು ವಿಜಯ ಕರ್ನಾಟಕ ಪತ್ರಿಕೆಯವರು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸ್ನೇಹಲತಾ ಜಿ ನಾಡಿಗೇರ್, ನಿರ್ಮಾಪಕರಾದ ಸಯ್ಯದ್ ಸಲಾಂ, ನಿರ್ದೇಶಕ ವಿಜಯ್ ನಾಗೇಂದ್ರ ಸಹ ಉಪಸ್ಥಿತರಿದ್ದರು.

ಹುಲಿ ಜೊತೆಗೆ ಕುಳಿತುಕೊಂಡ ವಸಿಷ್ಠ ಸಿಂಹ

#goldenstarGanesh #GaneshMovie #GeethaMovie  #sandalwoodmovies  ‍#kannadasuddigalu

Tags