ಸುದ್ದಿಗಳು

11ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಗೋಲ್ಡನ್ ಗಣಿ ದಂಪತಿ!!

ಬೆಂಗಳೂರು,ಫೆ.11:

ಇಂದು ಗೋಲ್ಡನ್ ಸ್ಟಾರ್ ಗಣೇಶ್ ಪಾಲಿಗೆ ಅತ್ಯಂತ ವಿಶೇಷ ದಿನ. ಯಾಕಂದ್ರೆ, ಹನ್ನೊಂದು ವರ್ಷಗಳ ಹಿಂದೆ ಗಣೇಶ್-ಶಿಲ್ಪಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಇದೇ ದಿನ…

ಗಣೇಶ್-ಶಿಲ್ಪಾ ದಾಂಪತ್ಯ

2008ರಲ್ಲಿ ಶಿಲ್ಪಾ ರವರನ್ನು ಗಣಿ ಮದುವೆ ಆದರು. ಗಣೇಶ್ ಮದುವೆ ಅವರ ಅಭಿಮಾನಿಗಳಿಗಂತೂ ಶಾಕಿಂಗ್ ಹಾಗೂ ‘ಹಾರ್ಟ್ ಬ್ರೇಕಿಂಗ್ ನ್ಯೂಸ್’ ಆಗಿತ್ತು. ಒಂದು ಸುಳಿವೂ ಬಿಟ್ಟುಕೊಡದೆ ಗಣಿ ಮದುವೆ ಸಿಕ್ಕಾಪಟ್ಟೆ ಸದ್ದು ಮಾಡಿದ್ದಂತೂ ನಿಜ. ಗಣೇಶ್-ಶಿಲ್ಪಾ ವೈವಾಹಿಕ ಜೀವನ ಮಾತ್ರ ಖುಷಿ ಖುಷಿಯಾಗಿದೆ. ‘ಕಾಮನ್ ಫ್ರೆಂಡ್ ನಿಂದ ಇಬ್ಬರೂ ಪರಿಚಯ ಬೆಳೆದು, ಪರಿಚಯ ಆದ್ಮೇಲೆ ಫ್ರೆಂಡ್ ಶಿಪ್ ಆಗಿ ನಂತರ ಇಬ್ಬರೂ ವಿವಾಹವಾದರು..11 ವರ್ಷಗಳ ಗಣೇಶ್-ಶಿಲ್ಪಾ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಚಾರಿತ್ರ್ಯ ಹಾಗೂ ವಿಹಾನ್ ಎಂಬ ಮುದ್ದಾದ ಎರಡು ಮಕ್ಕಳಿದ್ದಾರೆ.

11ನೇ ವಿವಾಹ ವಾರ್ಷಿಕೋತ್ಸವ

ತಮ್ಮ 11ನೇ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಗಣೇಶ್ , ನನ್ನ ಸೌಲ್ ಮೇಟ್, ನನ್ನ ಗೆಳತಿ, ನನ್ನ ಮಾರ್ಗದರ್ಶಕಿಮ ನನ್ನ ಪ್ರೀತಿ, 11 ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು ಎಂದು ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ..

 

View this post on Instagram

 

You are my soulmate,my best friend,my guide,my love,❤️❤️ Anniversary 11,Happy anniversary my love 😍

A post shared by Ganesh (@goldenstar_ganesh) on

‘ಆನೆ ನಡೆದಿದ್ದೇ ದಾರಿ’ ಬಂದೇ ಬಿಟ್ಟ ‘ಯಜಮಾನ’..

#balkaninews #goldenstarganeshmovies #ganeshmarriageanniversary

 

Tags